For Quick Alerts
ALLOW NOTIFICATIONS  
For Daily Alerts

ಓಲಾ ತೆಕ್ಕೆಗೆ ಬಿತ್ತು ನೆದರ್ಲ್ಯಾಂಡ್ಸ್‌ನ ಸ್ಕೂಟರ್ ಸಂಸ್ಥೆ ಎಟರ್ಗೊ

|

ಭಾರತೀಯ ರೈಡ್ ಶೇರಿಂಗ್ ಆ್ಯಪ್ ಸಂಸ್ಥೆ ಓಲಾ, ನೆದರ್ಲ್ಯಾಂಡ್ಸ್‌ನ ಎಟರ್ಗೊ ಆ್ಯಪ್ ಸ್ಕೂಟರ್ ತಯಾರಿಕಾ ಸಂಸ್ಥೆಯನ್ನು ಖರೀದಿಸಿದೆ. ಪ್ರಶಸ್ತಿ ಪುರಸ್ಕೃತ ಆ್ಯಪ್ ಸ್ಕೂಟರ್ ಗಳಿಗಾಗಿ ಎಟರ್ಗೋ ಖ್ಯಾತಿ ಪಡೆದಿದ್ದು, 2021 ರ ವೇಳೆಗೆ ವಿದ್ಯುತ್ ಚಾಲಿತ ದ್ವಿಚಕ್ರವಾಹನಗಳನ್ನು ಭಾರತದ ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ.

 

ಭಾರತದಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರವಾಹನಗಳನ್ನು 2021 ರಲ್ಲಿ ಪರಿಚಯಿಸುವ ಉದ್ದೇಶ ಹೊಂದಿರುವ ಓಲಾ ಎಲೆಕ್ಟ್ರಿಕ್ ಸಂಸ್ಥೆ ವಿದ್ಯುತ್ ಚಾಲಿತ ವಾಹನಗಳನ್ನು ಹಾಗೂ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಪ್ರಾಯೋಗಿಕ ಕೆಲಸವನ್ನು ಈಗಾಗಲೇ ಹಲವು ನಗರಗಳಲ್ಲಿ ಪ್ರಾರಂಭಿಸಿದೆ.

ಓಲಾ ತೆಕ್ಕೆಗೆ ಬಿತ್ತು ನೆದರ್ಲ್ಯಾಂಡ್ಸ್‌ನ ಸ್ಕೂಟರ್ ಸಂಸ್ಥೆ ಎಟರ್ಗೊ

ವಿದ್ಯುತ್ ಹಾಗೂ ಡಿಜಿಟಲ್ ಸಂಪರ್ಕದ ಸಾಮರ್ಥ್ಯದಿಂದ ಮುಂದಿನ ದಿನಗಳಲ್ಲಿ ನಗರ ಪ್ರದೇಶಗಳಾದ್ಯಂತ ದ್ವಿಚಕ್ರ ವಾಹನಗಳು ಮಹತ್ವದ ಪಾತ್ರ ವಹಿಸಲಿದೆ. ಭಾರತದಲ್ಲಿ ಅತ್ಯುತ್ತಮ ವಿದ್ಯುತ್ ಚಾಲಿತ ವಾಹನಗಳು ತಯಾರಾಗಬೇಕಾಗಿರುವುದರಿಂದ ಇಂಜಿನಿಯರಿಂಗ್, ವಿನ್ಯಾಸ ಹಾಗೂ ಉತ್ಪಾದನೆಗೆ ಸಂಬಂಧಿಸಿದಂತೆ ಅತ್ಯುತ್ತಮವಾದ ಜಾಗತಿಕ ಸಾಮರ್ಥ್ಯಗಳನ್ನು ಕಟ್ಟಲು ಎದುರು ನೋಡುತ್ತಿದ್ದೇವೆ ಎಂದು ಓಲಾ ಎಲೆಕ್ಟ್ರಿಕ್ ನ ಸ್ಥಾಪಕ ಹಾಗೂ ಅಧ್ಯಕ್ಷ ಭವಿಶ್ ಅಗರ್ವಾಲ್ ತಿಳಿಸಿದ್ದಾರೆ.

ಇನ್ನು 2014 ರಲ್ಲಿ ಸ್ಥಾಪನೆಯಾಗಿರುವ ನೆದರ್ಲ್ಯಾಂಡ್ ನ ಎಟರ್ಗೊ ಆ್ಯಪ್ ಸ್ಕೂಟರ್ ತಯಾರಿಕಾ ಸಂಸ್ಥೆ ನವೀನ ಮಾದರಿಗಳ ವಿನ್ಯಾಸ ಹಾಗೂ ತಂತ್ರಜ್ಞಾನಗಳಿಗಾಗಿ ಜಾಗತಿಕ ಮಟ್ಟದಲ್ಲಿ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದೆ. ಎಟರ್ಗೊ ಆ್ಯಪ್ ಸ್ಕೂಟರ್ ತಯಾರಿಕಾ ಸಂಸ್ಥೆ 240 ಕಿ.ಮೀ ಸಂಚಾರದ ಸಾಮರ್ಥ್ಯವುಳ್ಳ ಬ್ಯಾಟರಿಗಳನ್ನು 2018 ರಲ್ಲಿ ತಯಾರಿಸಿತ್ತು.

ಜಗತ್ತು ಬದಲಾಗುತ್ತಿರುವಂತೆ ವಿದ್ಯುತ್ ಚಾಲಿತ ವಾಹನಗಳನ್ನೂ ಬದಲಾವಣೆ ಮಾಡುವುದಕ್ಕೆ ನಾವು ಓಲಾ ಎಲೆಟ್ರಿಕ್ ಜೊತೆ ಕೈ ಜೋಡಿಸಲು ಉತ್ಸುಕರಾಗಿದ್ದೆವೆ ಎಂದು ಎಟರ್ಗೊದ ಸಿಇಒ ಹಾಗೂ ಸಹ ಸಂಸ್ಥಾಪಕ ಬಾರ್ಟ್ ಜಾಕೋಬ್ಸ್ ರೋಸಿಯರ್ ತಿಳಿಸಿದ್ದಾರೆ.

ಆಮ್‌ಸ್ಟರ್‌ಡ್ಯಾಮ್ ಮೂಲದ ಸಂಸ್ಥೆಯು ತನ್ನ ಅನುಭವವನ್ನು ಉಲ್ಲೇಖಿಸಿದ್ದು, ಕಂಪನಿಯ ಬಿಡುಗಡೆಯ ಪ್ರಕಾರ, ಎಟರ್ಗೋ ಬಿವಿಯು ಟೆಸ್ಲಾ, ಫೆರಾರಿ, ಜಾಗ್ವಾರ್, ಬಿಎಂಡಬ್ಲ್ಯು ಮತ್ತು ಜನರಲ್ ಮೋಟಾರ್ಸ್ ಸೇರಿದಂತೆ ಪ್ರಮುಖ ವಾಹನ ಕಂಪನಿಗಳೊಂದಿಗೆ ಕೆಲಸ ಮಾಡಿದೆ.

English summary

India OLA Acquires Netherlands Based Etergo BV

India's Ola Electric Acquires Netherlands Based Etergo BV Electric Scooter Maker
Story first published: Wednesday, May 27, 2020, 20:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X