For Quick Alerts
ALLOW NOTIFICATIONS  
For Daily Alerts

ಭಾರತದ ಟಾಪ್ ಟೆನ್ ಸಂತುಷ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು: ಎಲ್ಲಿದೆ ಕರ್ನಾಟಕ?

|

ಇದೇ ಮೊದಲ ಬಾರಿಗೆ ಭಾರತ ಹ್ಯಾಪಿನೆಸ್ 2020 ವರದಿ ಬಿಡುಗಡೆ ಮಾಡಲಾಗಿದೆ. ಭಾರತದ ಅತ್ಯಂತ ಸಂತುಷ್ಟ ಟಾಪ್ 10 ರಾಜ್ಯಗಳ ಪಟ್ಟಿಯಲ್ಲಿ ಪಂಜಾಬ್, ಗುಜರಾತ್ ಹಾಗೂ ಉತ್ತರಪ್ರದೇಶ ಸ್ಥಾನ ಪಡೆದುಕೊಂಡಿವೆ. ಅತ್ಯಂತ ಸಂತುಷ್ಟ ರಾಜ್ಯ ಎಂಬ ಶ್ರೇಯ ಮಿಜೋರಾಂ ಪಾಲಿಗೆ ದಕ್ಕಿದೆ. ನಂತರದ ಸ್ಥಾನಗಳಲ್ಲಿ ಪಂಜಾಬ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿವೆ.

 

ಈ ವರದಿಯನ್ನು ಪ್ರೊಫೆಸರ್ ರಾಜೇಶ್ ಕೆ ಪಿಳ್ಳಾನಿಯಾ ಬಿಡುಗಡೆ ಮಾಡಿದ್ದು, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವನ್ನು ಎಷ್ಟು ಸಂತುಷ್ಟವಾಗಿವೆ ಎಂಬುದರ ಆಧಾರದಲ್ಲಿ ಶ್ರೇಯಾಂಕ ನೀಡಲಾಗಿದೆ. ದೊಡ್ಡ ರಾಜ್ಯಗಳಲ್ಲಿ ಪಂಜಾಬ್, ಗುಜರಾತ್ ಮತ್ತು ತೆಲಂಗಾಣ ಟಾಪ್ ಮೂರು ಸ್ಥಾನಗಳಲ್ಲಿದ್ದರೆ, ಒಡಿಶಾ, ಉತ್ತರಾಖಂಡ್ ಮತ್ತು ಛತ್ತೀಸ್ ಗಢ ತಳಮಟ್ಟದಲ್ಲಿವೆ.

ಈ ಸಮೀಕ್ಷೆಯಲ್ಲಿ ಎಷ್ಟು ಮಂದಿ ಭಾಗಿ

ಈ ಸಮೀಕ್ಷೆಯಲ್ಲಿ ಎಷ್ಟು ಮಂದಿ ಭಾಗಿ

ಸಮೀಕ್ಷೆ ಪ್ರಕಾರ, ಕೊರೊನಾದಿಂದ ತೀವ್ರವಾಗಿ ಬಾಧಿತವಾಗಿರುವ ರಾಜ್ಯಗಳೆಂದರೆ ಮಹಾರಾಷ್ಟ್ರ, ದೆಹಲಿ ಹಾಗೂ ಹರ್ಯಾಣ. ಪುದುಚೆರಿ ಹಾಗೂ ಜಮ್ಮು ಮತ್ತು ಕಾಶ್ಮೀರ್ ಏರಿಳಿತ ಇಲ್ಲದಂತೆ ಇವೆ. ಮುಖ್ಯವಾಗಿ ಆರು ಅಂಶಗಳನ್ನು ಆಧಾರವಾಗಿ ಸಂತೋಷವನ್ನು ಅಳೆಯಲಾಗಿದೆ. ಉದ್ಯೋಗ, ಸಂಬಂಧ, ಆರೋಗ್ಯ, ದಾನ, ಧರ್ಮ, ಆಧ್ಯಾತ್ಮಿಕ ದೃಷ್ಟಿಕೋನ ಹಾಗೂ ಕೊರೊನಾ ಪರಿಣಾಮವನ್ನು ಇದಕ್ಕಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಭಾರತದ ಎಲ್ಲ ರಾಜ್ಯಗಳಿಂದ 16,950 ಮಂದಿ ಮಾರ್ಚ್- ಜುಲೈ ಮಧ್ಯೆ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಈ ಅಧ್ಯಯನದ ಪ್ರಕಾರ ಪುರುಷ ಅಥವಾ ಮಹಿಳೆ ಹಾಗೂ ಸಂತೋಷಕ್ಕೆ ಯಾವುದೇ ನೇರ ಸಂಬಂಧ ಇಲ್ಲ. ವೈವಾಹಿಕ ಸ್ಥಾನಮಾನ, ವಯಸ್ಸಿನ ಗುಂಪು, ಶಿಕ್ಷಣ, ಆದಾಯದ ಮಟ್ಟವು ಸಂತೋಷದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅವಿವಾಹಿತರಿಗಿಂತ ವಿವಾಹಿತರು ಹೆಚ್ಚು ಸಂತುಷ್ಟವಾಗಿದ್ದಾರೆ ಎಂದು ಇದರಿಂದ ಗೊತ್ತಾಗುತ್ತದೆ.

ಯಾವ ವಿಚಾರದಲ್ಲಿ ಯಾವ ರಾಜ್ಯ ಟಾಪ್
 

ಯಾವ ವಿಚಾರದಲ್ಲಿ ಯಾವ ರಾಜ್ಯ ಟಾಪ್

ಉದ್ಯೋಗದ ವಿಚಾರದಲ್ಲಿ ಅಸ್ಸಾಂ, ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪಂಜಾಬ್ ಮತ್ತು ಪುದುಚೆರಿ ಟಾಪ್ ಐದು ಸ್ಥಾನದಲ್ಲಿವೆ. ಸಂಬಂಧದ ವಿಚಾರಕ್ಕೆ ಪಂಜಾಬ್, ಕರ್ನಾಟಕ, ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಹಾಗೂ ಸಿಕ್ಕಿಂ ಮೊದಲ ಐದರ ಪಟ್ಟಿಯಲ್ಲಿವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಪಂಜಾಬ್, ಮಿಜೋರಾಂ ಮತ್ತು ಸಿಕ್ಕಿಂ ಟಾಪ್ ಐದು ಸಂತುಷ್ಟ ಸ್ಥಾನದಲ್ಲಿವೆ. ದಾನದ ವಿಚಾರಕ್ಕೆ ಅರುಣಾಚಲ ಪ್ರದೇಶ, ಲಡಾಕ್, ಆಂಧ್ರಪ್ರದೇಶ, ಮಿಜೋರಾಂ, ಕರ್ನಾಟಕ ಹಾಗೂ ಧಾರ್ಮಿಕ ಅಥವಾ ಆದ್ಯಾತ್ಮಿಕ ದೃಷ್ಟಿಕೋನಕ್ಕೆ ಸಿಕ್ಕಿಂ, ನಾಗಾಲ್ಯಾಂಡ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ತ್ರಿಪುರಾ ಮತ್ತು ಲಡಾಕ್ ಮೇಲಿನ ಸ್ತರದಲ್ಲಿವೆ.

ಟಾಪ್ ಟೆನ್ ಸಂತುಷ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶ

ಟಾಪ್ ಟೆನ್ ಸಂತುಷ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶ

ಹಾಗಿದ್ದರೆ ಭಾರತದಲ್ಲಿ ಟಾಪ್ ಹತ್ತು ಸಂತುಷ್ಟ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ಯಾವುವು ಎಂಬ ಪಟ್ಟಿ ಹೀಗಿದೆ:

* ಮಿಜೋರಾಂ

* ಪಂಜಾಬ್

* ಅಂಡಮಾನ್ ಮತ್ತು ನಿಕೋಬಾರ್

* ಪುದುಚೆರಿ

* ಸಿಕ್ಕಿಂ

* ಗುಜರಾತ್

* ಅರುಣಾಚಲಪ್ರದೇಶ

* ಲಕ್ಷದ್ವೀಪ

* ತೆಲಂಗಾಣ

* ಉತ್ತರಪ್ರದೇಶ

English summary

India Happiness Report 2020: Mizoram Top Of The List

Here is the India Happiness Report 2020. This is the first such report released in India. Mizoram top of the list.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X