For Quick Alerts
ALLOW NOTIFICATIONS  
For Daily Alerts

ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರ ಏರಿಕೆ: CMIE

|

ದೇಶಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರ ಏರಿಕೆಯಾಗಿದ್ದು, ಜುಲೈ 25 ಕ್ಕೆ ಕೊನೆಗೊಂಡ ವಾರದಲ್ಲಿ ಇದು ಶೇಕಡಾ 6.75ರಷ್ಟು ಹೆಚ್ಚಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ಯ ಹೊಸ ಅಂಕಿ ಅಂಶಗಳು ತಿಳಿಸಿವೆ.

 

ಒಂದು ವಾರದ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರವು ಶೇಕಡಾ 5.1 ರಷ್ಟಿತ್ತು. ಆದರೆ ಇದೀಗ ಶೇಕಡಾ 6.75ಕ್ಕೆ ಏರಿಕೆಗೊಂಡಿದೆ. ಇನ್ನು ನಗರ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗೆ ಹೆಚ್ಚಾಗಿ ತೆರೆದಿರುವ ಪರಿಣಾಮ ನಿರುದ್ಯೋಗ ದರವು ರಾಷ್ಟ್ರೀಯ ಮತ್ತು ಗ್ರಾಮೀಣ ಸರಾಸರಿಗಿಂತ ಹೆಚ್ಚಾಗಿದೆ. ಜುಲೈ 25ಕ್ಕೆ ಕೊನೆಗೊಂಡ ವಾರದ ನಿರುದ್ಯೋಗ ದರವು ಒಂದು ವಾರದ ಹಿಂದೆ ಇದೇ ಅವಧಿಯಲ್ಲಿ ಶೇ. 7.94 ರಿಂದ 8.01ಕ್ಕೆ ಏರಿದೆ.

ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರ ಏರಿಕೆ: CMIE

ಜುಲೈನಲ್ಲಿನ ನಿರುದ್ಯೋಗ ಸನ್ನಿವೇಶವು ಹಿಂದಿನ ಮೂರು ತಿಂಗಳುಗಳಿಗಿಂತ ಉತ್ತಮವಾಗಿದ್ದರೂ, ಭಾರತವು ಕೊರೊನಾ ಸಾಂಕ್ರಾಮಿಕದ ಎರಡನೇ ತರಂಗವನ್ನು ಎದುರಿಸುತ್ತಿದೆ. ಜುಲೈ ಆರಂಭದಿಂದಲೂ, ನಗರ ಭಾರತದಲ್ಲಿ ನಿರುದ್ಯೋಗ ದರವು ಶೇ. 9ಕ್ಕಿಂತ ಕಡಿಮೆಯಿದೆ, ಇದು ರಾಷ್ಟ್ರೀಯ ಮಟ್ಟದಲ್ಲಿ ಶೇ. 8 ಕ್ಕಿಂತ ಕಡಿಮೆ. ಅದೇ ಸಮಯದಲ್ಲಿ, ಜೂನ್‌ನಲ್ಲಿ, ಮಾಸಿಕ ನಿರುದ್ಯೋಗ ದರವು ರಾಷ್ಟ್ರೀಯವಾಗಿ ಶೇ. 9.17, ನಗರ ಭಾರತದಲ್ಲಿ ಶೇ. 10.07ರಷ್ಟು ಮತ್ತು ಗ್ರಾಮೀಣ ಭಾರತದಲ್ಲಿ ಶೇ. 8.75ರಷ್ಟು ಆಗಿತ್ತು.

ಮಾನ್ಸೂನ್ ಪ್ರಗತಿ ಮತ್ತು ಔಪಚಾರಿಕ ಮತ್ತು ಅನೌಪಚಾರಿಕ ಕ್ಷೇತ್ರಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ತೆರೆಯುವುದರಿಂದ ಜುಲೈ ತಿಂಗಳಲ್ಲಿ ನಿರುದ್ಯೋಗ ದರವು ಹಿಂದಿನ ತಿಂಗಳಿಗಿಂತ ಕಡಿಮೆಯಾಗಿದೆ.

English summary

India's Unemployment Rate Rises Sharply In Rural Areas: CMIE Data

India's unemployment rate has spiked in rural areas across the country, rising from 6.75 per cent in the week ended July 25, according to CMIE report.
Story first published: Monday, July 26, 2021, 17:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X