For Quick Alerts
ALLOW NOTIFICATIONS  
For Daily Alerts

ಆಹಾರ ಪದಾರ್ಥಗಳ ಬೆಲೆ ಹೆಚ್ಚಳ : ಫೆಬ್ರವರಿಯಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ. 5.03ಕ್ಕೆ ಏರಿಕೆ

|

ಆಹಾರ ಬೆಲೆಗಳ ಏರಿಕೆಯ ಪರಿಣಾಮವಾಗಿ ಫೆಬ್ರವರಿಯಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು ಶೇಕಡಾ 5.03 ಕ್ಕೆ ಏರಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

 

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಜನವರಿ 2021 ರಲ್ಲಿ ಶೇ 4.06 ರಷ್ಟಿತ್ತು ಮತ್ತು 2021 ರ ಫೆಬ್ರವರಿಯಲ್ಲಿ ಶೇ 4.83ಕ್ಕೆ ಏರಿಕೆಯಾಗಿದೆ. ಫೆಬ್ರವರಿಯಲ್ಲಿ ಆಹಾರ ಹಣದುಬ್ಬರವು ಶೇಕಡಾ 3.87 ಕ್ಕೆ ಏರಿಕೆಯಾಗಿದ್ದು, ಹಿಂದಿನ ತಿಂಗಳಲ್ಲಿ ಇದು 1.89 ರಷ್ಟಿತ್ತು.

ಇನ್ನು ಗ್ರಾಹಕ ಬೆಲೆ ಸೂಚ್ಯಂಕದ ಬೆಳವಣಿಗೆಯನ್ನು ಅಳೆಯುವ ಪ್ರಮುಖ ಹಣದುಬ್ಬರವು ಹಿಂದಿನ ತಿಂಗಳಲ್ಲಿ ಶೇ 5.7 ರಷ್ಟಿದ್ದರೆ ಈಗ ಅದು ಶೇ 5.8 ರಷ್ಟಿದೆ.

ಫೆಬ್ರವರಿಯಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ. 5.03ಕ್ಕೆ ಏರಿಕೆ

ಇದರ ನಡುವೆ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (ಎಂಒಎಸ್‌ಪಿಐ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ,. ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಜನವರಿ 2021 ಕ್ಕೆ ಶೇಕಡಾ 1.6 ರಷ್ಟು ಸಂಕುಚಿತಗೊಂಡಿದೆ ಎಂದು ಹೇಳಲಾಗಿದೆ.

ಕೈಗಾರಿಕಾ ಉತ್ಪಾದನೆಯು 2020 ರ ಡಿಸೆಂಬರ್‌ನಲ್ಲಿ ಶೇಕಡಾ 1 ರಿಂದ ಮತ್ತು 2021 ರ ಜನವರಿಯಲ್ಲಿ ಶೇಕಡಾ 2 ರಷ್ಟು ಏರಿಕೆಯಾಗಿದೆ.

English summary

India's Retail inflation rises to 5.03% in February; IIP contracts 1.6% in Jan: Govt data

Retail inflation rose 5.03 per cent in February 2021, owing to higher food and fuel prices, government data showed on Friday
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X