For Quick Alerts
ALLOW NOTIFICATIONS  
For Daily Alerts

ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ನಕಲಿ ಇನ್ ವಾಯ್ಸ್; 25ಕ್ಕೂ ಹೆಚ್ಚು ಬಂಧನ

By ಅನಿಲ್ ಆಚಾರ್
|

ಜಿಎಸ್ ಟಿ ಅಡಿಯಲ್ಲಿ ಇನ್ ಪುಟ್ ಟಾಕ್ಸ್ ಕ್ರೆಡಿಟ್ ಪಡೆಯಲು ನಕಲಿ ಇನ್ ವಾಯ್ಸ್ ನೀಡಿದ ಆರೋಪದಲ್ಲಿ ಇಬ್ಬರು ಕಿಂಗ್ ಪಿನ್ ಸೇರಿದಂತೆ ಇಪ್ಪತ್ತೈದು ಮಂದಿ ಹಾಗೂ ಹಲವು ವೃತ್ತಿಪರರನ್ನು ಕಳೆದ ನಾಲ್ಕು ದಿನದಲ್ಲಿ ಬಂಧಿಸಲಾಗಿದೆ. 1180 ಸಂಸ್ಥೆಗಳ ವಿರುದ್ಧ 350 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ವಾಸ್ತವವಾಗಿ ಎಷ್ಟು ನಕಲಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೇಮ್ ಮಾಡಿದ್ದರು ಎಂಬುದನ್ನು ತೀರ್ಮಾನಿಸಲಾಗುತ್ತಿದೆ ಎಂದು ಜಿಎಸ್ ಟಿ ಗುಪ್ತಚರ ವಿಭಾಗದ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. ಈ ಹಗರಣದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದರು ಹಾಗೂ ಫಲಾನುಭವಿಗಳು ಯಾರು ಎಂದು ತಿಳಿಯಲು ಶೋಧ ಮುಂದುವರಿದಿದೆ ಎನ್ನಲಾಗಿದೆ.

ಸಾರ್ವಜನಿಕ ಬ್ಯಾಂಕ್ ಗಳಿಗೆ ಮೂರು ತಿಂಗಳಲ್ಲಿ 19,964 ಕೋಟಿ ವಂಚನೆ

 

ಫಲಾನುಭವಿಗಳ ವಿರುದ್ಧ ಪ್ರಕರಣನ್ನು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಯುವುದು ಎನ್ನಲಾಗಿದೆ. ಇನ್ನು ಈ ನಕಲಿ ಇನ್ ವಾಯ್ಸ್ ನೀಡಿದವರು ಹಾಗೂ ಪಡೆದವರ ವಿರುದ್ಧ ಕಾಫಿಪೋಸಾ ಅಡಿಯಲ್ಲಿ ದೂರು ದಾಖಲಿಸಬಹುದಾ ಎಂಬ ಬಗ್ಗೆ ಕೂಡ ಆಲೋಚನೆ ನಡೆಯುತ್ತಿದೆ.

ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ನಕಲಿ ಇನ್ ವಾಯ್ಸ್; 25 ಬಂಧನ

ಈ ಹಿಂದಿನ ಶನಿವಾರ ಕಂದಾಯ ಇಲಾಖೆಯ ಉನ್ನತ ಮಟ್ಟದ ಸಭೆಯ ನಂತರ ತನಿಖೆ ತೀವ್ರಗೊಂಡಿದೆ. ಡಿಜಿಜಿಐ, ಜಿಎಸ್ ಟಿ, ಜಿಎಸ್ ಟಿ ನೆಟ್ ವರ್ಕ್, ಇಡಿ, ಸಿಬಿಡಿಟಿ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿ ಆಗಿದ್ದರು.

English summary

Input Tax Credit Scam; More Than 25 People Arrested

Under GST input tax credit scam more than 25 people arrested. Here is the details.
Story first published: Sunday, November 15, 2020, 23:53 [IST]
Company Search
COVID-19