For Quick Alerts
ALLOW NOTIFICATIONS  
For Daily Alerts

ಜಿಯೋದಿಂದ ಹೊಸ ರೂ 259 ಪ್ರಿ-ಪೇಯ್ಡ್ ಪ್ಲಾನ್ ಆರಂಭ

|

ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಜಿಯೋ ತನ್ನ ಪ್ರೀ-ಪೇಯ್ಡ್ ಗ್ರಾಹಕರಿಗಾಗಿ ಇದೇ ಮೊದಲ ಬಾರಿಗೆ 'ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿ' ಯೋಜನೆಯನ್ನು ಪ್ರಾರಂಭಿಸಿದೆ.

 

ಜಿಯೋ ಲಾಂಚ್ ಮಾಡಿರುವ ಹೊಸ ಪ್ಲಾನ್ ಪ್ರತಿ ತಿಂಗಳು ಅದೇ ದಿನಾಂಕದಂದು ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ, ಇದುವೇ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ನೀಡುವ ಸೇವೆಯಂತೆಯೇ ದೊರೆಯಲಿದೆ.

ಹೊಸದಾಗಿ ಲಾಂಚ್ ಮಾಡಿರುವ ಮಾಸಿಕ ಯೋಜನೆಯು ರೂ 259 ಬೆಲೆಯದ್ದಾಗಿದೆ ಮತ್ತು 1.5 GB ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು ಇತರ ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಲಿದ್ದು, ಮಾರ್ಚ್ 28 ರಂದು ಈ ಹೊಸ ಯೋಜನೆಯೂ ಜಾರಿಯಾಗಲಿದೆ.

ಜಿಯೋದಿಂದ ಹೊಸ ರೂ 259 ಪ್ರಿ-ಪೇಯ್ಡ್ ಪ್ಲಾನ್ ಆರಂಭ

ರೂ. 259 ಪ್ಲಾನ್ ವಿಶಿಷ್ಟವಾಗಿದೆ. ಈ ಹೊಸತನವು ಪ್ರಿಪೇಯ್ಡ್ ಬಳಕೆದಾರರಿಗೆ ಪ್ರತಿ ತಿಂಗಳು ಕೇವಲ ಒಂದು ರೀಚಾರ್ಜ್ ದಿನಾಂಕವನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ರೂ 259 ಯೋಜನೆಯನ್ನು ಒಂದೇ ಬಾರಿಗೆ ಹಲವಾರು ಬಾರಿ ರೀಚಾರ್ಜ್ ಮಾಡಬಹುದು. "ಮುಂಗಡ ರೀಚಾರ್ಜ್ ಮಾಡಲಾದ ಯೋಜನೆಯು ಸರದಿಯಲ್ಲಿ ಬಳಕೆಯಾಗುತ್ತದೆ ಮತ್ತು ಪ್ರಸ್ತುತ ಸಕ್ರಿಯ ಯೋಜನೆಯ ಮುಕ್ತಾಯದ ದಿನಾಂಕದಂದು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ, ಇದು ಮನಸ್ಸಿನ ಶಾಂತಿಯನ್ನು ನೀಡುತ್ತದೆ.

ರೂ 259 ಪ್ರಿ-ಪೇಯ್ಡ್ ರೀಚಾರ್ಜ್‌ನೊಂದಿಗೆ ನೀವು ಏನನ್ನು ನಿರೀಕ್ಷಿಸಬಹುದು:

- ದಿನಕ್ಕೆ 1.5 GB ಹೈಸ್ಪೀಡ್ ಡೇಟಾ, ಆನಂತರ 64 kpbs ವೇಗದ ಡೇಟಾ

- ಅನಿಯಮಿತ ಧ್ವನಿ ಕರೆ ಸೌಲಭ್ಯ

- ದಿನಕ್ಕೆ 100 SMS

- ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆ

- ಪ್ರತಿ ತಿಂಗಳು ಅದೇ ದಿನಾಂಕದಂದು ನವೀಕರಿಸುವ ಮಾಸಿಕ ಮಾನ್ಯತೆ

ಈ ಯೋಜನೆಯು ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿರುತ್ತದೆ.

English summary

Jio launches Rs 259 'calendar month validity' prepaid plan: Details here

Jio is the first in the industry to launch the 'calendar month validity' prepaid plan after TRAI's directive. Check recharge plan details here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X