For Quick Alerts
ALLOW NOTIFICATIONS  
For Daily Alerts

ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೇಜೋಸ್ ಮೊಬೈಲ್‌ಗೆ ಕನ್ನ ಹಾಕಿದ್ದ ಸೌದಿ ರಾಜಕುಮಾರ!

|

ವಿಶ್ವದ ಶ್ರೀಮಂತ ವ್ಯಕ್ತಿ, ಅಮೆಜಾನ್ ಸಂಸ್ಥಾಪಕ ಜೆಫ್ ಬೇಜೋಸ್ ಮೊಬೈಲ್ ಫೋನ್ ಹ್ಯಾಕ್ ಆಗಿತ್ತು ಎಂದು ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ ಅದು ಕೂಡ ಸೌದಿ ಅರೇಬಿಯಾದ ರಾಜಕುಮಾರನಿಂದ ಸಂದೇಶವನ್ನು ಸ್ವೀಕರಿಸಿದ ಬಳಿಕ ಜೆಫ್ ಬೇಜೋಸ್ ಮೊಬೈಲ್ ಹ್ಯಾಕ್ ಆಗಿತ್ತು ಎಂದು ವರದಿ ಪ್ರಕಟಿಸಿದೆ.

ಬ್ರಿಟಿಸ್ ಡೈಲಿ ಪ್ರಕಾರ, ಮೊಹಮ್ಮದ್ ಬಿನ್ ಸಲ್ಮಾನ್ ಬಳಸಿದ ಮೊಬೈಲ್ ಸಂಖ್ಯೆಯಿಂದ ಜೆಫ್ ಬೇಜೋಸ್‌ಗೆ ಸಂದೇಶವೊಂದು ಬಂದಿದೆ. ಎನ್‌ಕ್ರಿಪ್ಟ್ ಮಾಡಲಾದ ಈ ಸಂದೇಶವು ದುರುದ್ದೇಶದಿಂದ ಕೂಡಿದ ಫೈಲ್‌ ಅನ್ನು ಒಳಗೊಂಡಿದ್ದು ಬೇಜೋಸ್ ಫೋನ್‌ಗೆ ಬಂದಿದೆ. ಜೊತೆಗೆ ಸೌದಿ ರಾಜಕುಮಾರ ಖಾತೆಯಿಂದ ಕಳುಹಿಸಲಾಗಿದೆ ಎನ್ನಲಾದ ಸೋಂಕಿತ ವೀಡಿಯೋ ಫೈಲ್‌ನಿಂದ ಮೊಬೈಲ್‌ನಲ್ಲಿರುವ ಮಾಹಿತಿಯನ್ನು ರವಾನಿಸಬಹುದು ಎಂದು ವಿಶ್ಲೇಷಣೆ ಮಾಡಲಾಗಿದೆ.

 

"ಆ ವರ್ಷದ ಮೇ 1 ರಂದು ಫೈಲ್ ಕಳುಹಿಸಿದಾಗ ಇಬ್ಬರು ಸ್ನೇಹಪರವಾಗಿ ವಾಟ್ಸ್‌ ಆ್ಯಪ್ ವಿನಿಮಯವನ್ನು ಹೊಂದಿದ್ದರು" ಎಂದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಗಾರ್ಡಿಯನ್ ಹೇಳಿದೆ.

ಜೆಫ್ ಬೇಜೋಸ್ ಮೊಬೈಲ್‌ಗೆ ಕನ್ನ ಹಾಕಿದ್ದ ಸೌದಿ ರಾಜಕುಮಾರ!

ಹೀಗೆ ಮೊಬೈಕ್ ಹ್ಯಾಕಿಂಗ್ ಬಗ್ಗೆ, ಭದ್ರತಾ ಉಲ್ಲಂಘನೆ ಬಗ್ಗೆ ಮಾಹಿತಿ ವಿವರಗಳು ಸ್ಪಷ್ಟವಾಗಿಲ್ಲವಾದರೂ, ಬೇಜೋಸ್ ತನ್ನ ಪತ್ನಿಗೆ ಡಿವೋರ್ಸ್ ನೀಡುವ ವೇಳೆ ತನ್ನ ಮೊಬೈಲ್ ಹ್ಯಾಕ್ ಆಗಿದೆ ಎಂದು ಅವರ ಅರಿವಿಗೆ ಬಂದಿದೆ. ಬೆಜೋಸ್ ಮತ್ತು ಅವರ ಪತ್ನಿ ಮ್ಯಾಕೆಂಜಿ ಅವರು 25 ವರ್ಷಗಳ ಮದುವೆಯ ನಂತರ ಬೇರ್ಪಡುವುದಾಗಿ ಘೋಷಿಸಿದ ಸುಮಾರು ಒಂದು ವರ್ಷದ ನಂತರ ಇದು ತಿಳಿದು ಬಂದಿದೆ.

ಬೇಜೋಸ್ ವಿಚ್ಛೇದನ ಅಂತಿಮಗೊಳಿಸಿದ ಒಂದು ವರ್ಷದ ನಂತರ, ಬ್ಲಾಗ್ ಪೋಸ್ಟ್‌ನಲ್ಲಿ ಬೇಜೋಸ್ ಮೊಬೈಲ್ ಸಂದೇಶಗಳು, ಫೋಟೋ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಅಮೆರಿಕಾದ ಟ್ಯಾಬ್ಲಾಯ್ಡ್ ವ್ಯಾಪ್ತಿಯ ಹಿಂದೆ ಯಾವುದೇ ರಾಜಕೀಯ ಪ್ರೇರಣೆ ಅಥವಾ ಹೊರಗಿನ ಶಕ್ತಿ ಇಲ್ಲ ಎಂದು ಟ್ಯಾಬ್ಲಾಯ್ಡ್ ಹೇಳಿತ್ತು.

ಬೇಜೋಸ್ ಮತ್ತು ಮಾಜಿ ಟೆಲಿವಿಷನ್ ಆ್ಯಂಕರ್ ಲಾರೆನ್ ಸ್ಯಾಂಚೆಜ್ ನಡುವೆ ವಿವಾಹೇತರ ಸಂಬಂಧವಿದೆ ಎಂದು ಅಮೆರಿಕಾ ಟ್ಯಾಬ್ಲಾಯ್ಡ್ 'ನ್ಯಾಷನಲ್ ಎನ್‌ಕ್ವೈರರ್' ಬಹಿರಂಗಪಡಿಸಿತ್ತು. ಬೇಜೋಸ್ ಕಳುಹಿಸಿದ ಸಂದೇಶಗಳಿವೆ ಎಂದು ತಿಳಿಸಲಾಗಿತ್ತು.

ಆದಾಗ್ಯೂ, ಬೆಜೋಸ್‌ನ ಭದ್ರತಾ ಸಲಹೆಗಾರ ಗೇವಿನ್ ಡಿ ಬೆಕರ್ ದಿ ಗಾರ್ಡಿಯನ್‌ಗೆ ತಿಳಿಸಿದ್ದು, ಎನ್‌ಕ್ವೈರರ್ ಈ ಸಂಬಂಧವನ್ನು ಬಹಿರಂಗಪಡಿಸುವ ಮೊದಲು ಸೌದಿ ಅರೇಬಿಯಾದ ಸರ್ಕಾರವು ಬೆಜೋಸ್‌ನ ಫೋನ್‌ ಹ್ಯಾಕ್ ಮಾಡಿದೆ ಎಂದು ನಂಬಿದ್ದೇವೆ ಎಂದಿದ್ದಾರೆ.

English summary

Jeff Bezos Mobile Hacked By Saudi Crown Prince Said Report

According to Guardian Amazon founder Jeff Bezos’s mobile phone was hacked after receiving a message from the Saudi Arabian crown prince
Story first published: Wednesday, January 22, 2020, 17:31 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more