For Quick Alerts
ALLOW NOTIFICATIONS  
For Daily Alerts

ಚೀನಾ ಬಿಟ್ಟು ಭಾರತಕ್ಕೆ ಬರುವ ಕಂಪೆನಿಗಳಿಗೆ ಜಪಾನ್ ಪ್ರೋತ್ಸಾಹ ಧನ

|

ಜಪಾನ್ ನ ಉತ್ಪಾದಕರು ಚೀನಾದಿಂದ ಹೊರಗೆ ಅಂದರೆ, ಭಾರತ ಅಥವಾ ಬಾಂಗ್ಲಾದೇಶ್ ಗೆ ಉತ್ಪಾದನಾ ಘಟಕವನ್ನು ಸ್ಥಳಾಂತರ ಮಾಡಿದರೆ ಅಂಥ ಕಂಪೆನಿಗಳಿಗೆ ಪ್ರೋತ್ಸಾಹ ಧನ ನೀಡಲು ತೀರ್ಮಾನ ಮಾಡಿದೆ. ಸರ್ಕಾರದ ವಿಸ್ತರಣೆ ಕಾರ್ಯಕ್ರಮದ ಭಾಗವಾಗಿ ಪೂರೈಕೆ ಜಾಲದಲ್ಲಿ ವೈವಿಧ್ಯ ತರಲು ಮುಂದಾಗಿದೆ.

ಒಂದು ನಿರ್ದಿಷ್ಟ ಪ್ರಾದೇಶಿಕ ವಲಯದ ಮೇಲೆ ಅವಲಂಬನೆ ಆಗದಿರಲು ಉದ್ದೇಶ ಹೊಂದಿರುವ ಜಪಾನ್, ತುರ್ತು ಸಮಯದಲ್ಲೂ ವೈದ್ಯಕೀಯ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಬಿಡಿಭಾಗಗಳು ಸ್ಥಿರವಾಗಿ ಪೂರೈಕೆ ಆಗುವ ನಿಟ್ಟಿನಲ್ಲಿ ಆಲೋಚಿಸುತ್ತಿದೆ ಎಂದು ನಿಕೈ ಏಷ್ಯನ್ ರಿವ್ಯೂವ್ ವರದಿ ಮಾಡಿದೆ.

2350 ಕೋಟಿ ಯೆನ್ ಮೀಸಲು
 

2350 ಕೋಟಿ ಯೆನ್ ಮೀಸಲು

ಜಪಾನ್ ಸರ್ಕಾರವು 2350 ಕೋಟಿ ಯೆನ್ (2.21 ಕೋಟಿ USD) ಹಣವನ್ನು 2020ನೇ ಇಸವಿಯ ಪೂರಕ ಬಜೆಟ್ ನಲ್ಲಿ ಇದಕ್ಕಾಗಿ ಮೀಸಲಿಡಲು ನಿರ್ಧರಿಸಿದೆ. ಜಪಾನ್ ಮೂಲದ ಕಂಪೆನಿಗಳು ASEAN ವಲಯದಾದ್ಯಂತ ಉತ್ಪಾದನಾ ಘಟಕಗಳನ್ನು ಶುರು ಮಾಡುವುದಕ್ಕೆ ಉತ್ತೇಜನ ನೀಡುವುದು ಪ್ರೋತ್ಸಾಹ ಧನ ಕೊಡುವುದರ ಉದ್ದೇಶವಾಗಿದೆ.

ಎರಡನೇ ಹಂತದ ಅರ್ಜಿ ಸೆಪ್ಟೆಂಬರ್ 3ರಿಂದ

ಎರಡನೇ ಹಂತದ ಅರ್ಜಿ ಸೆಪ್ಟೆಂಬರ್ 3ರಿಂದ

ಎರಡನೇ ಹಂತದ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯ ಸೆಪ್ಟೆಂಬರ್ 3ರಿಂದ ಶುರುವಾಗಿದೆ. ASEAN- ಜಪಾನ್ ಪೂರೈಕೆ ಜಾಲಕ್ಕೆ ಕೊಡುಗೆ ನೀಡುವ ಯೋಜನೆಗಳನ್ನು ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಅವುಗಳ ಉತ್ಪಾದನಾ ಘಟಕಗಳನ್ನು ಭಾರತ ಹಾಗೂ ಬಾಂಗ್ಲಾದೇಶ್ ನಲ್ಲಿ ಶುರು ಮಾಡುವ ಉದ್ದೇಶ ಹೊಂದಿದೆ ಎಂದು ಭಾವಿಸಲಾಗುತ್ತದೆ.

ಚೀನಾದ ಮೇಲೆ ಅವಲಂಬನೆ

ಚೀನಾದ ಮೇಲೆ ಅವಲಂಬನೆ

ಸದ್ಯಕ್ಕೆ ಪೂರೈಕೆ ಜಾಲದ ಜಪಾನ್ ಕಂಪೆನಿಗಳು ಬಹುವಾಗಿ ಚೀನಾದ ಮೇಲೆ ಅವಲಂಬಿತವಾಗಿವೆ. ಕೊರೊನಾ ಸಂದರ್ಭದಲ್ಲಿ ಪೂರೈಕೆ ಕಡಿತವಾಗಿತ್ತು. ಅಂದ ಹಾಗೆ ಜಪಾನ್ ನಿಂದ ಮೊದಲ ಹಂತದಲ್ಲಿ ಪ್ರೋತ್ಸಾಹ ಧನ ವಿತರಣೆಗೆ ಅರ್ಜಿ ಸ್ವೀಕೃತಿ ಜೂನ್ ನಲ್ಲಿ ಕೊನೆಯಾಗಿತ್ತು. ಮೂವತ್ತು ಉತ್ಪಾದನಾ ಯೋಜನೆಗಳಿಗೆ ಅನುಮತಿ ಸಿಕ್ಕಿತ್ತು. ಅದರಲ್ಲಿ ಹೋಯಾಸ್ ಮ್ಯಾನುಫ್ಯಾಕ್ಚರಿಂಗ್ ಸಹ ಸೇರಿತ್ತು. ಅದು ಎಲೆಕ್ಟ್ರಾನಿಕ್ ಬಿಡಿ ಭಾಗಗಳನ್ನು ಉತ್ಪಾದಿಸುವ ಕಂಪೆನಿ. ವಿಯೆಟ್ನಾಂ ಮತ್ತು ಲಾವೋಸ್ ನಲ್ಲಿ ಆರಂಭಿಸಿತು. ಅದಕ್ಕಾಗಿ 10 ಬಿಲಿಯನ್ ಯೆನ್ ಪ್ರೋತ್ಸಾಹ ಧನ ಸಿಕ್ಕಿತು.

English summary

Japan Government To Offer Incentives To Companies Shifting Base To India From China

Japan companies which shift base from China to India will get incentives.
Company Search
COVID-19