For Quick Alerts
ALLOW NOTIFICATIONS  
For Daily Alerts

ಇದು ದೇಶದ ಅತಿ ದೊಡ್ಡ ರಿಯಲ್ ಎಸ್ಟೇಟ್ ಡೀಲ್; ವ್ಯವಹಾರ 14,680 ಕೋಟಿಯದು

By ಅನಿಲ್ ಆಚಾರ್
|

ಭಾರತದ ರಿಯಲ್ ಎಸ್ಟೇಟ್ ವಲಯದಲ್ಲೇ ಅತಿ ದೊಡ್ಡ ವ್ಯವಹಾರವೊಂದು ನಡೆದಿದ್ದು, ಬೆಂಗಳೂರು ಮೂಲದ ಖಾಸಗಿ ಒಡೆತನದ ರಿಯಲ್ ಎಸ್ಟೇಟ್ ಹೂಡಿಕೆ, ನಿರ್ವಹಣೆ ಹಾಗೂ ಅಭಿವೃದ್ಧಿ ಕಂಪೆನಿ RMZ Corp 12.5 ಮಿಲಿಯನ್ ಚದರಡಿಯನ್ನು ಮಾರಾಟ ಮಾಡಿದೆ. ಅದರ ಒಟ್ಟು ರಿಯಲ್ ಎಸ್ಟೇಟ್ ಆಸ್ತಿ 67 ಮಿಲಿಯನ್ ಚದರಡಿ ಇದೆ.

ಅಂದ ಹಾಗೆ, ಮಾರಾಟ ಮಾಡಿರುವುದು ಬ್ರೂಕ್ ಫೀಲ್ಡ್ ಅಸೆಟ್ ಮ್ಯಾನೇಜ್ ಮೆಂಟ್ ನಿಂದ ನಿರ್ವಹಣೆ ಆಗುವ ಫಂಡ್ ಗೆ. ಅದು ಎಷ್ಟು ಮೊತ್ತಕ್ಕೆ ಗೊತ್ತಾ? 14,680 ಕೋಟಿ ರುಪಾಯಿ ಅಥವಾ 200 ಕೋಟಿ ಅಮೆರಿಕನ್ ಡಾಲರ್ ಗೆ. ಈ ವ್ಯವಹಾರದಲ್ಲಿ ಬೆಂಗಳೂರು ಹಾಗೂ ಚೆನ್ನೈನಲ್ಲಿನ ಆಯ್ದ 12.5 ಮಿಲಿಯನ್ ಚದರಡಿ ಆಸ್ತಿ ಒಳಗೊಂಡಿದೆ.

 

ಬೆಂಗಳೂರಿನ ಸರ್ಜಾಪುರದಲ್ಲಿ 15 ಎಕರೆ ಜಾಗ ಖರೀದಿಸಿದ ಗೋದ್ರೆಜ್ ಪ್ರಾಪರ್ಟೀಸ್

ಈ ವ್ಯವಹಾರದಲ್ಲಿ RMZ ಎಕೋವರ್ಲ್ಡ್ ನ 14 ಮಿಲಿಯನ್ ಚದರಡಿಯ ಭಾಗವೂ ಒಳಗೋಂಡಿದೆ. ಅಂದ ಹಾಗೆ 2020ರಲ್ಲಿ RMZ ಎಕೋವರ್ಲ್ಡ್ ಗೆ ULI ಏಷ್ಯಾ ಪೆಸಿಫಿಕ್ ಪ್ರಶಸ್ತಿ ಬಂದಿತ್ತು. ಏಷ್ಯಾ ಪೆಸಿಫಿಕ್ ನಲ್ಲೇ ಅತ್ಯುತ್ತಮ ರಿಯಲ್ ಎಸ್ಟೇಟ್ ಆಸ್ತಿ ಎಂಬ ಗರಿ ಅದಾಗಿತ್ತು.

ಇದು ದೇಶದ ಅತಿ ದೊಡ್ಡ ರಿಯಲ್ ಎಸ್ಟೇಟ್ ಡೀಲ್; ವ್ಯವಹಾರ 14,680 ಕೋಟಿ

ಇದರ ಜತೆಗೆ ಈ ಸಮೂಹದ ಜತೆಗೆ ಇರುವ ವ್ಯವಹಾರ CoWrks ಸಹ ಮಾರಾಟ ಮಾಡುವುದು ಒಳಗೊಂಡಿದೆ. RMZ ರಿಯಲ್ ಎಸ್ಟೇಟ್ ದೇಶದಲ್ಲಿ ಅತಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಈ ಕಂಪೆನಿಯ ಬಳಿ ಅಭಿವೃದ್ಧಿ ಪಡಿಸಲಾದ ಹಾಗೂ ಇನ್ನೂ ಆಗದ ಆಸ್ತಿಗಳು ಇದ್ದು, ಅವುಗಳ ಮೌಲ್ಯ 1000 ಕೋಟಿ ಅಮೆರಿಕನ್ ಡಾಲರ್ ಎನ್ನಲಾಗಿದೆ.

"RMZನಿಂದ ನಮ್ಮ ಮುಖ್ಯ ಪೋರ್ಟ್ ಫೋಲಿಯೋ ಇರುವ ಬೆಂಗಳೂರು ಹಾಗೂ ಚೆನ್ನೈನಲ್ಲಿ 2 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಹೊಸದಾಗಿ ಬಂಡವಾಳ ಸಂಗ್ರಹಿಸಲು ತೀರ್ಮಾನಿಸಲಾಯಿತು. ಈ ಹಿಂತೆಗೆತದ ನಂತರ ಜಾಗತಿಕ ಮಟ್ಟದಲ್ಲಿಯೇ ಶೂನ್ಯ ಸಾಲದ ರಿಯಲ್ ಎಸ್ಟೇಟ್ ಕಂಪೆನಿಯೆಂದರೆ RMZ. ಈ ವ್ಯವಹಾರದ ಮೂಲಕ ಮುಂದಿನ ಹಂತರ ನಮ್ಮ ಗುರಿ ತಲುಪುವ ಅವಕಾಶ ಹೆಚ್ಚಿದೆ. ಅದು RMZ 2.0 ವ್ಯಾಖ್ಯಾನ ಸಿಕ್ಕಿದೆ. ಭವಿಷ್ಯದಲ್ಲಿ ಒಂದು ದೊಡ್ಡ ಬದಲಾವಣೆ ತರಲಿದ್ದೇವೆ," ಎಂದು RMZ Corp ಅಧ್ಯಕ್ಷ ಮನೋಜ್ ಮೆಂಡಾ ಹೇಳಿದ್ದಾರೆ.

English summary

India's Biggest Ever Real Estate Deal: RMZ Corp Sells It's Assets To Brookfield For 14680 Crore

This is India's biggest ever real estate deal. RMZ corp sells 12.5 million sq ft real estate assets to Brookfield.
Company Search
COVID-19