For Quick Alerts
ALLOW NOTIFICATIONS  
For Daily Alerts

'ಭಾರತದ ಆರ್ಥಿಕತೆ ಪ್ರಬಲವಾಗಿದೆ: ಜಾಗತಿಕ ಉದ್ಯಮಿಗಳು ಹೂಡಿಕೆ ಮಾಡಬಹುದು'

|

ನವದೆಹಲಿ: ಭಾರತದ ಆರ್ಥಿಕತೆಯು ರಚನಾತ್ಮಕವಾಗಿ ಪ್ರಬಲವಾಗಿರುವುದರಿಂದ ಜಾಗತಿಕ ಉದ್ಯಮಿಗಳು ಮುಂದೆ ಬಂದು ಹೂಡಿಕೆ ಮಾಡುವಂತೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಸಲಹೆ ನೀಡಿದ್ದಾರೆ.

ವೆಬಿನಾರ್ ಒಂದರಲ್ಲಿ ಮಾತನಾಡಿರುವ ಅವರು, ಸ್ಥಳೀಯ ಕಂಪನಿಗಳ ಹೂಡಿಕೆಯು ಭಾರತಕ್ಕೆ ಹಣವನ್ನು ಹಾಕಲು ವಿದೇಶಿ ಕಂಪನಿಗಳಲ್ಲಿ ವಿಶ್ವಾಸವನ್ನು ತುಂಬುತ್ತದೆ ಎಂದು ಹೇಳಿದ ಅವರು ನಾವು ಕೆಲವು ದೇಶಗಳಲ್ಲಿ ಕಡಿಮೆ ಕಾರ್ಪೊರೇಟ್ ತೆರಿಗೆ ದರಗಳ ಬಗ್ಗೆ ಮಾತನಾಡುತ್ತಿದ್ದೆವು. ಕಳೆದ ವರ್ಷ ನಾವು ಅದನ್ನು ಮಾಡಿದ್ದೇವೆ. ಐತಿಹಾಸಿಕ ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 30 ರಿಂದ ಕೇವಲ 15 ಕ್ಕೆ ಇಳಿಸಲಾಗಿದೆ ಎಂದು ಹೇಳಿದ್ದಾರೆ.

'ಕೇಂದ್ರದಿಂದ ನೇರ ಹಣಕಾಸು ಇಲ್ಲ; ಪ್ರಚಾರದಿಂದ ಹೊಟ್ಟೆ ತುಂಬಲ್ಲ'

 

"ಈಗ ಜಗತ್ತಿಗೆ ತೋರಿಸುವುದು ಮತ್ತು ಹೂಡಿಕೆ ಮಾಡುವುದು ಭಾರತೀಯ ಉದ್ಯಮ ಮತ್ತು ಭಾರತೀಯ ಕಾರ್ಪೊರೇಟ್‌ಗಳಿಗೆ ಬಿಟ್ಟದ್ದು. ಮೊದಲ ಹೂಡಿಕೆ ಭಾರತೀಯ ಕೈಗಾರಿಕೆಗಳಿಂದಲೇ ಮನೆಯಲ್ಲಿಯೇ ಪ್ರಾರಂಭವಾಗಬೇಕು, ಅದು ಭಾರತದಲ್ಲಿ ಹೂಡಿಕೆ ಮಾಡಲು ವಿದೇಶಿ ಕಂಪನಿಗಳಿಗೆ ಹೆಚ್ಚಿನ ವಿಶ್ವಾಸವನ್ನು ತರುತ್ತದೆ ಎಂದಿದ್ದಾರೆ.

'ಪ್ಲಗ್ ಅಂಡ್ ಪ್ಲೇ' ಮೋಡ್‌

'ಪ್ಲಗ್ ಅಂಡ್ ಪ್ಲೇ' ಮೋಡ್‌

ಆರ್ಥಿಕತೆಯನ್ನು 'ಕಮಾಂಡ್ ಅಂಡ್ ಕಂಟ್ರೋಲ್' ಮೋಡ್‌ನಿಂದ ಪರಿವರ್ತಿಸಿ ಅದನ್ನು 'ಪ್ಲಗ್ ಅಂಡ್ ಪ್ಲೇ' ಮೋಡ್‌ನತ್ತ ಕೊಂಡೊಯ್ಯುವುದು" ಎಂದು ಠಾಕೂರ್ ಹೇಳಿದರು. ಉದ್ಯಮವು ಬಂಡವಾಳ ರಚನೆಯಿಂದ ದೂರ ಸರಿದಿರುವ ಕಾರಣ ಕಳೆದ ಕೆಲವು ವರ್ಷಗಳಿಂದ ಖಾಸಗಿ ಹೂಡಿಕೆ ಮ್ಯೂಟ್ ಆಗಿದೆ ಎಂದರು.

ಕಂಪೆನಿ ಕಾನೂನಿನ 58 ವಿಭಾಗ ನ್ಯಾಯಸಮ್ಮತ

ಕಂಪೆನಿ ಕಾನೂನಿನ 58 ವಿಭಾಗ ನ್ಯಾಯಸಮ್ಮತ

ಈ ಕಷ್ಟದ ಸಮಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಮಾತನಾಡಿದ ಅವರು, ಕಂಪೆನಿ ಕಾನೂನಿನ 58 ವಿಭಾಗಗಳನ್ನು ನ್ಯಾಯಸಮ್ಮತಗೊಳಿಸಲಾಗಿದ್ದು, ದಿವಾಳಿತನದ ವಿಚಾರಣೆಯನ್ನು ಪ್ರಾರಂಭಿಸುವ ಮಿತಿ 1 ಲಕ್ಷ ರೂ.ಗಳಿಂದ 1 ಕೋಟಿ ರೂ.ಗೆ ಏರಿಸಲಾಗಿದೆ ಎಂದರು.

ಕಲ್ಲಿದ್ದಲು ಗಣಿಗಾರಿಕೆಗೆ ಅವಕಾಶ
 

ಕಲ್ಲಿದ್ದಲು ಗಣಿಗಾರಿಕೆಗೆ ಅವಕಾಶ

ಸುಧಾರಣೆಗಳಿಗೆ ಸಂಬಂಧಿಸಿದಂತೆ, ರಕ್ಷಣಾ ಉತ್ಪಾದನೆಗೆ ವಿದೇಶಿ ನೇರ ಹೂಡಿಕೆ ಸೀಲಿಂಗ್ ಅನ್ನು ಶೇಕಡಾ 74 ಕ್ಕೆ ಉದಾರೀಕರಣಗೊಳಿಸಲಾಗಿದ್ದು, ಖಾಸಗಿ ವಲಯದವರಿಗೆ ಕಲ್ಲಿದ್ದಲು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ಠಾಕೂರ್ ಹೇಳಿದ್ದಾರೆ.

ಎರಡು ದಶಕಗಳ ಸುಧಾರಣೆ ಎರಡು ವಾರಗಳ ಅವಧಿಯಲ್ಲಿ

ಎರಡು ದಶಕಗಳ ಸುಧಾರಣೆ ಎರಡು ವಾರಗಳ ಅವಧಿಯಲ್ಲಿ

ಕಲ್ಲಿದ್ದಲಿನ ಗಣಿಗಾರಿಕೆಗಾಗಿ ಕಳೆದ 15 ದಿನಗಳಲ್ಲಿ 1,400 ಕ್ಕೂ ಹೆಚ್ಚು ಬಿಡ್‌ದಾರರು ಆಸಕ್ತಿ ತೋರಿಸಿದ್ದಾರೆ. ಇದು ಕಲ್ಲಿದ್ದಲು ವಲಯದಲ್ಲಿ ಮಾತ್ರ ಆಮದನ್ನು ಶೇಕಡಾ 60 ರಷ್ಟು ಇಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಈ ವಾರದ ಆರಂಭದಲ್ಲಿ, ಕೃಷಿ ಕ್ಷೇತ್ರದಲ್ಲಿ 1 ಲಕ್ಷ ಕೋಟಿ ರೂ.ಗಳ ಹೂಡಿಕೆಗೆ ಕ್ಯಾಬಿನೆಟ್ ಅನುಮೋದನೆ ನೀಡಿತು, ಇದು ಬೆಳವಣಿಗೆಗೆ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ನೀವು ಇದನ್ನು ನೋಡಿದರೆ, ಎರಡು ದಶಕಗಳ ಸುಧಾರಣೆಗಳನ್ನು ಎರಡು ವಾರಗಳ ಅವಧಿಯಲ್ಲಿ ಕೈಗೊಳ್ಳಲಾಯಿತು ಎಂದಿದ್ದಾರೆ.

English summary

India's Economy Is Structurally Strong Global Investors Should Come Forward Says Anurag Singh Thakur

India's Economy Is Structurally Strong Global Investors Should Come Forward Says Anurag Singh Thakur
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more