For Quick Alerts
ALLOW NOTIFICATIONS  
For Daily Alerts

ಡಿಜಿಟಲ್ ದುಡ್ಡು ಬಳಸಿ ಡ್ರಗ್ಸ್ ವ್ಯಾಪಾರ, ಭಾರತದ ''ಕ್ರಿಪ್ಟೋ ಕಿಂಗ್'' ಬಂಧನ

|

ಮುಂಬೈ ನಿವಾಸಿ ಮಕರಂದ್ ಪಿ ಆದಿವಿರ್ಕರ್ ಇತ್ತೀಚೆಗೆ ಬಂಧನಕ್ಕೊಳಪಟ್ಟಿದ್ದಾನೆ. ಮುಂಬೈ ವಲಯದ ಮಾದಕ ವಸ್ತು ನಿಯಂತ್ರಣ ತಂಡ ಎನ್ ಸಿಬಿ ಅಧಿಕಾರಿಗಳು ಮಕರಂದ್ ನನ್ನು ಬಂಧಿಸಿದ್ದಾರೆ. ಜನಪ್ರಿಯ ಡಿಜಿಟಲ್ ದುಡ್ಡು ಬಿಟ್ ಕಾಯಿನ್ ಬಳಸಿ ಡ್ರಗ್ಸ್ ಖರೀದಿ, ವ್ಯಾಪಾರದಲ್ಲಿ ತೊಡಗಿದ್ದ ಆರೋಪವನ್ನು ಆದಿವಿರ್ಕರ್ ಹೊತ್ತುಕೊಂಡಿದ್ದಾನೆ.

 

ನಗದನ್ನು ಕ್ರಿಪ್ಟೋಕರೆನ್ಸಿಯಾಗಿ ಬದಲಾಯಿಸಿಕೊಡುವುದು, ಬಿಟ್ ಕಾಯಿನ್ ಬಳಸಿ ವಹಿವಾಟು ನಡೆಸುವುದು ಎಲ್ಲದ್ದಕ್ಕೂ ಕಮಿಷನ್ ಪಡೆದುಕೊಳ್ಳುತ್ತಿದ್ದ ಆದಿವಿರ್ಕರ್, ಇದರ ಲಾಭದಿಂದ ಎಲ್ ಎಸ್ ಡಿ ಮುಂತಾದ ಡ್ರಗ್ಸ್ ಖರೀದಿಸುತ್ತಿದ್ದ. ಡ್ರಗ್ಸ್ ಖರೀದಿಗಾಗಿ ಡಾರ್ಕ್ ವೆಬ್ ಬಳಸುತ್ತಿದ್ದ ಹಾಗೂ ಡಿಜಿಟಲ್ ದುಡ್ಡು ಮೂಲಕ ವ್ಯವಹಾರ ನಡೆಸುತ್ತಿದ್ದ ಹೀಗಾಗಿ, ಈತನ ವ್ಯವಹಾರ ಗೌಪ್ಯವಾಗಿರುತ್ತಿತ್ತು.

ಅಕ್ರಮ ಚಟುವಟಿಕೆಗಳ ಹಣಕಾಸು ವ್ಯವಹಾರಗಳಿಗೆ ಬಿಟ್ ಕಾಯಿನ್ ಬಳಕೆ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಬಂದಿತ್ತು. ಆದರೆ, ಈ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಿಟ್ ಕಾಯಿನ್ ಸೇರಿದಂತೆ ಡಿಜಿಟಲ್ ದುಡ್ಡು ಚಲಾವಣೆ ಮಾಡಲು ಕಾನೂನಿನ ಮಾನ್ಯತೆ ಇಲ್ಲ. ಆದರೆ, ಅನೈತಿಕ ಚಟುವಟಿಕೆಗಳಿಗೆ ಬಿಟ್ ಕಾಯಿನ್ ಪ್ರಬಲ ವಹಿವಾಟು ಕರೆನ್ಸಿ ಎನಿಸಿಕೊಂಡಿದೆ.

ಡಿಜಿಟಲ್ ದುಡ್ಡು ಬಳಸಿ ಡ್ರಗ್ಸ್ ವ್ಯಾಪಾರ, ''ಕ್ರಿಪ್ಟೋ ಕಿಂಗ್' ಬಂಧನ

''ವಾಜಿರ್ ಎಕ್ಸ್ ಎಂಬ ಜನಪ್ರಿಯ ಬಿಟ್ ಕಾಯಿನ್ ವಾಲೆಟ್ ಬಳಸಿ ಡಾರ್ಕ್ ವೆಬ್ ಮೂಲಕ ಡ್ರಗ್ಸ್ ಖರೀದಿ ಅವ್ಯಾಹತವಾಗಿ ನಡೆಯುತ್ತಿದೆ, ಭಾರತದ ಅನೇಕ ಡ್ರಗ್ ಡೀಲರ್ ಗಳು ಇದನ್ನು ಬಳಸುತ್ತಿದ್ದಾರೆ,'' ಎಂದು ಆದಿವಿರ್ಕರ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಆದರೆ, ಆತ ನಮ್ಮ ಕ್ರಿಪ್ಟೋಕರೆನ್ಸಿ ವಿನಿಮಯದ ಕ್ಲೈಂಟ್ ಅಲ್ಲ ಎಂದು ವಾಜಿರ್ ಎಕ್ಸ್ ಪ್ರಕಟಣೆ ನೀಡಿದೆ.

ಜೂನ್ 11, 2021ರಂದು ಎನ್ ಸಿಬಿ ಈ ಬಗ್ಗೆ ವಿವರಣೆ ಕೇಳಿ ವಾಜಿರ್ ಎಕ್ಸ್ ಸಂಸ್ಥೆಗೆ ಇಮೇಲ್ ಕಳಿಸಿದೆ. ಮರುದಿನವೇ ಈ ಬಗ್ಗೆ ವಾಜಿರ್ ಎಕ್ಸ್ ಟ್ವೀಟ್ ಮಾಡಿ, ಆರೋಪಿಗೂ ನಮ್ಮ ಸಂಸ್ಥೆಗೂ ಸಂಬಂಧವೇ ಇಲ್ಲ ಎಂದಿದೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮಲಾಡ್ ಪ್ರದೇಶದ ಮಾರ್ವೆ ರಸ್ತೆ ಖರೋಡಿ ಗ್ರಾಮದಲ್ಲಿ ನಡೆಸಲಾದ ದಾಳಿಯಲ್ಲಿ ಯುರೋಪ್ ಮೂಲದ ವ್ಯಕ್ತಿಯಿಂದ 20 ಎಲ್ ಎಸ್ ಡಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆತ ಕೂಡಾ ಬಿಟ್ ಕಾಯಿನ್ ಬಳಸಿ ಡ್ರಗ್ಸ್ ಖರೀದಿಸಿದ್ದ, ಆದರೆ, ಬಿಟ್ ಕಾಯಿನ್ ಬಳಕೆ ವ್ಯವಹಾರಕ್ಕೆ ಆದಿವಿರ್ಕರ್ ರಂಥವರು ನೆರವಾಗಿದ್ದರು ತಿಳಿದು ಬಂದಿದೆ. ಹೀಗಾಗಿ, ನಗದು, ಕರೆನ್ಸಿ ಪಡೆದುಕೊಂಡು ಬಿಟ್ ಕಾಯಿನ್ ಆಗಿ ಪರಿವರ್ತಿಸಿ ನೀಡುವ ಮಾನ್ಯತೆ ಪಡೆದ ವಿನಿಮಯ ವೇದಿಕೆಗಳನ್ನು ಬಳಸಿಕೊಂಡೇ ಅಕ್ರಮ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.

English summary

Indian 'Crypto King' Arrested In Bitcoin-Linked Drug Bust

Makarand P Adivirkar, a Mumbai resident, was detained by the Narcotics Control Bureau Mumbai Zone for allegedly enabling the purchase of drugs in Bitcoin.
Story first published: Monday, June 21, 2021, 14:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X