For Quick Alerts
ALLOW NOTIFICATIONS  
For Daily Alerts

ಕ್ಯಾಶ್ ಲೆಸ್ ಇನ್ಷೂರೆನ್ಸ್ ಇರೋರಿಗೆ ಸಿಕ್ಕಾಪಟ್ಟೆ ಬಿಲ್; ಆರೋಪ ಮಾಡ್ತಿವೆ ಕಂಪೆನಿಗಳು

|

ಯಾರ ಬಳಿ ಕ್ಯಾಶ್ ಲೆಸ್ ಇನ್ಷೂರೆನ್ಸ್ ಇದೆಯೋ ಅಂಥವರು ಕೊರೊನಾ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾದಲ್ಲಿ ಸಿಕ್ಕಾಪಟ್ಟೆ ಬಿಲ್ ಮಾಡಲಾಗುತ್ತಿದೆ ಎಂದು ನಾನ್- ಲೈಫ್ ಇನ್ಷೂರೆನ್ಸ್ ಕಂಪೆನಿಗಳ ಒಕ್ಕೂಟವಾದ ದ ಜನರಲ್ ಇನ್ಷೂರೆನ್ಸ್ ಕೌನ್ಸಿಲ್ ಆರೋಪ ಮಾಡಿದೆ. ಹೆಲ್ತ್ ಕೇರ್ ಶುಲ್ಕಗಳಿಗೆ ನಿಯಂತ್ರಣ ಹೇರಬೇಕು ಎಂದು ಒತ್ತಾಯಿಸಲಾಗಿದ್ದು, ಕೊರೊನಾ ಕ್ಯಾಶ್ ಲೆಸ್ ಚಿಕಿತ್ಸೆಗೆ ಸಂಬಂಧಿಸಿದಂತೆ ಅರ್ಜಿದಾರ ಆಗುವುದಾಗಿ ಸುಪ್ರೀಂ ಕೋರ್ಟ್ ನಲ್ಲಿ ಕೇಳಿಕೊಂಡಿದೆ.

Max Bupaದಿಂದ ಹೊಸ ಹೆಲ್ತ್ ಇನ್ಷೂರೆನ್ಸ್: ಎಷ್ಟೆಲ್ಲ ಅನುಕೂಲಗಳು?

ಕೌನ್ಸಿಲ್ ಮುಖ್ಯಸ್ಥ ಎಂ.ಎನ್. ಶರ್ಮಾ ಟೈಮ್ಸ್ ಆಫ್ ಇಂಡಿಯಾದ ಜತೆ ಮಾತನಾಡಿ, ಆಸ್ಪತ್ರೆಗಳು ಕೃತಕವಾಗಿ ದರ ಏರಿಕೆ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಈಗ ನಿಯಂತ್ರಣ ಇರುವುದರಿಂದ ಇನ್ಷೂರೆನ್ಸ್ ಕಂಪೆನಿಗಳು ದಾವೆ ಹೂಡಲು ಆಗಲ್ಲ. ನಾವು ವಿತರಿಸುವ ಪ್ರತಿ ಪಾಲಿಸಿಗೂ ದರವನ್ನು IRDAI ಮಂಜೂರು ಮಾಡಿರುತ್ತದೆ. ಒಂದು ವೇಳೆ ಆಸ್ಪತ್ರೆಯವರು ಸಿಕ್ಕಾಪಟ್ಟೆ ದರ ಏರಿಕೆ ಮಾಡಿದರೂ ನಮ್ಮ ಪ್ರಾಡಕ್ಟ್ ಗಳಿಗೆ ನ್ಯಾಯಸಮ್ಮತ ಅಲ್ಲದ ದರ ನಿಗದಿ ಮಾಡಲು ಆಗಲ್ಲ ಎಂದಿದ್ದಾರೆ.

ಕೊರೊನಾ ಚಿಕಿತ್ಸೆಗೆ ದರ ನಿಗದಿ ಮಾಡಬೇಕು
 

ಕೊರೊನಾ ಚಿಕಿತ್ಸೆಗೆ ದರ ನಿಗದಿ ಮಾಡಬೇಕು

ಕೊರೊನಾ ಚಿಕಿತ್ಸೆಗೆ ದರ ಮಿತಿ ನಿಗದಿ ಮಾಡಬೇಕು ಎಂದು ಕೌನ್ಸಿಲ್ ನಿಂದ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ. ಆಸ್ಪತ್ರೆಗಳು ಒಬ್ಬೊಬ್ಬ ರೋಗಿಗೆ ಒಂದೊಂದು ಬಗೆಯಲ್ಲಿ ದರ ವಿಧಿಸುತ್ತಿವೆ. ಆದ್ದರಿಂದ ಸುಪ್ರೀಂ ಕೋರ್ಟ್ ನಲ್ಲಿ ಹಾಕಿಕೊಂಡಿರುವ ಅರ್ಜಿಗೆ ಅರ್ಜಿದಾರ ಆಗಲು ಬಯಸುತ್ತದೆ ಎಂದು ತಿಳಿಸಲಾಗಿದೆ.

ಜನಸಾಮಾನ್ಯರ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ PIL

ಜನಸಾಮಾನ್ಯರ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ PIL

ಈ ಮಧ್ಯೆ ಇನ್ಷೂರೆನ್ಸ್ ಇರುವ ರೋಗಿಗಳಿಗೆ ಒಂದು, ಇಲ್ಲದವರಿಗೆ ಮತ್ತೊಂದು ದರ ಹಾಕುವುದು ಗಮನಕ್ಕೆ ಬಂದಿದೆ ಎಂದು ತಿಳಿಸಲಾಗಿದೆ. ಅಂದ ಹಾಗೆ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಹಾಕಿರುವವರು ಆಸ್ಪತ್ರೆ ಸಂತ್ರಸ್ತ, ಕೋಲ್ಕತ್ತಾ ಮೂಲದ ಅವಿಷೇಕ್ ಗೋಯೆಂಕಾ. ಜನಸಾಮಾನ್ಯರ ಎದುರಿಸುತ್ತಿರುವ ಸಮಸ್ಯೆಗಳ ಪರ ಅವರು ಅರ್ಜಿ ಹಾಕಿಕೊಂಡಿದ್ದಾರೆ. ಇದೀಗ ಕೌನ್ಸಿಲ್ ಕೂಡ ಗೋಯೆಂಕಾ ಅರ್ಜಿಯಲ್ಲಿ ಸೇರಿಕೊಳ್ಳುವ ಸಾಧ್ಯತೆ ಇದೆ.

ಇನ್ಷೂರ್ಡ್ ಮೊತ್ತವನ್ನು ಗಮನಿಸಿ ಆಸ್ಪತ್ರೆಗಳಿಂದ ಚಿಕಿತ್ಸಾ ವಿಧಾನ

ಇನ್ಷೂರ್ಡ್ ಮೊತ್ತವನ್ನು ಗಮನಿಸಿ ಆಸ್ಪತ್ರೆಗಳಿಂದ ಚಿಕಿತ್ಸಾ ವಿಧಾನ

ಪಿಐಎಲ್ ನಲ್ಲಿ ತಿಳಿಸಿರುವ ಪ್ರಕಾರ, ಇನ್ಷೂರೆನ್ಸ್ ಇರುವ ಮತ್ತು ಇಲ್ಲದಿರುವ ರೋಗಿಗಳ ಮಧ್ಯೆ ಆಸ್ಪತ್ರೆ ದರದಲ್ಲಿ ವ್ಯತ್ಯಾಸ ಇದೆ. "ನಮ್ಮ ಗಮನಕ್ಕೆ ಬಂದಿರುವುದೇನೆಂದರೆ, ಇನ್ಷೂರ್ಡ್ ಮೊತ್ತವನ್ನು ಗಮನಿಸಿ, ಆಸ್ಪತ್ರೆಗಳು ಚಿಕಿತ್ಸಾ ವಿಧಾನವನ್ನು ಅನುಸರಿಸುತ್ತಿವೆ. ಉದಾಹರಣೆಗೆ, ಒಟ್ಟು ಇನ್ಷೂರೆನ್ಸ್ ಮೊತ್ತ 5 ಲಕ್ಷ ಇದ್ದಲ್ಲಿ 4.9 ಲಕ್ಷ ರುಪಾಯಿ ತನಕ ಆಸ್ಪತ್ರೆ ದರಗಳನ್ನು ಹಾಕುತ್ತಿವೆ. ಯಾರ ಬಳಿ ಇನ್ಷೂರೆನ್ಸ್ ಇರುವುದಿಲ್ಲವೋ ಅಂಥವರಿಗೆ ಆ ಮೊತ್ತ ಅರ್ಧ ಅಥವಾ ಕಾಲು ಭಾಗ ಮಾತ್ರ ಹಾಕಲಾಗುತ್ತಿದೆ" ಎಂದು ಆರೋಪಿಸಲಾಗಿದೆ.

English summary

Inflating Bills For Coronavirus Treatment By Hospitals Accuses General Insurance Council

General Insurance Council accuses that, hospital charging inflating rate for cashless insurance holders.
Company Search
COVID-19