For Quick Alerts
ALLOW NOTIFICATIONS  
For Daily Alerts

ಕಳೆದ 12 ತಿಂಗಳಲ್ಲಿ ಶೇ. 43ರಷ್ಟು ಭಾರತೀಯರಿಂದ ಚೀನಾ ಉತ್ಪನ್ನಗಳ ತಿರಸ್ಕಾರ

|

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನ್ಯದ ಸೈನಿಕರ ನಡುವಿನ ಘರ್ಷಣೆಗೆ ಒಂದು ವರ್ಷವೇ ಕಳೆದು ಹೋಗಿದೆ. ಆದರೆ ಇದೀಗ ಸಮೀಕ್ಷೆಯೊಂದರ ಪ್ರಕಾರ ಈ ಘಟನೆ ನಡೆದ ಬಳಿಕ ಶೇಕಡಾ 43 ರಷ್ಟು ಭಾರತೀಯರು ಕಳೆದ 12 ತಿಂಗಳಲ್ಲಿ ಯಾವುದೇ ಚೀನಾ ನಿರ್ಮಿತ ಉತ್ಪನ್ನಗಳನ್ನು ಖರೀದಿಸಿಲ್ಲ.

 

ಹೌದು ಭಾರತ-ಚೀನಾ ನಡುವಿನ ಗಡಿ ವಿವಾದ ಉದ್ವಿಗ್ನತೆ ಹೆಚ್ಚಾದ ಬಳಿಕ ಎರಡು ದೇಶದ ವ್ಯಹವಾರದ ಮೇಲೆ ಪರಿಣಾಮ ಬೀರಿದ್ದು, ಶೇಕಡಾ 40ಕ್ಕೂ ಹೆಚ್ಚು ಗ್ರಾಹಕರು ಮೇಡ್‌ ಇನ್ ಚೀನಾ ಉತ್ಪನ್ನಗಳನ್ನು ಖರೀದಿಸಲು ಹಿಂದೆ ಸರಿದಿದ್ದಾರೆ.

1 ವರ್ಷದಲ್ಲಿ ಶೇ. 43ರಷ್ಟು ಭಾರತೀಯರಿಂದ ಚೀನಾ ಉತ್ಪನ್ನಗಳ ತಿರಸ್ಕಾರ

ಲೋಕಲ್​ಸರ್ಕಲ್ಸ್​ನಿಂದ ಭಾರತದ 281 ಜಿಲ್ಲೆಗಳಿಂದ 18,000 ಮಂದಿಯ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಈ ಅಂಕಿ- ಅಂಶಗಳ ಪ್ರಕಾರ, ಕಳೆದ 12 ತಿಂಗಳಲ್ಲಿ ಶೇ 43ರಷ್ಟು ಭಾರತೀಯ ಗ್ರಾಹಕರು ಚೀನಾ ಉತ್ಪನ್ನವನ್ನು ಖರೀದಿ ಮಾಡಿಲ್ಲ. ಶೇಕಡಾ 34ರಷ್ಟು ಮಂದಿ ತಾವು ಒಂದೆರಡು ಚೀನಾ ಉತ್ಪನ್ನಗಳನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಶೇ 14ರಷ್ಟು ಮಂದಿ 3ರಿಂದ 5 ವಸ್ತುಗಳು, ಶೇ 7ರಷ್ಟು ಮಂದಿ 5ರಿಂದ 10 ವಸ್ತುಗಳು, ಶೇ 3ರಷ್ಟು ಮಂದಿ 10- 15 ಉತ್ಪನ್ನ, ಶೇ 1ರಷ್ಟು ಮಂದಿ 20ಕ್ಕೂ ಹೆಚ್ಚು, ಮತ್ತು ಇತರ ಶೇ 1ರಷ್ಟು ಮಂದಿ 15ರಿಂದ 20 ಪ್ರಾಡಕ್ಟ್​ಗಳನ್ನು ಖರೀದಿಸಿರುವುದಾಗಿ ಹೇಳಿದ್ದಾರೆ.

ವಿದ್ಯುತ್ ಯಂತ್ರೋಪಕರಣಗಳು, ವಸ್ತುಗಳು, ಔಷಧಗಳು ಸೇರಿದಂತೆ ಹಲವಾರು ಉತ್ಪನ್ನಗಳಿಗೆ ಭಾರತವು ಚೀನಾವನ್ನು ಅವಲಂಬಿಸಿದೆ. ಭಾರತದ ಮಧ್ಯಂತರ ಸರಕುಗಳ ಆಮದಿನಲ್ಲಿ ಚೀನಾದ ಪಾಲು ಶೇಕಡಾ 12 ರಷ್ಟಿದ್ದರೆ, ಬಂಡವಾಳ ಸರಕುಗಳಿಗೆ ಇದು ಶೇಕಡಾ 30 ಮತ್ತು ಅಂತಿಮ ಗ್ರಾಹಕ ಸರಕುಗಳಿಗೆ ಶೇ 26 ರಷ್ಟು ಅವಲಂಬಿಸಿದೆ.

English summary

Galwan Valley clash: 43% Indians Avoided Chinese Items In Last 12 Months

Indian and Chinese armies at Galwan Valley in Ladakh, a survey has found that 43 per cent Indians didn't buy any China-made products in the last 12 months.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X