For Quick Alerts
ALLOW NOTIFICATIONS  
For Daily Alerts

ಜಿಯೋ ಬಳಕೆದಾರರಿಗೆ ಹೊಸ ಪ್ಲ್ಯಾನ್ : ಡಿಸ್ನಿ+ ಹಾಟ್‌ಸ್ಟಾರ್‌ FREE

|

ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಹೊಸ ಶ್ರೇಣಿಯ ಪ್ರಿಪೇಯ್ಡ್ ಯೋಜನೆಗಳನ್ನು ಆರಂಭಿಸಿದೆ. ಡಿಸ್ನಿ+ ಹಾಟ್‌ಸ್ಟಾರ್‌ ನಲ್ಲಿರುವ ಎಲ್ಲಾ ಸಿನಿಮಾ, ಸೀರೀಸ್‌ಗಳನ್ನು ನೋಡುವ ಅವಕಾಶವನ್ನು ಈ ಪ್ಲಾನ್‌ಗಳು ಒಳಗೊಂಡಿರಲಿದೆ. ಇದರಿಂದ ಜಿಯೋ ಗ್ರಾಹಕರಿಗೆ ಮತ್ತಷ್ಟು ಲಾಭವಾಗಲಿದೆ.

 

ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಯೋಜನೆ ಮತ್ತು ಕೊಡುಗೆಗಳನ್ನು ಪರಿಷ್ಕರಿಸುತ್ತಿರುವ ಜಿಯೋ, ಹಿಂದಿನದಕ್ಕಿಂತ ಹೆಚ್ಚಿನ ವಿಷಯಗಳನ್ನು ನೋಡುವ ಅವಕಾಶವನ್ನು ಹೊಂದಿರುವ ಡಿಸ್ನಿ+ ಹಾಟ್‌ಸ್ಟಾರ್‌ನ 1 ವರ್ಷದ ಚಂದಾದಾರಿಕೆಯನ್ನು ನೀಡುವುದರ ಜೊತೆಗೆ ಅನಿಯಮಿತ ಧ್ವನಿ, ಡೇಟಾ, ಎಸ್‌ಎಂಎಸ್, ಜಿಯೋ ಆಪ್‌ಗಳು ಮತ್ತು ಇತರ ಪ್ರಯೋಜನಗಳನ್ನು ನೀಡಲಿದೆ.

ಹಳೇ ಜಿಯೋ ಪ್ಲಾನ್‌ಗಳು:

ಹಳೇ ಜಿಯೋ ಪ್ಲಾನ್‌ಗಳು:

ಮೊದಲು ಜಿಯೋ ತನ್ನ ಯೋಜನೆಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯನ್ನು ನೀಡುತ್ತಿತ್ತು. ಈ ಚಂದಾದಾರಿಕೆಯಲ್ಲಿ ಲೈವ್ ಕ್ರೀಡೆಗಳು, ಹಾಟ್ ಸ್ಟಾರ್ ವಿಶೇಷಗಳು, ಬ್ಲಾಕ್ ಬಸ್ಟರ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಿಗೆ ಬಳಕೆದಾರರು ಪ್ರವೇಶವನ್ನು ಪಡೆಯುತ್ತಿದ್ದರು. ಇದರೊಂದಿಗೆ 3 ಭಾರತೀಯ ಭಾಷೆಗಳಲ್ಲಿ ಡಬ್ ಮಾಡಲಾದ ಸಿನಿಮಾಗಳನ್ನ ನೋಡಬಹುದಾಗಿತ್ತು.

ಹೊಚ್ಚ ಹೊಸ ಯೋಜನೆಗಳು:

ಹೊಚ್ಚ ಹೊಸ ಯೋಜನೆಗಳು:

ಹೊಸ ಜಿಯೋ ಯೋಜನೆಗಳು ಡಿಸ್ನಿ+ ಹಾಟ್‌ಸ್ಟಾರ್ ನಲ್ಲಿರುವ ಎಲ್ಲಾ ಹೊಸ ವಿಷಯಗಳನ್ನು ನೋಡುವ ಅವಕಾಶ ನೀಡಲಿದೆ. ಡಿಸ್ನಿ+ ಓರಿಜಿನಲ್ಸ್‌, ಡಿಸ್ನಿ ಟಿವಿ ಶೋಗಳು ಸೇರಿದಂತೆ ಇಂಗ್ಲಿಷ್ ಭಾಷೆಯಲ್ಲಿ ಅಂತರಾಷ್ಟ್ರೀಯ ಕಂಟೆಂಟ್‌ಗಳನ್ನು ನೋಡುವ ಅವಕಾಶವನ್ನು ಮಾಡಿಕೊಡಲಿದೆ. ಇದರೊಂದಿಗೆ ಮಾರ್ವೆಲ್, ಸ್ಟಾರ್ ವಾರ್ಸ್, ನ್ಯಾಷನಲ್ ಜಿಯೋಗ್ರಾಫಿಕ್, HBO, FX, ಶೋಟೈಮ್ ಮತ್ತು ಇನ್ನಷ್ಟು ವಿಷಯಗಳಿಗೆ ಮುಕ್ತ ಪ್ರವೇಶವನ್ನು ನೀಡಲಿದೆ.

ಹೊಸ ಜಿಯೋ ಯೋಜನೆಗಳು ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ನೊಂದಿಗೆ:
 

ಹೊಸ ಜಿಯೋ ಯೋಜನೆಗಳು ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ನೊಂದಿಗೆ:

ಪ್ಲಾನ್‌ 1 :ರೂ. 499

ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 3 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್‌ ಕಳುಹಿಸುವ ಅವಕಾಶವು ದೊರೆಯಲಿದೆ. 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 499 ಪಾವತಿ ಮಾಡಬೇಕಾಗಿದೆ.

ಪ್ಲಾನ್‌ 2 :ರೂ. 666

ಪ್ಲಾನ್‌ 2 :ರೂ. 666

ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 2 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್‌ ಕಳುಹಿಸುವ ಅವಕಾಶವು ದೊರೆಯಲಿದೆ. 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 666 ಪಾವತಿ ಮಾಡಬೇಕಾಗಿದೆ.

ಪ್ಲಾನ್‌ 3 :ರೂ. 888

ಪ್ಲಾನ್‌ 3 :ರೂ. 888

ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 2 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್‌ ಕಳುಹಿಸುವ ಅವಕಾಶವು ದೊರೆಯಲಿದೆ. 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 888 ಪಾವತಿ ಮಾಡಬೇಕಾಗಿದೆ.

ಪ್ಲಾನ್‌ 4 :ರೂ. 2599 (ಒಂದು ವರ್ಷ ವ್ಯಾಲಿಡಿಟಿ)

ಪ್ಲಾನ್‌ 4 :ರೂ. 2599 (ಒಂದು ವರ್ಷ ವ್ಯಾಲಿಡಿಟಿ)

ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 2 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್‌ ಕಳುಹಿಸುವ ಅವಕಾಶವು ದೊರೆಯಲಿದೆ. 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 2599 ಪಾವತಿ ಮಾಡಬೇಕಾಗಿದೆ.

ಪ್ಲಾನ್‌ 5 :ರೂ. 549

ಪ್ಲಾನ್‌ 5 :ರೂ. 549

ಈ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 1.5 GB ಡೇಟಾವನ್ನು ಪಡೆಯಲಿದ್ದಾರೆ. 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಇದಕ್ಕಾಗಿ ರೂ. 549 ಪಾವತಿ ಮಾಡಬೇಕಾಗಿದೆ. (ಇದರಲ್ಲಿ ಉಚಿತ ಕರೆ ಸೌಲಭ್ಯವಿರುವುದಿಲ್ಲ)

ಈ ಹೊಸ ಪ್ಲಾನ್‌ ಗಳು 01ನೇ ಸೆಪ್ಟೆಂಬರ್ 2021 ರಿಂದ ಲಭ್ಯವಿರುತ್ತದೆ. ಸಕ್ರಿಯ ಡಿಸ್ನಿ+ ಹಾಟ್‌ಸ್ಟಾರ್ ಯೋಜನೆಗಳಲ್ಲಿರುವ ಎಲ್ಲಾ ಜಿಯೋ ಗ್ರಾಹಕರು ಅಸ್ತಿತ್ವದಲ್ಲಿರುವ ಪ್ರಯೋಜನಗಳನ್ನು ಅವರ ಪ್ರಸ್ತುತ ಚಂದಾದಾರಿಕೆ ಅವಧಿ ಮುಗಿಯುವವರೆಗೆ ಆನಂದಿಸುವುದನ್ನು ಮುಂದುವರಿಸುತ್ತಾರೆ.

 

English summary

Jio launches 5 prepaid recharge plans with free Disney+Hotstar subscription

Here the details of Reliance jio new 5 prepaid recharge plans which gives you free Disney + Hotstar Subscription
Story first published: Tuesday, August 31, 2021, 21:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X