For Quick Alerts
ALLOW NOTIFICATIONS  
For Daily Alerts

ಜಿಯೊ ಅಡ್ವಾನ್ಸ್ ರೀಚಾರ್ಜ್ ಮಾಡಿಸಿ ಹಣ ಉಳಿಸಿ

|

ಈಗಾಗಲೇ ಡಿಸೆಂಬರ್ 3ರಿಂದ ಅನ್ವಯವಾಗುವಂತೆ ವೊಡಾಫೋನ್-ಐಡಿಯಾ, ಏರ್‌ಟೆಲ್‌ ಕಂಪನಿಗಳು ಕರೆ ಹಾಗೂ ಡೇಟಾ ದರಗಳನ್ನು ಏರಿಕೆ ಮಾಡಿದ್ದಾಗಿದೆ. ಜಿಯೋ ಕೂಡ ತನ್ನ ಯೋಜನೆಗಳ ದರವನ್ನು ಶೇಕಡಾ 40ರಷ್ಟು ಏರಿಕೆ ಮಾಡಲಿದೆ. ಶುಕ್ರವಾರ (ಡಿಸೆಂಬರ್‌ 6) ಜಿಯೋ ತನ್ನ ಹೊಸ 'ಆಲ್‌ ಇನ್ ಒನ್' ಯೋಜನೆಯನ್ನ ಜಾರಿಗೆ ತರಲಿದೆ. ಜೊತೆಗೆ ಶೇಕಡಾ 40ರಷ್ಟು ದರ ಏರಿಕೆ ಆಗಲಿದೆ.

ಜಿಯೋ ಗ್ರಾಹಕರಿಗೆ ಇಲ್ಲಿದೆ ಗುಡ್‌ ನ್ಯೂಸ್

ಜಿಯೊ ದರ ಏರಿಕೆಗೂ ಮುನ್ನ ಗ್ರಾಹಕರು ಈ ರೀತಿ ಮಾಡಿದ್ದಲ್ಲಿ ಹಣ ಉಳಿಸಬಹುದಾಗಿದೆ. ಏಕೆಂದರೆ ಶುಕ್ರವಾರದ ಬಳಿಕ ಜಿಯೊ ಪ್ರಿಪೇಯ್ಡ್ ಪ್ಲಾನ್‌ಗಳ ದರ ಹೆಚ್ಚಾಗಲಿದೆ. ಈಗಾಗಲೇ ಪ್ರಚಲಿತದಲ್ಲಿರುವ 399 ಹಾಗೂ 444 ಪ್ಲಾನ್‌ಗಳ ಬೆಲೆಯಲ್ಲೂ ಬದಲಾವಣೆ ಆಗಲಿದೆ.

 

ಸುಮಾರು 1 ವರ್ಷದ ಮಟ್ಟಿಗೆ ಈಗಿರುವ ದರದಲ್ಲೇ ನೀವು ಸೌಲಭ್ಯಗಳನ್ನು ಪಡೆಯಬೇಕಾದ್ರೆ ಅಡ್ವಾನ್ಸ್ ರೀಚಾರ್ಜ್ ಅವಕಾಶವನ್ನು ಜಿಯೊ ನೀಡಿದೆ. ಸದ್ಯ ಈಗಿರುವ ಪ್ಲಾನ್ 149 ರುಪಾಯಿ ರೀಚಾರ್ಜ್ ಮಾಡಿದರೆ 24 ದಿನಗಳ ವ್ಯಾಲಿಡಿಟಿ ಇದೆ. 444 ರೀಚಾರ್ಜ್ ಮಾಡಿದರೆ 84 ದಿನಗಳ ವ್ಯಾಲಿಡಿಟಿ, 1,699 ರೀಚಾರ್ಜ್ ಮಾಡಿಸಿದರೆ 365 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ.

ಜಿಯೊ ಅಡ್ವಾನ್ಸ್ ರೀಚಾರ್ಜ್ ಮಾಡಿಸಿ ಹಣ ಉಳಿಸಿ

ಡಿಸೆಂಬರ್ 6ರ ಬಳಿಕ ಈ ಮೇಲಿನ ಯೋಜನೆಗಳನ್ನು ರೀಚಾರ್ಜ್ ಮಾಡಲು ಹೆಚ್ಚುವರಿ ಹಣ ನೀಡಬೇಕಾಗಬಹುದು. ಏಕೆಂದರೆ ದರ ಏರಿಕೆಯಾಗುವ ಜೊತೆಗೆ ಬೇರೆ ಆಫರ್ ಗಳು ಬಿಡುಗಡೆಯಾಗ್ತಿವೆ. ಹೀಗಾಗಿ ಇದೇ ದರದಲ್ಲಿ ನೀವು ಸೌಲಭ್ಯ ಪಡೆಯಬೇಕಾದ್ರೆ ಅಡ್ವಾನ್ಸ್ ರೀಚಾರ್ಜ್ ಮಾಡಿಸಬಹುದು.

ಉದಾಹರಣೆಗೆ ನೀವು 444 ರುಪಾಯಿಯ ಯೋಜನೆಯನ್ನು ರೀಚಾರ್ಜ್ ಮಾಡಲು ಬಯಸಿದರೆ ಅದರ ವ್ಯಾಲಿಡಿಟಿ 84 ದಿನಗಳು ಹಾಗೂ ಪ್ರತಿದಿನ 2 ಜಿಬಿ ಡೇಟಾ ಜೊತೆಗೆ ಅನ್‌ಲಿಮಿಟೆಡ್(1000 ನಿಮಿಷಗಳು) ಕರೆಗಳ ಸೌಲಭ್ಯವಿದೆ. ಇದೇ ಯೋಜನೆಯನ್ನು ನೀವು ಬೇಕಾದಲ್ಲಿ ನಾಲ್ಕು ಬಾರಿ ರೀಚಾರ್ಜ್ ಮಾಡಿದರೆ 334 ದಿನಗಳ ವರೆಗೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ಸೌಲಭ್ಯವನ್ನು ಪಡೆಯಬಹುದು.

444 ಯೋಜನೆಯ ರೀಚಾರ್ಜ್ ವ್ಯಾಲಿಡಿಟಿ ಮುಗಿದ ಬಳಿಕವಷ್ಟೇ ನಿಮ್ಮ ಅಡ್ವಾನ್ಸ್ ರೀಚಾರ್ಜ್‌ ಯೋಜನೆಯು ಚಾಲನೆಗೆ ಬರಲಿದೆ. ಹೀಗಾಗಿ ಒಮ್ಮೆಲೆ ನಾಲ್ಕು ಬಾರಿ ರೀಚಾರ್ಜ್ ಮಾಡಿದರೆ ನೀವು 334 ದಿನಗಳ ವರೆಗೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ಪ್ರಸ್ತುತ ಇರುವ ಸೌಲಭ್ಯವನ್ನು ಪಡೆಯಬಹುದು.

English summary

Jio Advance Recharge Plans Can Save Your Money

Jio will Increase the prices of its recharge plans from this friday. Jio's advance recharge plans can save you from tariff hike for a year.
Story first published: Tuesday, December 3, 2019, 16:09 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more