For Quick Alerts
ALLOW NOTIFICATIONS  
For Daily Alerts

Launched Jio 5G Network: ಭಾರತದಲ್ಲಿ ಜ.24 ರಿಂದಲೇ ಜಿಯೊ 5ಜಿ ನೆಟ್‌ವರ್ಕ್‌ ಸೇವೆ ಆರಂಭ

ವೇಗದ ಅಂತರ್ಜಾಲ ಸೇವೆ ನೀಡುವ ರಿಲಯನ್ಸ ಜಿಯೋ ಕಂಪನಿ ಮಹತ್ವದ ಘೋಷಣೆ ಮಾಡಿದೆ. ದೇಶಾದ್ಯಂತ ಅನೇಕ ನಗರಗಳಲ್ಲಿ ಜಿಯೋ 5G ಸೇವೆ ಇಂದಿನಿಂದ (ಜ.24) ಆರಂಭಿಸುವುದಾಗಿ ತಿಳಿಸಿದೆ. ಅವು ಯಾವ ನಗರಗಳು, ಎಷ್ಟು ನಗರಗಳಿಗೆ ಈ ಸೇವೆ ವಿಸ್ತರಣೆ ಆಗಿದೆ ಎಂದು ಸಮಗ್ರ ಮಾಹಿತಿ ಇಲ್ಲಿದ

|

ನವದೆಹಲಿ, ಜನವರಿ 24: ಭಾರತದಲ್ಲಿ ಉದ್ದೇಶಿತ ರಿಲಯನ್ಸ ಜಿಯೋ 5G ನೆಟ್‌ವರ್ಕ್ ಸೇವೆ ಆರಂಭಿಸುವುದಾಗಿ ಕಂಪನಿ ತಿಳಿಸಿದೆ. ದೇಶದ ಬೃಹತ್ ನಗರಗಳು ಸೇರಿದಂತೆ ಒಟ್ಟು 50 ನಗರಗಳ ಜನರು 5G ಸೇವೆ ಆನಂದಿಸಲಿದ್ದಾರೆ.

ಈ ಬಗ್ಗೆ ರಿಲಯನ್ಸ ಜಿಯೋ ಕಂಪನಿ ಮಂಗಳವಾರ ಅಧಿಕೃತವಾಗಿ ಘೋಷಿಸಿದೆ. ಗೋವಾ, ಹರಿಯಾಣ, ಜಾರ್ಖಂಡ್, ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಪುದುಚೇರಿ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, , ಕೇರಳ ಹಾಗೂ ಕರ್ನಾಟಕದಲ್ಲಿ ನಿಗದಿತ ನಗರಗಳಲ್ಲಿ ಜಿಯೋ 5G ಸೇವೆ ಇಂದಿನಿಂದ ಲಭ್ಯವಾಗಲಿದೆ.

ಕರ್ನಾಟಕದಲ್ಲಿ ಇವಿ ರಿಜಿಸ್ಟ್ರೇಷನ್ ಶೇ.1,500ರಷ್ಟು ಏರಿಕೆ, ಬೆಂಗಳೂರು ಟಾಪ್ಕರ್ನಾಟಕದಲ್ಲಿ ಇವಿ ರಿಜಿಸ್ಟ್ರೇಷನ್ ಶೇ.1,500ರಷ್ಟು ಏರಿಕೆ, ಬೆಂಗಳೂರು ಟಾಪ್

ದೇಶದ ಪ್ರಮುಖ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 50 ನಗರಗಳಲ್ಲಿ ಜಿಯೋ ಟ್ರೂ 5G ಸೇವೆ ಆರಂಭವಿಸಲು ಕಂಪನಿ ಉತ್ಸುಕವಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು 180ಕ್ಕೂ ಹೆಚ್ಚು ನಗರಗಳ ಜನರು ಜಿಯೋ ಸೇವೆಯ ಫಲಾನುಭವಗಿಳು ಆಗುತ್ತಿದ್ದಾರೆ ಎಂದು ಕಂಪನಿ ಹರ್ಷ ವ್ಯಕ್ತಪಡಿಸಿದೆ. ಅಂತರ್ಜಾಲ ವಲಯದಲ್ಲೇ ಕ್ರಾಂತಿ ಆರಂಭವಾಗುವಂತ ಈ ಬೃಹತ್ ಘೋಷಣೆ ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೇ ಇತರ ದೇಶಗಳಲ್ಲಿ 5G ಸೇವೆಗಳ ಬೃಹತ್ ಘೋಷಣೆಯೇ ಆಗಿದೆ ಎಂದು ಜಿಯೋ ಕಂಪನಿ ವಕ್ತಾರರು ತಿಳಿಸಿದ್ದಾರೆ.

Jio 5G Network: ಭಾರತದಲ್ಲಿ ಜ.24ರಿಂದ ಜಿಯೊ 5ಜಿ ಸೇವೆ ಆರಂಭ

ಜನವರಿ 24 ಇಂದಿನಿಂದ ಆರಂಭವಾಗಿರುವ ಈ ಜಿಯೋ ಉನ್ನತ ಸೇವೆಗೆ ಯಾವುದೇ ಹೆಚ್ಚುವರಿ ಇಲ್ಲ ಎಂದು ತಿಳಿಸಿದೆ. 1 Gbps ವೇಗದಲ್ಲಿ ಅನಿಯಮಿತವಾಗಿ ಡೇಟಾ ಬಳಸಬಹುದಾಗಿದೆ. ಇದರಿಂದ ಇನ್ನಷ್ಟು ವೇಗ ದೊರೆಯಲಿದೆ. ದೇಶದ ಎಲ್ಲ ರಂಗಗಳಲ್ಲಿಯೂ ಈ ಸೇವೆಯು ತ್ವರಿತಗತಿ ಪ್ರಗತಿಗೆ ನೆರವಾಗಲಿದೆ.

ಜಿಯೋ ಕಂಪನಿ 5G ಸೇವೆ ಆರಂಭಿಸಿರುವ ನಗರಗಳು ಯಾವವು? ತಿಳಿಯಿರಿ

- ಓಂಗೋಲ್, ಆಂಧ್ರಪ್ರದೇಶ

- ರಾಜಮಹೇಂದ್ರವರಂ, ಆಂಧ್ರಪ್ರದೇಶ

- ಶ್ರೀಕಾಕುಳಂ, ಆಂಧ್ರಪ್ರದೇಶ

- ವಿಜಯನಗರಂ, ಆಂಧ್ರಪ್ರದೇಶ

- ನಾಗಾನ್, ಅಸ್ಸಾಂ

- ಚಿತ್ತೂರು, ಆಂಧ್ರಪ್ರದೇಶ

- ಕಡಪ, ಆಂಧ್ರಪ್ರದೇಶ

- ನರಸರಾವ್‌ಪೇಟೆ, ಆಂಧ್ರಪ್ರದೇಶ

- ಬಿಲಾಸ್‌ಪುರ, ಛತ್ತೀಸ್‌ಗಢ

- ಕೊರ್ಬಾ, ಛತ್ತೀಸ್‌ಗಢ

- ರಾಜನಂದಗಾಂವ್, ಛತ್ತೀಸ್‌ಗಢ

- ಕರ್ನಾಲ್, ಹರಿಯಾಣ

- ಪಾಣಿಪತ್, ಹರಿಯಾಣ

- ರೋಹ್ಟಕ್, ಹರಿಯಾಣ

- ಸಿರ್ಸಾ, ಹರಿಯಾಣ

- ಸೋನಿಪತ್, ಹರಿಯಾಣ

- ಧನ್ಬಾದ್, ಜಾರ್ಖಂಡ್

- ಬಹದ್ದೂರ್‌ಗಢ, ಹರಿಯಾಣ

- ಹಿಸಾರ್, ಹರಿಯಾಣ

- ಪಣಜಿ, ಗೋವಾ

- ಅಂಬಾಲಾ, ಹರಿಯಾಣ

- ಹಾಸನ, ಕರ್ನಾಟಕ

- ಮಂಡ್ಯ, ಕರ್ನಾಟಕ

- ತುಮಕೂರು, ಕರ್ನಾಟಕ

- ಬಾಗಲಕೋಟೆ, ಕರ್ನಾಟಕ

- ಚಿಕ್ಕಮಗಳೂರು, ಕರ್ನಾಟಕ

- ಧರ್ಮಪುರಿ, ತಮಿಳುನಾಡು

- ಈರೋಡ್, ತಮಿಳುನಾಡು

- ತೂತುಕುಡಿ, ತಮಿಳುನಾಡು

- ಬಾಲಸೋರ್, ಒಡಿಶಾ

- ಬರಿಪಾದ, ಒಡಿಶಾ

- ಭದ್ರಕ್, ಒಡಿಶಾ

Jio 5G Network: ಭಾರತದಲ್ಲಿ ಜ.24ರಿಂದ ಜಿಯೊ 5ಜಿ ಸೇವೆ ಆರಂಭ

- ಜರ್ಸುಗುಡ, ಒಡಿಶಾ

- ಪುರಿ, ಒಡಿಶಾ

- ಸಂಬಲ್ಪುರ್, ಒಡಿಶಾ

- ಆಲಪ್ಪುಳ, ಕೇರಳ

- ಕೊಲ್ಲಾಪುರ, ಮಹಾರಾಷ್ಟ್ರ

- ನಾಂದೇಡ್-ವಘಾಲಾ, ಮಹಾರಾಷ್ಟ್ರ

- ಸಾಂಗ್ಲಿ, ಮಹಾರಾಷ್ಟ್ರ

- ಪುದುಚೇರಿ, ಪುದುಚೇರಿ

- ಅಮೃತಸರ, ಪಂಜಾಬ್

- ಬಿಕಾನೇರ್, ರಾಜಸ್ಥಾನ

- ಕೋಟಾ, ರಾಜಸ್ಥಾನ

- ಮೊರಾದಾಬಾದ್, ಉತ್ತರ ಪ್ರದೇಶ

- ಸಹರಾನ್‌ಪುರ, ಉತ್ತರ ಪ್ರದೇಶ

- ಅಸನ್ಸೋಲ್, ಪಶ್ಚಿಮ ಬಂಗಾಳ

- ದುರ್ಗಾಪುರ, ಪಶ್ಚಿಮ ಬಂಗಾಳ

- ನಲ್ಗೊಂಡ, ತೆಲಂಗಾಣ

- ಝಾನ್ಸಿ, ಉತ್ತರ ಪ್ರದೇಶ

- ಅಲಿಗಢ, ಉತ್ತರ ಪ್ರದೇಶ

English summary

Jio 5G Network Services started in 184 Cities Across India

Launched Jio 5G Network: Jio 5G network service has started in total 184 major cities including Indian cities from today.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X