For Quick Alerts
ALLOW NOTIFICATIONS  
For Daily Alerts

ಭಾರತೀಯ ಪ್ರಯಾಣಿಕರು ಯುಕೆ, ಯುಎಸ್, ಕೆನಡಾ, ಯುಎಇಗೆ ತೆರಳಲು ಅವಕಾಶ

|

'ಏರ್ ಬಬಲ್ಸ್' ಒಪ್ಪಂದದ ಅಡಿಯಲ್ಲಿ ಯಾವುದೇ ಮಾನ್ಯತೆ ಹೊಂದಿದ ವೀಸಾ ಇರುವ ಭಾರತೀಯ ಪ್ರಯಾಣಿಕರು ಯು.ಕೆ., ಯು.ಎಸ್., ಕೆನಡಾ ಮತ್ತು ಯುಎಇಗೆ ತೆರಳಬಹುದು ಎಂದು ಡೆರೆಕ್ಟರ್ ಜನರಲ್ ಆಫ್ ಡೆರೆಕ್ಟೊರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಹೇಳಿದ್ದಾರೆ.

2021ರ ಆರಂಭದ ಹೊತ್ತಿಗೆ ಭಾರತೀಯರ ಕೈಗೆ ಇ- ಪಾಸ್ ಪೋರ್ಟ್

ಈ ಹಿಂದೆ ಯುರೋಪಿಯನ್ ಒಕ್ಕೂಟದಿಂದ ಹೊರಡಿಸಿದ್ದ ಮಾರ್ಗದರ್ಶಿ ಸೂತ್ರದ ಪ್ರಕಾರ, ಯಾರು ವಿದೇಶ ಪ್ರಯಾಣಕ್ಕೆ ಅಗತ್ಯ ಇರುವ ವೀಸಾ ಇರುತ್ತದೋ ಅಂಥವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಪುರಿ ಈಚೆಗೆ ಮಾತನಾಡಿ, ಇತರ ದೇಶಗಳ ಜತೆಗೂ ಏರ್ ಬಬಲ್ಸ್ ಒಪ್ಪಂದದ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದರು.

ಭಾರತೀಯ ಪ್ರಯಾಣಿಕರು ಯುಕೆ, ಯುಎಸ್, ಕೆನಡಾ, ಯುಎಇಗೆ ತೆರಳಲು ಅವಕಾಶ

 

ಇನ್ನು ಭಾರತದೊಳಕ್ಕೆ ವೀಸಾ ಹೊಂದಿದ ಎಲ್ಲರಿಗೂ ಪ್ರವೇಶ ನೀಡುತ್ತಿಲ್ಲ. ಬದಲಿಗೆ ಗೃಹ ವ್ಯವಹಾರಗಳ ಸಚಿವಾಲಯದಿಂದ ಯಾರಿಗೆ ವೀಸಾ ಮಂಜೂರಾಗಿದೆಯೋ ಅಂಥವರಿಗೆ ಮಾತ್ರ ಭಾರತದೊಳಕ್ಕೆ ಪ್ರವೇಶ ನೀಡಲಾಗುತ್ತಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ನಿಗದಿತ ವೇಳಪಟ್ಟಿಯ ಯಾವುದೇ ಅಂತರರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಇನ್ನೂ ಅನುಮತಿ ದೊರೆತಿಲ್ಲ.

English summary

Indians Who Have Valid Visa Can Fly To UK, US, Canada, UAE Under Air Bubble Agreement

Now, Indians who have valid visa under air bubble agreement can fly to UK, US, Canada, UAE.
Company Search
COVID-19