For Quick Alerts
ALLOW NOTIFICATIONS  
For Daily Alerts

ಜಗತ್ತಿನಲ್ಲಿ ಅತಿ ಹೆಚ್ಚು ಶತಕೋಟ್ಯಧಿಪತಿಗಳನ್ನ ಹೊಂದಿರುವ 3ನೇ ರಾಷ್ಟ್ರ ಭಾರತ

|

ಪ್ರತಿಷ್ಠಿತ ಫೋರ್ಬ್ಸ್ ಬಿಲಿಯನೇರ್ಸ್‌ ಹೊಸ ಪಟ್ಟಿಯ ಪ್ರಕಾರ, ಅಮೆರಿಕಾ ಮತ್ತು ಚೀನಾ ನಂತರ ಭಾರತವು ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ಶತಕೋಟ್ಯಧಿಪತಿಗಳನ್ನು ಹೊಂದಿದೆ ಎಂಬುದು ಬಹಿರಂಗವಾಗಿದೆ.

 

ವಿಶ್ವದ ಶತಕೋಟ್ಯಾಧಿಪತಿಗಳ ಫೋರ್ಬ್ಸ್‌ನ 35 ನೇ ವಾರ್ಷಿಕ ಪಟ್ಟಿಯಲ್ಲಿ ಅಮೆಜಾನ್ ಸಿಇಒ ಮತ್ತು ಸ್ಥಾಪಕ ಜೆಫ್ ಬೆಜೋಸ್ ಸತತ ನಾಲ್ಕನೇ ವರ್ಷ ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಲಾ ಸಿಇಒ ಎಲೋನ್‌ ಮಸ್ಕ್‌ 2ನೇ ಸ್ಥಾನ ಪಡೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಆಗಿರುವುದರ ಜೊತೆಗೆ ವಿಶ್ವದ 10ನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಅತಿ ಹೆಚ್ಚು ಶತಕೋಟ್ಯಧಿಪತಿಗಳನ್ನ ಹೊಂದಿರುವ 3ನೇ ರಾಷ್ಟ್ರ ಭಾರತ

ಅಮೆಜಾನ್ ಷೇರುಗಳನ್ನು ಹೆಚ್ಚಿಸಿದ ಪರಿಣಾಮವಾಗಿ ಅವರ ನಿವ್ವಳ ಮೌಲ್ಯವು 177 ಬಿಲಿಯನ್ ಯುಎಸ್ ಡಾಲರ್ ಆಗಿದೆ, ಇದು ಒಂದು ವರ್ಷದ ಹಿಂದೆ 64 ಬಿಲಿಯನ್ ಡಾಲರ್ ಹೆಚ್ಚಾಗಿದೆ ಎಂದು ಫೋರ್ಬ್ಸ್ ಹೇಳಿದೆ.

ಭಾರತವು ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ಶತಕೋಟ್ಯಧಿಪತಿಗಳನ್ನು ಹೊಂದಿದ್ದು 140, ಜರ್ಮನಿಯು 136, ರಷ್ಯಾ 117ರಷ್ಟಿದೆ. ಏಷ್ಯಾ-ಪೆಸಿಫಿಕ್ ದೇಶಗಳ 1,149 ಶತಕೋಟ್ಯಾಧಿಪತಿಗಳು ಒಟ್ಟಾಗಿ 4.7 ಟ್ರಿಲಿಯನ್ ಯುಎಸ್ ಡಾಲರ್ ಮೌಲ್ಯವನ್ನು ಹೊಂದಿದ್ದರೆ, ಅಮೆರಿಕಾದ ಬಿಲಿಯನೇರ್ಸ್‌ ಒಟ್ಟು 4.4 ಟ್ರಿಲಿಯನ್ ಅಮೆರಿಕಾ ಡಾಲರ್ ಮೌಲ್ಯವನ್ನು ಹೊಂದಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ.

ಜಾಗತಿಕ ಪಟ್ಟಿಯಲ್ಲಿ, 40 ವರ್ಷ ವಯಸ್ಸಿನ 106 ಶತಕೋಟ್ಯಧಿಪತಿಗಳಿದ್ದಾರೆ. ಜರ್ಮನಿಯ 18ನೇ ವರ್ಷ ವಯಸ್ಸಿನ ಕೆವಿನ್ ಡೇವಿಡ್ ಲೆಹ್ಮನ್ ಜಾಗತಿಕವಾಗಿ ಅತಿ ಕಿರಿಯ ಬಿಲಿಯನೇರ್ ಆಗಿದ್ದಾರೆ.

English summary

India Has World's 3rd Highest Number Of Billionaires

India has the third highest number of billionaires in the world after the US and China, according to Forbes Magazine
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X