For Quick Alerts
ALLOW NOTIFICATIONS  
For Daily Alerts

ಬಡ್ಡಿಯ ಮೇಲಿನ ಬಡ್ಡಿ ಮನ್ನಾ: ಅ. 13ಕ್ಕೆ ಪ್ರಕರಣ ಮುಂದೂಡಿದ ಸುಪ್ರೀಂ ಕೋರ್ಟ್

|

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಇಎಂಐ ವಿನಾಯಿತಿಗೆ ಬಡ್ಡಿ ಮೇಲೆ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಇರುವ ಪ್ರಕರಣವನ್ನು ಅಕ್ಟೋಬರ್ 13ನೇ ತಾರೀಕಿಗೆ ಮುಂದೂಡಲಾಗಿದೆ. ಎಲ್ಲ ಅಫಿಡವಿಟ್ ಗಳನ್ನೂ ಅಕ್ಟೋಬರ್ 12ರೊಳಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

 

'ಬಡ್ಡಿಯ ಮೇಲಿನ ಬಡ್ಡಿ ಮನ್ನಾ' ಬಗ್ಗೆ ಕೇಂದ್ರದಿಂದ ಸುಪ್ರೀಂಗೆ ಅಫಿಡವಿಟ್

'ಬಡ್ಡಿ ಮೇಲಿನ ಬಡ್ಡಿ'ಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರವು ಅಕ್ಟೋಬರ್ 2ನೇ ತಾರೀಕಿನಂದು ಸುಪ್ರೀಂ ಕೋರ್ಟ್ ಗೆ ನಿಲುವು ತಿಳಿಸಿತ್ತು. 2 ಕೋಟಿ ರುಪಾಯಿಯೊಳಗಿನ ವೈಯಕ್ತಿಕ ಹಾಗೂ ಎಂಎಸ್ ಎಂಇಗಳ 2 ಕೋಟಿ ರುಪಾಯಿಯೊಳಗಿನ ಸಾಲಗಳಿಗೆ ಬಡ್ಡಿಯ ಮೇಲೆ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿತ್ತು.

ಯಾವ ಸಾಲಗಳಿಗೆ ಬಡ್ಡಿಯ ಮೇಲಿನ ಬಡ್ಡಿ ಮನ್ನಾ?

ಯಾವ ಸಾಲಗಳಿಗೆ ಬಡ್ಡಿಯ ಮೇಲಿನ ಬಡ್ಡಿ ಮನ್ನಾ?

ಅಫಿಡವಿಟ್ ಸಲ್ಲಿಸುವ ವೇಳೆ, "ಜಾಗರೂಕವಾಗಿ ಎಲ್ಲ ಅಂಶಗಳನ್ನು ಗಮನಿಸಿ ಹಾಗೂ ಆಯ್ಕೆಗಳನ್ನು ಅಳೆದು ತೂಗಿ" ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರವು ತಿಳಿಸಿತ್ತು. ಈ ಕೆಳಕಂಡ ವಿಭಾಗದ ಅಡಿಯಲ್ಲಿ ಬರುವುದಕ್ಕೆ 2 ಕೋಟಿ ರುಪಾಯಿವರೆಗೆ ಬಡ್ಡಿಯ ಮೇಲೆ ಬಡ್ಡಿ ಮನ್ನಾ ಮಾಡಲಾಗುತ್ತದೆ.

* ಎಂಎಸ್ ಎಂಇ

* ಶಿಕ್ಷಣ ಸಾಲ

* ಗೃಹ ಸಾಲ

* ಕನ್ಸ್ಯೂಮರ್ ಡ್ಯೂರಬಲ್ ಸಾಲ

* ಕ್ರೆಡಿಟ್ ಕಾರ್ಡ್ ಬಾಕಿ

* ವಾಹನ ಸಾಲ

* ಪರ್ಸನಲ್ ಲೋನ್

* ಇತರ ಸಾಲಗಳು

ಸರ್ಕಾರಕ್ಕೆ ಎಷ್ಟು ಹೊರೆ?

ಸರ್ಕಾರಕ್ಕೆ ಎಷ್ಟು ಹೊರೆ?

ಈ ರೀತಿ ಬಡ್ಡಿಯ ಮೇಲೆ ಬಡಿಯನ್ನು ಮನ್ನಾ ಮಾಡುವುದರಿಂದ ಬ್ಯಾಂಕ್ ಗಳ ಮೇಲೆ ಆಗುವ ಹೊರೆಯನ್ನು ಭಾರತ ಸರ್ಕಾರವು ಭರಿಸುತ್ತದೆ. ರೇಟಿಂಗ್ ಏಜೆನ್ಸಿ ICRA ಹೇಳಿರುವ ಪ್ರಕಾರ, ಬಡ್ಡಿಯ ಮೇಲಿನ ಬಡ್ಡಿ ಮನ್ನಾದಿಂದ 5000ದಿಂದ 7000 ಕೋಟಿ ರುಪಾಯಿಗಿಂತ ಹೆಚ್ಚಿನ ಹೊರೆ ಆಗುವುದಿಲ್ಲ. ಆದರೆ ಈ ವಿಚಾರವನ್ನು ಲೆಕ್ಕ ಹಾಕಿರುವುದು ಹೇಗೆಂದರೆ, ಬ್ಯಾಂಕ್ ಗಳು ಹಾಗೂ ಎನ್ ಬಿಎಫ್ ಸಿಗಳಲ್ಲಿ ಈ ಪರಿಹಾರ ಪಡೆಯಲು 30ರಿಂದ 40 ಪರ್ಸೆಂಟ್ ಗಿಂತ ಹೆಚ್ಚು ಮಂದಿ ಅರ್ಹರು ಇಲ್ಲ ಎಂದು ಪರಿಗಣಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು?
 

ಪ್ರಕರಣದ ಹಿನ್ನೆಲೆ ಏನು?

ಕೊರೊನಾ ಬಿಕ್ಕಟ್ಟಿನಿಂದ ಉದ್ಭವಿಸಿರುವ ಆರ್ಥಿಕ ಅಡ್ಡ ಪರಿಣಾಮದ ಕಾರಣಕ್ಕೆ ಸಾಲ ಮರುಪಾವತಿಯಿಂದ ಪರಿಹಾರ ಹಾಗೂ ಬಡ್ಡಿಯ ಮೇಲಿನ ಬಡ್ಡಿ ಮನ್ನಾಗೆ ಕೋರಿ ವೈಯಕ್ತಿಕ ಅರ್ಜಿದಾರರು ಹಾಗೂ ವಿವಿಧ ಸಂಸ್ಥೆಗಳು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿಕೊಂಡಿದ್ದು, ಕೇಂದ್ರ ಹಾಗೂ ಆರ್ ಬಿಐಗೆ ಬಡ್ಡಿ ಮನ್ನಾಗೆ ಸಂಬಂಧಿಸಿದಂತೆ ಗಟ್ಟಿ ತೀರ್ಮಾನ ಕೈಗೊಳ್ಳಲು ಈ ಹಿಂದೆ ಕೋರ್ಟ್ ಎರಡು ವಾರದ ಸಮಯ ನೀಡಿತ್ತು. ಈ ಸಂಬಂಧವಾಗಿ ಹಣಕಾಸು ಸಚಿವಾಲಯವು ತಜ್ಞರ ಸಮಿತಿ ರಚಿಸಿ, ಬಡ್ಡಿ ಮನ್ನಾ ಹಾಗೂ ಬಡ್ಡಿ ಮೇಲಿನ ಬಡ್ಡಿ ಮನ್ನಾ ಮತ್ತಿತರ ವಿಚಾರಗಳಲ್ಲಿ ಏನು ಪ್ರಭಾವ ಆಗಬಹುದು ಎಂದು ತಿಳಿಸುವಂತೆ ಕೋರಿತ್ತು.

English summary

Supreme Court Defers Loan Moratorium Case Hearing to October 13

Loan moratorium: Supreme court on Monday deferred interest on interest case hearing to October 13th. Here is the details of case.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X