For Quick Alerts
ALLOW NOTIFICATIONS  
For Daily Alerts

ವಿಪ್ರೋದಿಂದ 9,500 ಕೋಟಿ ರುಪಾಯಿಯ ಷೇರು ಮರು ಖರೀದಿ

|

ಬೆಂಗಳೂರು ಮೂಲದ ಐ.ಟಿ. ಸೇವಾ ಕಂಪೆನಿ ವಿಪ್ರೋ ಆಡಳಿತ ಮಂಡಳಿಯಿಂದ ಮಂಗಳವಾರ 9,500 ಕೋಟಿ ರುಪಾಯಿಯ ಷೇರು ಮರು ಖರೀದಿ (ಬೈ ಬ್ಯಾಕ್) ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿದೆ. ವಿಪ್ರೋದ 23.75 ಕೋಟಿ ಷೇರುಗಳನ್ನು ಪ್ರತಿ ಷೇರಿಗೆ 400 ರುಪಾಯಿಯಂತೆ 9500 ಕೋಟಿ ದಾಟದಂತೆ ಬೈ ಬ್ಯಾಕ್ ಗೆ ಯೋಜನೆ ರೂಪಿಸಲಾಗಿದೆ.

 

ಮಂಗಳವಾರದ (ಅಕ್ಟೋಬರ್ 13, 2020) ಕೊನೆಗೆ ಎನ್ ಎಸ್ ಇಯಲ್ಲಿ ವಿಪ್ರೋ ಷೇರಿನ ಬೆಲೆ 375.25 ರು. ಇದೆ. ಇನ್ನು ವಿಪ್ರೋದಿಂದ ಜೂನ್ ನಿಂದ ಸೆಪ್ಟೆಂಬರ್ ಕೊನೆಯ ಎರಡನೇ ತ್ರೈಮಾಸಿಕಕ್ಕೆ 2484.4 ಕೋಟಿ ಲಾಭವನ್ನು ಘೋಷಣೆ ಮಾಡಲಾಗಿದೆ.

ಆರ್ಥಿಕ ಬಿಕ್ಕಟ್ಟಿನ ನಡುವೆಯೂ ವಿಪ್ರೋ ಸಿಇಓ ವೇತನ ಭಾರೀ ಏರಿಕೆ

ಕಳೆದ ವರ್ಷ ವಿಪ್ರೋದಿಂದ 33.3 ಕೋಟಿ ಷೇರುಗಳನ್ನು ಪ್ರತಿ ಷೇರಿಗೆ 325 ರುಪಾಯಿಯಂತೆ, ಸರಾಸರಿ 10,500 ಕೋಟಿ ಮೊತ್ತಕ್ಕೆ ಬೈಬ್ಯಾಕ್ ಘೋಷಣೆ ಮಾಡಿತ್ತು. ಕಳೆದ ವಾರವಷ್ಟೇ ಟಾಟಾ ಕನ್ಸಲ್ಟ್ಟೆನ್ಸಿ ಸರ್ವೀಸಸ್ (ಟಿಸಿಎಸ್)ನಿಂದ ಪ್ರತಿ ಷೇರಿಗೆ 3000 ರುಪಾಯಿಯಂತೆ 16 ಸಾವಿರ ಕೋಟಿ ರುಪಾಯಿಗೆ ಬೈ ಬ್ಯಾಕ್ ಗೆ ಘೋಷಣೆ ಮಾಡಲಾಗಿದೆ.

ವಿಪ್ರೋದಿಂದ  9,500 ಕೋಟಿ ರುಪಾಯಿಯ ಷೇರು ಮರು ಖರೀದಿ

2017 ಹಾಗೂ 2018ರಲ್ಲಿ ಕೂಡ ಟಿಸಿಎಸ್ ಇದೇ ಗಾತ್ರದಲ್ಲಿ ಬೈ ಬ್ಯಾಕ್ ಆಫರ್ ಘೋಷಣೆ ಮಾಡಿತ್ತು. ಅಂದ ಹಾಗೆ ಈ ಬಾರಿ, ಅದರ ಹಿಂದಿನ ದಿನದ ವಹಿವಾಟು ಮುಕ್ತಾಯದ ಷೇರಿನ ಮೊತ್ತಕ್ಕಿಂತ 9.6% ಹೆಚ್ಚಿನ ಮೊತ್ತಕ್ಕೆ ಅಂದರೆ, ಟಿಸಿಎಸ್ ನಿಂದ ಪ್ರತಿ ಷೇರಿಗೆ 3000 ರುಪಾಯಿಯಂತೆ ಬೈ ಬ್ಯಾಕ್ ಘೋಷಣೆ ಮಾಡಲಾಗಿದೆ.

English summary

IT Services Major Wipro Announces 9500 Crore Share Buyback

Bengaluru based IT services major Wipro announces 9500 crore share buyback on October 13, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X