For Quick Alerts
ALLOW NOTIFICATIONS  
For Daily Alerts

SBI VRS ಸ್ಕೀಮ್ ಒಂದು ಕಡೆ, 14 ಸಾವಿರಕ್ಕೂ ಹೆಚ್ಚು ಮಂದಿ ನೇಮಕ ಮತ್ತೊಂದು ಕಡೆ

|

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಸೃಷ್ಟಿಯಾಗಿರುವ ಬೇಡಿಕೆಯಿಂದಾಗಿ ಉದ್ಯೋಗಕ್ಕೆ ಹುಡುಕುತ್ತಿರುವವರ ಸಂಖ್ಯೆ ವಿಪರೀತ ಹೆಚ್ಚಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 14,000ಕ್ಕೂ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಲಾಗಿದೆ. ಈ ಮಧ್ಯೆ ರೂಪಿಸುತ್ತಿರುವ ವಿಆರ್ ಎಸ್ ಸ್ಕೀಮ್ ಅನ್ನು ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಎಂದು ಭಾವಿಸದಂತೆ ತಿಳಿಸಿದೆ.

SBI VRS Scheme 2020 ಸಿದ್ಧ: ಎಷ್ಟು ಮಂದಿ ಮನೆಗೆ, ಅದೆಷ್ಟು ಉಳಿತಾಯ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಆರ್ ಎಸ್ ಸ್ಕೀಮ್ ಅನ್ನು ಮಾಧ್ಯಮಗಳು ವೆಚ್ಚವನ್ನು ತಗ್ಗಿಸುವ ಪ್ರಯತ್ನ ಎಂದು ವರದಿ ಮಾಡಿವೆ. ಬ್ಯಾಂಕ್ ನ ಉದ್ದೇಶ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡುವುದು ಹಾಗೂ ಎಂದಿವೆ. ಎಸ್ ಬಿಐ ಯಾವಾಗಲೂ ಉದ್ಯೋಗಿಸ್ನೇಹಿ. ತನ್ನ ಕಾರ್ಯಚಟುವಟಿಕೆಯ ವಿಸ್ತರಣೆ ಮಾಡುತ್ತಿದೆ. ಅದಕ್ಕಾಗಿ ಜನರ ಅಗತ್ಯ ಇದೆ. ಅದಕ್ಕೆ ಸಾಕ್ಷ್ಯ ಎಂಬಂತೆ ಹದಿನಾಲ್ಕು ಸಾವಿರಕ್ಕೂ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

SBI VRS ಸ್ಕೀಮ್ ಒಂದು ಕಡೆ, 14,000 ಮಂದಿ ನೇಮಕ ಮತ್ತೊಂದು ಕಡೆ

 

ವೃತ್ತಿಪರ ಬೆಳವಣಿಗೆ, ವರ್ಗಾವಣೆ, ಆರೋಗ್ಯ, ಕೌಟುಂಬಿಕ ಕಾರಣಗಳು ಹೀಗೆ ಯಾವುದೇ ಸಮಸ್ಯೆಗಳು ಇರುವವರಿಗೆ ಈಗಿನ ವಿಆರ್ ಸ್ಕೀಮ್ ನಿಂದ ಅನುಕೂಲ ಆಗಲಿ ಎಂಬುದು ಎಸ್ ಬಿಐ ಉದ್ದೇಶ. ಉದ್ಯೋಗಿಗಳ ಕಡೆಗಿನ ನಮ್ಮ ಬದ್ಧತೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ನ್ಯಾಷನಲ್ ಅಪ್ರೆಂಟೀಸ್ ಶಿಪ್ ಸ್ಕೀಮ್ ಆಫ್ ಗವರ್ನಮೆಂಟ್ ಆಫ್ ಇಂಡಿಯಾದ ಅಡಿಯಲ್ಲಿ ಅಪ್ರೆಂಟೀಸ್ ಗಳನ್ನು ತೆಗೆದುಕೊಳ್ಳುತ್ತಿರುವ ದೇಶದ ಏಕೈಕ ಬ್ಯಾಂಕ್ ಎಸ್ ಬಿಐ ಎಂದು ತಿಳಿಸಿದೆ.

English summary

India's Largest Bank SBI To Add 14000 To Work Force in 2020

State Bank Of India announced that, bank will add 14,000 people to work force. And it's VRS scheme should not see as cost cutting drive.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X