For Quick Alerts
For Daily Alerts
ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ
|
ಐ.ಟಿ. ಪ್ರಮುಖ ಕಂಪೆನಿ ಮೈಂಡ್ ಟ್ರೀ ಮಂಗಳವಾರ ವರದಿ ಮಾಡಿರುವಂತೆ ಒಟ್ಟಾರೆ ನಿವ್ವಳ ಲಾಭದಲ್ಲಿ 66% ಹೆಚ್ಚಳ ಆಗಿದ್ದು, ಡಿಸೆಂಬರ್ 31, 2020ರ ತ್ರೈಮಾಸಿಕಕ್ಕೆ 327 ಕೋಟಿ ರುಪಾಯಿ ನಿವ್ವಳ ಲಾಭ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿಗೆ 197 ಕೋಟಿ ರುಪಾಯಿ ಲಾಭ ಬಂದಿತ್ತು.
ಮೈಂಡ್ ಟ್ರೀ: ಜನವರಿ 1 ರಿಂದ ಅನ್ವಯವಾಗುವಂತೆ ಸಂಬಳ ಏರಿಕೆ
ಕಾರ್ಯ ನಿರ್ವಹಣೆಯಿಂದ ಸಮಗ್ರ ಆದಾಯ 3% ಹೆಚ್ಚಳವಾಗಿ 2024 ಕೋಟಿ ರುಪಾಯಿ ಬಂದಿದೆ. 2019ರ ಡಿಸೆಂಬರ್ ತ್ರೈಮಾಸಿಕದಲ್ಲಿ ಇದು 1965 ಕೋಟಿ ರುಪಾಯಿ ಇತ್ತು. ವರ್ಷದಿಂದ ವರ್ಷಕ್ಕೆ ಡಾಲರ್ ಆದಾಯ 0.4% ಇಳಿಕೆ ಕಂಡು, $ 274.1 ಮಿಲಿಯನ್ ತಲುಪಿದೆ.
ಎನ್ ಎಸ್ ಇ ಮುಕ್ತಾಯದಲ್ಲಿ ಸೋಮವಾರ ಮೈಂಡ್ ಟ್ರೀ ಕಂಪೆನಿಯ ಷೇರಿನ ದರ 2% ಕುಸಿದು, ರು. 1658.45ರೊಂದಿಗೆ ವಹಿವಾಟು ಮುಗಿಸಿದೆ. ಕ್ಲೌಡ್, ಡೇಟಾ ಮತ್ತು ಅನಲಿಟಕ್ಸ್ ಸಾಮರ್ಥ್ಯಕ್ಕೆ ಭಾರೀ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಎಲ್ಲ ವ್ಯವಹಾರದಲ್ಲೂ ಉತ್ತಮ ಬೇಡಿಕೆ ಬಂದಿದೆ ಎಂದು ಕಂಪೆನಿಯಿಂದ ತಿಳಿಸಲಾಗಿದೆ.
English summary