For Quick Alerts
ALLOW NOTIFICATIONS  
For Daily Alerts

ಕೊರೊನಾ ಸಾಂಕ್ರಾಮಿಕ ಮುಗಿಯುವವರೆಗೂ ರೆಸ್ಟೋರೆಂಟ್‌ ಕಡೆಗೆ ತಲೆ ಹಾಕಲ್ಲ!

|

ಕೋವಿಡ್-19 ಸಾಂಕ್ರಾಮಿಕವು ಮುಗಿಯುವವರೆಗೆ ಅಥವಾ ಎರಡು ಲಸಿಕೆ ಹಾಕಿಸಿಕೊಳ್ಳುವವರೆಗೆ ಕನಿಷ್ಠ ನಗರವಾಸಿ ಭಾರತೀಯರು ರೆಸ್ಟೋರೆಂಟ್‌ಗೆ ಭೇಟಿ ನೀಡುವ ಆತುರವಿಲ್ಲ ಎಂಬ ಯೋಚನೆಯಲ್ಲಿದ್ದಾರೆ ಎಂದು ಯೂಗೊವ್ ಸಮೀಕ್ಷೆ ಹೇಳಿದೆ.

 

ಶುಕ್ರವಾರ ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ ಎರಡನೇ ಅಲೆಯು ಬಹಳ ವೇಗವಾಗಿ ಹರಡುವುದರಿಂದ ವೈರಸ್‌ಗೆ ತುತ್ತಾಗುವ ಭೀತಿಯಲ್ಲಿ ಜನರಿದ್ದಾರೆ. ಹೀಗಾಗಿ ಸಾಂಕ್ರಾಮಿಕ ರೋಗವು ಸಂಪೂರ್ಣವಾಗಿ ಮುಗಿದ ನಂತರವೇ ಅವರು ರೆಸ್ಟೋರೆಂಟ್‌ಗೆ ಭೇಟಿ ನೀಡುವುದಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇಕಡಾವಾರು ಜನರು ಹೇಳಿದ್ದಾರೆ. ಇನ್ನು ಶೇಕಡಾ 24ರಷ್ಟು ಜನರು ಲಸಿಕೆ ಹಾಕಿದ ನಂತರ ಹೋಗುವುದಾಗಿ ತಿಳಿಸಿದ್ದಾರೆ

ಕೊರೊನಾ ಸಾಂಕ್ರಾಮಿಕ ಮುಗಿಯುವವರೆಗೂ ರೆಸ್ಟೋರೆಂಟ್‌ಗೆ ಹೋಗಲ್ಲ!

ಏಪ್ರಿಲ್ 27ರಿಂದ ಮೇ 3ವರೆಗೆ ಭಾರತದಲ್ಲಿ 1,005 ಜನರ ಸಮೀಕ್ಷೆ ನಡೆಸಿದ ಯೂಗೊವ್ ಓಮ್ನಿಬಸ್ ಸಂಗ್ರಹಿಸಿದ ಮಾಹಿತಿ ಪ್ರಕಾರ ಜನರ ಈ ಅಭಿಪ್ರಾಯ ಹೊರಬಿದ್ದಿದೆ.

ಇನ್ನು ಕೇವಲ ಶೇಕಡಾ 22ರಷ್ಟು ಜನರು ಮಾತ್ರ ರೆಸ್ಟೋರೆಂಟ್‌ಗಳನ್ನು ಪುನಃ ತೆರೆದಾಗ ಅಥವಾ ಲಾಕ್‌ಡೌನ್ ಅನ್ನು ತೆಗೆದುಹಾಕಿದ ನಂತರ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಹೇಳಿದರು. ಕೆಲವೇ ಕೆಲವು (ಶೇಕಡಾ 13) ಜನರು ತಮ್ಮ ನಿರ್ಧಾರದ ಬಗ್ಗೆ ಇನ್ನೂ ಖಚಿತವಾಗಿಲ್ಲ.

ಸಾಂಕ್ರಾಮಿಕ ರೋಗವು ಮುಗಿದ ನಂತರ 40 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ತಾವು ಭೇಟಿ ನೀಡುತ್ತೇವೆ ಎಂದು ಹೇಳುವ ಸಾಧ್ಯತೆ ಹೆಚ್ಚು, ಆದರೆ 18 ರಿಂದ 39 ವರ್ಷದೊಳಗಿನ ವಯಸ್ಕರು ವ್ಯಾಕ್ಸಿನೇಷನ್ ನಂತರ ರೆಸ್ಟೋರೆಂಟ್‌ಗೆ ಭೇಟಿ ನೀಡಲು ಹೆಚ್ಚು ಮುಂದಾಗಬಹುದು.

English summary

Indians Say No To Dining Out Till Coronavirus Pandemic Ends: Survey

Most urban Indians are in no hurry to visit a restaurant until the coronavirus pandemic is over or at least until they get vaccinated, according to a YouGov survey
Story first published: Saturday, June 5, 2021, 9:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X