For Quick Alerts
ALLOW NOTIFICATIONS  
For Daily Alerts

ವಿದೇಶಿ ವಿನಿಮಯ ಸಂಗ್ರಹ ದಾಖಲೆಯ ಏರಿಕೆ: $608.08 ಬಿಲಿಯನ್

|

ಇತ್ತೀಚೆಗಷ್ಟೇ ಸಾರ್ವಕಾಲಿಕ ದಾಖಲೆಯ ಮಟ್ಟ ತಲುಪಿದ್ದ ಭಾರತದ ವಿದೇಶಿ ವಿನಿಮಯ ಸಂಗ್ರಹವು ಜೂನ್‌ 11ಕ್ಕೆ ಕೊನೆಗೊಂಡ ವಾರದಲ್ಲಿ ಮತ್ತೊಂದು ದಾಖಲೆಯನ್ನ ಮುಟ್ಟಿದೆ.

 

ಭಾರತದ ವಿದೇಶಿ ವಿನಿಮಯ ಸಂಗ್ರಹ ದಾಖಲೆಯ ಮಟ್ಟದಲ್ಲಿದ್ರೂ, RBI ಸಂತೋಷಗೊಂಡಿಲ್ಲ!

ಜೂನ್ 11 ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹವು 3.074 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿ ದಾಖಲೆಯ ಗರಿಷ್ಠ 608.081 ಬಿಲಿಯನ್ ಡಾಲರ್ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಇತ್ತೀಚಿನ ಅಂಕಿ ಅಂಶಗಳು ಶುಕ್ರವಾರ ತೋರಿಸಿದೆ.

ವಿದೇಶಿ ವಿನಿಮಯ ಸಂಗ್ರಹ ದಾಖಲೆಯ ಏರಿಕೆ: $608.08 ಬಿಲಿಯನ್

2021 ರ ಜೂನ್ 4 ಕ್ಕೆ ಕೊನೆಗೊಂಡ ಹಿಂದಿನ ವಾರದಲ್ಲಿ ವಿದೇಶಿ ವಿನಿಮಯ ಮೀಸಲು 6.842 ಬಿಲಿಯನ್ ಡಾಲರ್‌ ಹೆಚ್ಚಾಗಿ 605.008 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ. ಒಟ್ಟಾರೆ ಮೀಸಲುಗಳ ಪ್ರಮುಖ ಅಂಶವಾದ ವಿದೇಶಿ ಕರೆನ್ಸಿ ಆಸ್ತಿಗಳ (ಎಫ್‌ಸಿಎ) ಹೆಚ್ಚಳದಿಂದಾಗಿ ಮೀಸಲು ಹೆಚ್ಚಳವಾಗಿದೆ ಎಂದು ಆರ್‌ಬಿಐನ ಡೇಟಾ ತೋರಿಸಿದೆ.

ಆರ್‌ಬಿಐ ಅಂಕಿ ಅಂಶಗಳ ಪ್ರಕಾರ ಎಫ್‌ಸಿಎ 2.567 ಬಿಲಿಯನ್ ಡಾಲರ್‌ನಿಂದ 563.457 ಬಿಲಿಯನ್ ಡಾಲರ್‌ಗೆ ಏರಿದೆ.

English summary

India's Forex Reserves Up $3.07 Billion To Lifetime High Of $608.08 billion

The country's foreign exchange reserves surged by USD 3.074 billion to reach a record high of USD 608.081 billion in the week ended June 11
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X