For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 333 ಪಾಯಿಂಟ್ಸ್ ಏರಿಕೆ: ನಿಫ್ಟಿ 106 ಪಾಯಿಂಟ್ಸ್ ಹೆಚ್ಚಳ

|

ಭಾರತೀಯ ಷೇರುಪೇಟೆ ಜಾಗತಿಕ ಸಕಾರಾತ್ಮಕ ಸೂಚನೆ ಬೆನ್ನಲ್ಲೆ ಸೋಮವಾರ ಭರ್ಜರಿ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 333 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 106 ಪಾಯಿಂಟ್ಸ್ ಹೆಚ್ಚಳಗೊಂಡಿದೆ.

 

50,000 ಕೋಟಿ ರೂಪಾಯಿಗೆ ಯಾರು ದಿಕ್ಕೇ ಇಲ್ಲ: ಕ್ಲೈಮ್ ಆಗದೇ ಹಾಗೆ ಉಳಿದಿದೆ..!

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.63ರಷ್ಟು ಅಥವಾ 333.76 ಪಾಯಿಂಟ್ಸ್‌ ಹೆಚ್ಚಳಗೊಂಡು 52920.60 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ. 0.68ರಷ್ಟು ಅಥವಾ 106.7 ಪಾಯಿಂಟ್ಸ್ ಏರಿಕೆಗೊಂಡು 15869 ಪಾಯಿಂಟ್ಸ್‌ ಮುಟ್ಟಿದೆ.

ಒಟ್ಟು 1,785 ಕಂಪನಿಗಳಲ್ಲಿ ವಹಿವಾಟು ಆರಂಭವಾಗಿದ್ದು, ಅದರಲ್ಲಿ ಸುಮಾರು 1,322 ಷೇರುಗಳು ಏರಿಕೆಗೊಂಡರೆ ಮತ್ತು 349 ಷೇರುಗಳು ಕುಸಿದಿವೆ. ಅದೇ ಸಮಯದಲ್ಲಿ, 114 ಕಂಪನಿಗಳ ಷೇರು ಬೆಲೆ ಯಾವುದೇ ಬದಲಾವಣೆ ಆಗಿಲ್ಲ.

ಸೆನ್ಸೆಕ್ಸ್ 333 ಪಾಯಿಂಟ್ಸ್ ಏರಿಕೆ: ನಿಫ್ಟಿ 106 ಪಾಯಿಂಟ್ಸ್ ಹೆಚ್ಚಳ

ಏರಿಕೆಗೊಂಡ ಷೇರುಗಳು:
ಬ್ರಿಟಾನಿಯಾ ಷೇರು 48 ರೂ. ಏರಿಕೆಯಾಗಿ 3,481.80 ರೂ., ಟಾಟಾ ಮೋಟಾರ್ಸ್ ನ ಷೇರು ಸುಮಾರು 5 ರೂ. ಹೆಚ್ಚಾಗಿ 298.80 ರೂಪಾಯಿಗೆ ಆರಂಭವಾಗಿದ್ದು, ಮಾರುತಿ ಸುಜುಕಿಯ ಷೇರು 108 ರೂಪಾಯಿ ಏರಿಕೆಯಾಗಿ 7,085.25 ಕ್ಕೆ ಪ್ರಾರಂಭವಾಯಿತು. ಟಾಟಾ ಕನ್ಸೂಮರ್ ಷೇರು 12 ರೂ. ಹೆಚ್ಚಾಗಿ 767.85 ಕ್ಕೆ ಆರಂಭವಾಯಿತು, 13 ರೂ ಗಳಿಕೆಯೊಂದಿಗೆ ಸಿಪ್ಲಾ ಷೇರು 932.70 ರೂ.ನಲ್ಲಿ ತೆರೆಯಿತು.

ಇಳಿಕೆಗೊಂಡ ಷೇರುಗಳು:

ಟಾಟಾ ಸ್ಟೀಲ್ ನ ಷೇರುಗಳು ಸುಮಾರು ರೂ. 6 ರಷ್ಟು ಇಳಿಕೆಯಾಗಿ 1,427.95 ರಲ್ಲಿ ಆರಂಭವಾಗಿದ್ದು, . ಯುಪಿಎಲ್ ನ ಷೇರು ಸುಮಾರು 4 ರೂ. ಕುಸಿದು 804.15 ರಲ್ಲಿ ಆರಂಭವಾಯಿತು, ಟೆಕ್ ಮಹೀಂದ್ರಾ ಷೇರುಗಳು ಸುಮಾರು ರೂ. 5 ರಷ್ಟು ಇಳಿಕೆಯಾಗಿ 1,204.15 ರಲ್ಲಿ ಆರಂಭವಾಗಿದ್ದು, ಹಿಂಡಾಲ್ಕೊ ಷೇರು ಸುಮಾರು 2 ರೂ. ಕುಸಿದು 443.00 ಕ್ಕೆ ಆರಂಭವಾಯಿತು, ಎನ್‌ಟಿಪಿಸಿಯ ಷೇರು ಸುಮಾರು 1 ರೂ. ಕುಸಿದು 117.60 ರೂ.ನಲ್ಲಿ ಪ್ರಾರಂಭವಾಯಿತು.

ಹೀರೋ ಮೋಟೊಕಾರ್ಪ್ ಮಾರಾಟದಲ್ಲಿ ಇಳಿಕೆ

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೋಕಾರ್ಪ್ ಜುಲೈನಲ್ಲಿ ಒಟ್ಟು ಮಾರಾಟದಲ್ಲಿ ಶೇಕಡ 13ರಷ್ಟು ಇಳಿಕೆಯಾಗಿ 4,54,398 ಯುನಿಟ್‌ಗಳನ್ನು ವರದಿ ಮಾಡಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ ಕಂಪನಿಯು 5,20,104 ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಹೀರೋ ಮೋಟೋಕಾರ್ಪ್ ಹೇಳಿಕೆಯಲ್ಲಿ ತಿಳಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ, ಜುಲೈ 2020 ರಲ್ಲಿ 5,12,541 ಯೂನಿಟ್‌ನಿಂದ ಕಂಪನಿಯ ಸಗಟು ಮಾರಾಟವು ಕಳೆದ ತಿಂಗಳು 4,29,208 ಯೂನಿಟ್‌ಗಳಿಗೆ ಕುಸಿದಿದೆ. ಆದಾಗ್ಯೂ, ರಫ್ತುಗಳು ಕಳೆದ ತಿಂಗಳು 25,190 ಯುನಿಟ್‌ಗಳಿಗೆ ಏರಿಕೆಯಾಗಿದೆ.

ಹೀರೋ ಮೊಟೊಕಾರ್ಪ್ ಷೇರು ಬಿಎಸ್‌ಇನಲ್ಲಿ ಶೇಕಡಾ 0.20ರಷ್ಟು ಅಥವಾ 6.10 ರೂಪಾಯಿ ಏರಿಕೆಗೊಂಡು 2,768.30 ಪಾಯಿಂಟ್ಸ್‌ ಏರಿಕೆಗೊಂಡಿದೆ.

ಬಜಾಜ್ ಆಟೋ
ಕಂಪನಿಯು ಒಂದು ವರ್ಷದ ಹಿಂದಿನ ಅವಧಿಯಲ್ಲಿ 2,55,832 ಯುನಿಟ್‌ಗಳ ವಿರುದ್ಧ 3,69,116 ಯೂನಿಟ್‌ಗಳ ಒಟ್ಟು ಮಾರಾಟದಲ್ಲಿ ಶೇಕಡಾ 44ರಷ್ಟು ಏರಿಕೆಯಾಗಿದೆ. ರಫ್ತುಗಳು ಬಜಾಜ್ ಆಟೋ ಬಿಎಸ್‌ಇಯಲ್ಲಿ ರೂ. 11.65 ರೂಪಾಯಿ ಅಥವಾ ಶೇಕಡಾ 0.30 ರಷ್ಟು ಏರಿಕೆಯಾಗಿ 3,842.70 ರೂ. ತಲುಪಿದೆ.

 

ರೂಪಾಯಿ ಬೆಲೆ ಏರಿಕೆ
ದೇಶೀಯ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರದ ಮುಕ್ತಾಯವಾದ 74.41 ಕ್ಕೆ ಹೋಲಿಸಿದರೆ ಭಾರತೀಯ ರೂಪಾಯಿ ಸೋಮವಾರ ಪ್ರತಿ ಡಾಲರ್‌ಗೆ 74.38 ಕ್ಕೆ ಏರಿಕೆಯಾಗಿದೆ. ಜುಲೈ 30 ರಂದು, ದೇಶೀಯ ಕರೆನ್ಸಿ 13 ಪೈಸೆ ಕಡಿಮೆಯಾಗಿ ಪ್ರತಿ ಡಾಲರ್‌ಗೆ 74.41 ಕ್ಕೆ ಕೊನೆಗೊಂಡಿತು ಮತ್ತು ಗುರುವಾರದ ಅಂತ್ಯದ 74.28 ಕ್ಕೆ ಕೊನೆಗೊಂಡಿತು.

English summary

Indices Trade Higher With Nifty Around 15852

The Sensex was up 333.76 points or 0.63% at 52920.60, and the Nifty was up 106.7 points or 0.68% at 15869
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X