ಈ 6 ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ 1,13,018.94 ಕೋಟಿ ರು. ಹೆಚ್ಚಳ
ಭಾರತದ ಅತ್ಯಂತ ಮೌಲ್ಯಯುತ 10 ಕಂಪೆನಿಗಳ ಪೈಕಿ 6ರ ಮಾರುಕಟ್ಟೆ ಬಂಡವಾಳ ಮೌಲ್ಯ ಕಳೆದ ವಾರ 1,13,018.94 ಕೋಟಿ ರುಪಾಯಿ ಹೆಚ್ಚಳವಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಭಾರ್ತಿ ಏರ್ ಟೆಲ್ ಅತಿದೊಡ್ಡ ಗೇಯ್ನರ್ಸ್ ಆಗಿ ಹೊರಹೊಮ್ಮಿವೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಎಚ್ ಡಿಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್ ಮತ್ತು ಭಾರ್ತಿ ಏರ್ ಟೆಲ್ ಗೇಯ್ನರ್ಸ್ ಗಳಾಗಿವೆ.
ಜನವರಿ ತಿಂಗಳ ಮೊದಲ 15 ದಿನಗಳಲ್ಲಿ FPI 14,866 ಕೋಟಿ ರು. ಹೂಡಿಕೆ
ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್, ಎಚ್ ಡಿಎಫ್ ಸಿ, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಕಂಪೆನಿಗಳ ಮಾರುಕಟ್ಟೆ ಮೌಲ್ಯ ಇಳಿಕೆ ಆಗಿದೆ.
ಯಾವ ಕಂಪೆನಿಯ ಷೇರುಗಳ ಮಾರುಕಟ್ಟೆ ಮೌಲ್ಯ ಎಷ್ಟು ಜಾಸ್ತಿಯಾಗಿದೆ?
ಟಿಸಿಎಸ್ 42,495.76 ಕೋಟಿ ರುಪಾಯಿ
ಭಾರ್ತಿ ಏರ್ ಟೆಲ್ 33,960.84 ಕೋಟಿ ರುಪಾಯಿ
ಎಚ್ ಡಿಎಫ್ ಸಿ ಬ್ಯಾಂಕ್ 19,001.41 ಕೋಟಿ ರುಪಾಯಿ
ಇನ್ಫೋಸಿಸ್ 14,184.43 ಕೋಟಿ ರುಪಾಯಿ
ರಿಲಯನ್ಸ್ ಇಂಡಸ್ಟ್ರೀಸ್ 2,884.44 ಕೋಟಿ ರುಪಾಯಿ
ಐಸಿಐಸಿಐ ಬ್ಯಾಂಕ್ 492.06 ಕೋಟಿ ರುಪಾಯಿ
ಯಾವ ಕಂಪೆನಿಯ ಷೇರುಗಳ ಮಾರುಕಟ್ಟೆ ಮೌಲ್ಯ ಎಷ್ಟು ಇಳಿಕೆಯಾಗಿದೆ?
ಕೊಟಕ್ ಮಹೀಂದ್ರಾ ಬ್ಯಾಂಕ್ 21,171.32 ಕೋಟಿ ರುಪಾಯಿ
ಬಜಾಜ್ ಫೈನಾನ್ಸ್ 12,000.53ಕೋಟಿ ರುಪಾಯಿ
ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ 9,034.04 ಕೋಟಿ ರುಪಾಯಿ
ಎಚ್ ಡಿಎಫ್ ಸಿ 3,861.42 ಕೋಟಿ ರುಪಾಯಿ