For Quick Alerts
ALLOW NOTIFICATIONS  
For Daily Alerts

ಭಾರತದಿಂದ ಬುದ್ದಿವಂತ ನಡೆ: ಅಗ್ಗದ ತೈಲವನ್ನು ಅಮೆರಿಕಾದಲ್ಲಿ ಸಂಗ್ರಹಿಸಿಡಲು ಪ್ಲಾನ್

|

ಕೊರೊನಾವೈರಸ್ ಜಗತ್ತಿನಲ್ಲಿ ಜಾಗತಿಕ ಬಿಕ್ಕಟ್ಟನ್ನು ಸೃಷ್ಟಿಸಿದ್ದು, ಲಾಕ್‌ಡೌನ್ ಹಲವು ಉದ್ಯಮಗಳಿಗೆ ಪೆಟ್ಟು ನೀಡಿರುವುದಲ್ಲದೆ ತೈಲ ಬೆಲೆ ದಾಖಲೆಯ ಕುಸಿತಕ್ಕೂ ಕಾರಣವಾಗಿದೆ. ಕಚ್ಚಾ ತೈಲ ಬೆಲೆ ಕುಸಿತವು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಗಳಿಗೆ ಬಂಪರ್ ಅವಕಾಶ ಮಾಡಿಕೊಟ್ಟಿದೆ.

ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ಹೀಗಾಗಿ ಭಾರತವು ಒಂದು ಅದ್ಭುತ ಯೋಜನೆಯನ್ನು ರೂಪಿಸಿದೆ. ಅಗ್ಗದ ಕಚ್ಚಾ ತೈಲವನ್ನು ಅಮೆರಿಕದಲ್ಲಿ ಠೇವಣಿ ಇಡುವುದು ಭಾರತದ ಯೋಜನೆಯಾಗಿದೆ. ವಾಸ್ತವವಾಗಿ, ಭಾರತದ ಸ್ವಂತ ತೈಲ ಶೇಖರಣಾ ಸೌಲಭ್ಯಗಳು ತುಂಬಿವೆ, ಈ ಕಾರಣದಿಂದ ಈಗ ಅಮೆರಿಕಾದಲ್ಲಿ ತೈಲ ನಿಕ್ಷೇಪಗಳನ್ನು ರಚಿಸುವ ಯೋಜನೆ ಇದೆ.

ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪ್ರಕಾರ, ಭಾರತದ ಯೋಜನೆ ಆಸ್ಟ್ರೇಲಿಯಾದಂತೆಯೇ ಇರಬಹುದು, ಕಳೆದ ತಿಂಗಳು ಯುಎಸ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್‌ನಲ್ಲಿ ಸಂಗ್ರಹಿಸಲು ಕಚ್ಚಾ ತೈಲ ಖರೀದಿಸುವ ಮೂಲಕ ತುರ್ತು ತೈಲ ಮೀಸಲು ನಿರ್ಮಿಸುವ ಯೋಜನೆಯನ್ನು ಘೋಷಿಸಿತು.

ತೈಲ ಬೆಲೆ 40 ಪರ್ಸೆಂಟ್ ಕುಸಿತ
 

ತೈಲ ಬೆಲೆ 40 ಪರ್ಸೆಂಟ್ ಕುಸಿತ

ಧರ್ಮೆಂದ್ರ ಪ್ರಧಾನ್ ಅವರ ಪ್ರಕಾರ, ಮತ್ತೊಂದು ದೇಶದಲ್ಲಿ ತೈಲ ನಿಕ್ಷೇಪವನ್ನು ಸೃಷ್ಟಿಸಲು ಕೆಲವು ಸಾಧ್ಯತೆಗಳನ್ನು ಅನ್ವೇಷಿಸಲಾಗುತ್ತಿದೆ. ಅಮೆರಿಕಾದಲ್ಲಿ, ಕಡಿಮೆ ಬೆಲೆಗೆ ಖರೀದಿಸುವ ಮೂಲಕ ಸ್ವಲ್ಪ ತೈಲವನ್ನು ಇಡಬಹುದು. 2020 ರಲ್ಲಿ ತೈಲ ಬೆಲೆಗಳು ಇಲ್ಲಿಯವರೆಗೆ 40 ಪರ್ಸೆಂಟ್‌ಕ್ಕಿಂತಲೂ ಕಡಿಮೆಯಾಗಿದೆ. ಆದರೆ ಕಳೆದ ಕೆಲವು ವಾರಗಳಲ್ಲಿ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಪೂರೈಕೆಯನ್ನು ಕಡಿಮೆ ಮಾಡಲು ಮಿತ್ರರಾಷ್ಟ್ರಗಳ ಪ್ರಯತ್ನದಿಂದಾಗಿ ಹೆಚ್ಚಾಗಿದೆ. ಭಾರತೀಯ ಸಂಸ್ಕರಣಾಗಾರಗಳು ಈಗಾಗಲೇ ತಮ್ಮ ವಾಣಿಜ್ಯ ಟ್ಯಾಂಕ್‌ಗಳು ಮತ್ತು ಪೈಪ್‌ಲೈನ್‌ಗಳನ್ನು ಸಂಸ್ಕರಿಸಿದ ಇಂಧನ ಮತ್ತು ತೈಲದಿಂದ ತುಂಬಿಸಿವೆ.

ತೈಲ ನಿಕ್ಷೇಪಗಳು

ತೈಲ ನಿಕ್ಷೇಪಗಳು

ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕ ಮತ್ತು ಆಮದುದಾರರಾಗಿರುವ ಭಾರತವು ಈಗಾಗಲೇ 5.33 ದಶಲಕ್ಷ ಟನ್ ತೈಲವನ್ನು ಸಂಗ್ರಹಿಸಿದೆ ಮತ್ತು ವಿಶ್ವದ ವಿವಿಧ ಭಾಗಗಳಲ್ಲಿನ ಹಡಗುಗಳಲ್ಲಿ ಸುಮಾರು 8.5 ರಿಂದ 9 ದಶಲಕ್ಷ ಟನ್ ತೈಲವನ್ನು ಇರಿಸಿದೆ ಎಂದು ಪ್ರಧಾನ್ ಹೇಳಿದ್ದಾರೆ. ಭವಿಷ್ಯದಲ್ಲಿ ಬಳಕೆಗಾಗಿ ಅಗ್ಗದ ತೈಲವನ್ನು ಹಡಗುಗಳಲ್ಲಿ ಸಂಗ್ರಹಿಸುವ ಮೂಲಕ ಭಾರತ ತನ್ನ ಕಚ್ಚಾ ತೈಲ ಆಮದು ಮಸೂದೆಯಲ್ಲಿ 25 ಸಾವಿರ ಕೋಟಿ ರುಪಾಯಿಗಳನ್ನು ಉಳಿಸಲು ಪ್ರಯತ್ನಿಸುತ್ತಿದೆ ಎಂದು ತೈಲ ಸಚಿವರ ಹೇಳಿಕೆ ಮೇ ಮೊದಲ ವಾರದಲ್ಲಿ ಬಂದಿತು. ಸಂಗ್ರಹಿಸಿದ ತೈಲಗಳು ಮತ್ತು ಉತ್ಪನ್ನಗಳು ಭಾರತದ ವಾರ್ಷಿಕ ಅಗತ್ಯಗಳಲ್ಲಿ ಸುಮಾರು 20 ಪರ್ಸೆಂಟ್‌ನಷ್ಟಿದೆ. ಅಂದಹಾಗೆ, ಭಾರತವು ತನ್ನ ತೈಲ ಅಗತ್ಯತೆಯ 80 ಪರ್ಸೆಂಟ್‌ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ.

ಹೊಸ ಶೇಖರಣಾ ಸೌಲಭ್ಯವನ್ನು ನಿರ್ಮಿಸಲು ಯೋಜನೆ

ಹೊಸ ಶೇಖರಣಾ ಸೌಲಭ್ಯವನ್ನು ನಿರ್ಮಿಸಲು ಯೋಜನೆ

ಅಮೆರಿಕಾದಂತಹ ದೇಶಗಳು ಮತ್ತು ಹಡಗುಗಳಲ್ಲಿ ತೈಲ ನಿಕ್ಷೇಪವನ್ನು ಹೊಂದಿರುವುದರ ಹೊರತಾಗಿ, ಸಾಮರ್ಥ್ಯವನ್ನು 6.5 ದಶಲಕ್ಷ ಟನ್‌ಗಳಿಗೆ ವಿಸ್ತರಿಸಲು ಹೊಸ ಕಾರ್ಯತಂತ್ರದ ಸಂಗ್ರಹವನ್ನು ನಿರ್ಮಿಸಲು ಭಾರತ ಯೋಜಿಸಿದೆ. ಈ ಸೌಲಭ್ಯಗಳನ್ನು ನಿರ್ಮಿಸುವಲ್ಲಿ ಜಾಗತಿಕ ಹೂಡಿಕೆದಾರರ ಭಾಗವಹಿಸುವಿಕೆಯ ಬಗ್ಗೆ ಭಾರತ ಉತ್ಸುಕವಾಗಿದೆ. ಭಾರತದ ಇಂಧನ ಬೇಡಿಕೆ ಏಪ್ರಿಲ್‌ನಲ್ಲಿ ಅರ್ಧದಷ್ಟು ಕಡಿಮೆಯಾಗಿದೆ, ಇದು 2007 ರ ನಂತರದ ಅತ್ಯಂತ ಕಡಿಮೆ.

English summary

India Looks To Store Cheap Oil In US

India is keen on capitalizing on low oil prices by hoarding more of the commodity. Planning to store in United states says oil minister
Story first published: Tuesday, May 26, 2020, 20:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more