For Quick Alerts
ALLOW NOTIFICATIONS  
For Daily Alerts

ಏಪ್ರಿಲ್‌ನಲ್ಲಿ ಇಕ್ವಿಟಿ, ಮ್ಯೂಚುವಲ್ ಫಂಡ್ ಹೂಡಿಕೆ 3,437 ಕೋಟಿಗೆ ಇಳಿಕೆ

|

ಏಪ್ರಿಲ್‌ನಲ್ಲಿ ಇಕ್ವಿಟಿ, ಮ್ಯೂಚುವಲ್ ಫಂಡ್‌ಗಳಲ್ಲಿ 3,437 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದ್ದು, ಮಾರ್ಚ್‌ ತಿಂಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆಯಾಗಿದೆ.

 

ಮಾರ್ಚ್‌ನಲ್ಲಿ ಹೂಡಿಕೆದಾರರು ಈಕ್ವಿಟಿ ಫಂಡ್‌ಗಳಲ್ಲಿ 9,115 ಕೋಟಿ ರೂ. ಹೂಡಿಕೆ ಮಾಡಿದ್ದರು. ಆದರೆ ಅದಕ್ಕೂ ಮೊದಲು ಹೂಡಿಕೆದಾರರು ಜುಲೈ 2020 ರಿಂದ ಫೆಬ್ರವರಿ 2021 ರವರೆಗೆ ಸತತ 8 ತಿಂಗಳ ಅವಧಿಯಲ್ಲಿ ಈಕ್ವಿಟಿ ಫಂಡ್‌ಗಳಿಂದ ಹಣವನ್ನು ಹಿಂತೆಗೆದುಕೊಂಡಿದ್ದರು.

ಏಪ್ರಿಲ್‌ನಲ್ಲಿ ಇಕ್ವಿಟಿ, ಮ್ಯೂಚುವಲ್ ಫಂಡ್ ಹೂಡಿಕೆ 3,437 ಕೋಟಿ ರೂ.

ಒಟ್ಟಾರೆಯಾಗಿ, ಮ್ಯೂಚುವಲ್ ಫಂಡ್ ಏಪ್ರಿಲ್‌ನಲ್ಲಿ 92,906 ಕೋಟಿ ರೂ. ಒಳಹರಿವು (ನಿವ್ವಳ ಹೂಡಿಕೆ) ದಾಖಲಿಸಿದೆ. ಅಸೋಸಿಯೇಷನ್ ​​ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ (ಅಮ್ಫಿ) ದ ಮಾಹಿತಿಯ ಪ್ರಕಾರ, ಏಪ್ರಿಲ್‌ನಲ್ಲಿ ಈಕ್ವಿಟಿ ಮತ್ತು ಈಕ್ವಿಟಿ ಲಿಂಕ್ಡ್ ಓಪನ್ ಎಂಡ್ ಯೋಜನೆಗಳಲ್ಲಿ 3,437.37 ಕೋಟಿ ರೂ. ದಾಖಲಾಗಿದೆ.

ಮಲ್ಟಿ-ಕ್ಯಾಪ್, ಡಿವಿಡೆಂಡ್ , ಮೌಲ್ಯ ನಿಧಿ ಮತ್ತು ವಿಷಯಾಧಾರಿತ ನಿಧಿ ವರ್ಗವನ್ನು ಹೊರತುಪಡಿಸಿ ಎಲ್ಲಾ ಇಕ್ವಿಟಿ ಯೋಜನೆಗಳು ಕಳೆದ ತಿಂಗಳು ಒಳಹರಿವು ಕಂಡವು. ಇಕ್ವಿಟಿ ಯೋಜನೆಗಳಲ್ಲಿ ಹೊರಹರಿವು ಜನವರಿಯಲ್ಲಿ 9,253 ಕೋಟಿ, ಡಿಸೆಂಬರ್‌ನಲ್ಲಿ 10,147 ಕೋಟಿ, ನವೆಂಬರ್‌ನಲ್ಲಿ 12,917 ಕೋಟಿ, ಅಕ್ಟೋಬರ್‌ನಲ್ಲಿ 2,725 ಕೋಟಿ ರೂ., ಸೆಪ್ಟೆಂಬರ್‌ನಲ್ಲಿ 734 ಕೋಟಿ ರೂ., ಆಗಸ್ಟ್‌ನಲ್ಲಿ 4,000 ಕೋಟಿ ರೂ. ಮತ್ತು ಜುಲೈನಲ್ಲಿ 2,480 ಕೋಟಿ ರೂ. ತಲುಪಿತ್ತು.

English summary

Inflow In Equity Mutual Funds Drops To Rs 3,437 Crore In April

Equity mutual funds witnessed a net inflow of Rs 3,437 crore in April, making it the second consecutive monthly infusion.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X