For Quick Alerts
ALLOW NOTIFICATIONS  
For Daily Alerts

ಮುಂದಿನ 5 ವರ್ಷದಲ್ಲಿ ಭಾರತ ಬಹುದೊಡ್ಡ ವಾಹನ ಉತ್ಪಾದನಾ ಕೇಂದ್ರವಾಗಲಿದೆ: ನಿತಿನ್ ಗಡ್ಕರಿ

|

ಮುಂಬರುವ ಐದು ವರ್ಷಗಳಲ್ಲಿ ಭಾರತವು ಬಹುದೊಡ್ಡ ಆಟೊಮೊಬೈಲ್ ತಾಣವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ, ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ವಲಯದಲ್ಲಿ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.

 

ಏರ್‌ಬ್ಯಾಗ್ ಕಡ್ಡಾಯಗೊಳಿಸಿದ ಹಿನ್ನೆಲೆ: ಹೊಸ ಕಾರುಗಳ ಬೆಲೆ ಹೆಚ್ಚಳವಾಗಲಿದೆ!

"ಸೌರಶಕ್ತಿ ಲಭ್ಯವಾಗುವಂತೆ ಮಾಡುವ ಮೂಲಕ ನಾವು ಎಲೆಕ್ಟ್ರಿಕ್ ವಾಹನಗಳಿಗೆ ದೊಡ್ಡ ಮಾರುಕಟ್ಟೆಯನ್ನು ರಚಿಸುತ್ತೇವೆ" ಎಂದು ಗಡ್ಕರಿ ಹೇಳಿದರು. 'ಆತ್ಮನಿರ್ಭರ್ ಭಾರತ್ - ಸೌರ ಮತ್ತು ಎಂಎಸ್‌ಎಂಇನಲ್ಲಿ ಅವಕಾಶಗಳು' ಕುರಿತು ವೆಬ್‌ನಾರ್ ಅನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.

ಮುಂದಿನ 5 ವರ್ಷದಲ್ಲಿ ಭಾರತ ಬಹುದೊಡ್ಡ ವಾಹನ ಉತ್ಪಾದನಾ ಕೇಂದ್ರವಾಗಲಿದೆ

ಐದು ವರ್ಷಗಳಲ್ಲಿ ಭಾರತವು ವಿಶ್ವದ ವಾಹನಗಳ ಬಹುದೊಡ್ಡ ಉತ್ಪಾದನಾ ಕೇಂದ್ರವಾಗಲಿದೆ ಎಂದು ಅವರು ಹೇಳಿದರು. ಜೊತೆಗೆ ದೇಶವು ವಿದ್ಯುತ್ ಉತ್ಪಾದನೆಗೆ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.

ಭಾರತದಲ್ಲಿ ಸೌರ ವಿದ್ಯುತ್ ದರ ಯುನಿಟ್‌ಗೆ 2.40 ರೂಪಾಯಿ ಮತ್ತು ವಾಣಿಜ್ಯವಾಗಿ ವಿದ್ಯುತ್ ಶಕ್ತಿ ದರ ಯುನಿಟ್‌ಗೆ 11 ರೂಪಾಯಿ ಹೊಂದಿದೆ. ಹೀಗಾಗಿ ಸೌರಶಕ್ತಿಯ ಮೂಲಕ ಉತ್ಪತ್ತಿಯಾಗುವ ಅಗ್ಗದ ಶಕ್ತಿಯನ್ನು ವಾಹನಗಳು ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು ಎಂದು ಅವರು ಹೇಳಿದರು.

ಸೌರ ವಿದ್ಯುತ್ ಉತ್ಪಾದನೆಗಾಗಿ ಸರ್ಕಾರವು ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದು, ನವೀಕರಿಸಬಹುದಾದ ಇಂಧನದಿಂದ ಪಡೆಯಬಹುದಾದ ಗುರಿ 2030 ರ ವೇಳೆಗೆ 450 GW ಆಗಿದೆ.

English summary

India Will Be Manufacturing Hub For Automobiles In Next 5 Years: Central Minister Nitin Gadkari

Within five years, India will be a top manufacturing hub for automobiles in the world says Central Minister Nitin Gadkari
Story first published: Saturday, March 13, 2021, 18:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X