For Quick Alerts
ALLOW NOTIFICATIONS  
For Daily Alerts

Kannada Film Industry Round Up: ಕನ್ನಡ ನಟರ ಮಾರ್ಕೆಟ್, ರೇಟ್ ಇವತ್ತಿಗೆ ಎಷ್ಟು?

|

ಚಿತ್ರರಂಗ ಆನ್ನೋದು ಚಿತ್ರೋದ್ಯಮವಾಗಿ ಬಹಳ ಕಾಲವಾಗಿದೆ. ಈಗೆಲ್ಲ ಯಾವ ಡೈರೆಕ್ಟರ್, ನಟ- ನಟಿಯರ ಸಿನಿಮಾಗೆ ಎಷ್ಟು 'ಡಿಮ್ಯಾಂಡ್' ಇದೆ ಅನ್ನೋದರ ಮೇಲೆ ಸಂಭಾವನೆ ಫಿಕ್ಸ್ ಮಾಡಲಾಗುತ್ತದೆ. ಥಿಯೇಟರ್ ಗಳಲ್ಲಿ ಸಿನಿಮಾದ ಕಲೆಕ್ಷನ್ ಎಷ್ಟು ಎಂಬುದಕ್ಕಿಂತ ಹೆಚ್ಚಾಗಿ ಸ್ಯಾಟಲೈಟ್ ರೈಟ್ಸ್, ಡಿಜಿಟಲ್ ರೈಟ್ಸ್ (ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ಇತ್ಯಾದಿ), ಡಬ್ಬಿಂಗ್ ರೈಟ್ಸ್ (ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ ಮಾಡುವ ಹಕ್ಕು) ಎಷ್ಟಕ್ಕೆ ಸೇಲ್ ಆಗುತ್ತದೆ ಅನ್ನೋದೇ ಮುಖ್ಯ.

ಜತೆಗೆ ಒಂದು ಹಿಟ್ ಸಿನಿಮಾ ಸಂಭಾವನೆಯ ಲೆಕ್ಕಾಚಾರವನ್ನೇ ತಲೆಕೆಳಗು ಮಾಡಿಬಿಡಬಹುದು. ಈ ಲೇಖನದಲ್ಲಿ ಕನ್ನಡ ಸಿನಿಮಾ ನಟರ ಸಂಭಾವನೆ ಬಗ್ಗೆ ಇಂಟರೆಸ್ಟಿಂಗ್ ಡೀಟೇಲ್ಸ್ ಕೊಡ್ತಾ ಇದ್ದೀವಿ. ಕೆಲವು ನಟರು ತಾವು ಇಷ್ಟು ಸಂಭಾವನೆ ಅಂತ ಹೇಳಿಕೊಳ್ಳಬಹುದಾದರೂ ಬಹುತೇಕರು ಸಿನಿಮಾಗಳಲ್ಲಿ ಪ್ರೊಡ್ಯೂಸರ್ ಗಳ ಜತೆ ಪಾರ್ಟನರ್ ಗಳಾಗಿರುತ್ತಾರೆ.

 

ಮೂಲಗಳ ಪ್ರಕಾರ, ಕನ್ನಡದ ಹೆಸರಾಂತ ನಟರೊಬ್ಬರು ತಮ್ಮ ಸಿನಿಮಾಗಳನ್ನು ಒಂದೇ ಟೀವಿ ಚಾನಲ್ ಗೆ ಕೊಡುವಂತೆ ನೋಡಿಕೊಳ್ತಾರೆ. ಆ ಸ್ಯಾಟಲೈಟ್ ರೈಟ್ಸ್ ಹಣ ಅವರ ಸಂಭಾವನೆ ಆಗಿರುತ್ತದೆ. ಆದ್ದರಿಂದ ಬೇಡಿಕೆಯಲ್ಲಿ ಇರುವ ನಟರು ಸಿನಿಮಾಗೆ ಬಂದ ಲಾಭದಲ್ಲಿ ಇಂತಿಷ್ಟು ಪರ್ಸೆಂಟ್ ಲಾಭ ಎಂದು ಪಡೆಯುತ್ತಾರೆ.

ಬಹುತೇಕ ಟಾಪ್ ಹೀರೋಗಳು ಹೀಗೆ ಪರ್ಸೆಂಟೇಜ್ ತೆಗೆದುಕೊಂಡರೆ ದರ್ಶನ್ ಈ ವಿಚಾರದಲ್ಲಿ ಭಿನ್ನ. ಅವರು ಸಂಭಾವನೆಯನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಈ ಪರ್ಸೆಂಟೇಜ್ ಗೊಡವೆಗೆ ಹೋಗಲ್ಲ ಅನ್ನೋದು ಇಂಡಸ್ಟ್ರಿ ಟಾಕ್.

ಹಾಗಿದ್ದರೆ ಈಗಿನ ಸನ್ನಿವೇಶದಲ್ಲಿ ಯಾವ ಸಿನಿಮಾ ನಟರ ಸಂಭಾವನೆ ಎಷ್ಟು ಎಂಬುದನ್ನು ಮುಂದಿನ ಸ್ಲೈಡ್ ಗಳಲ್ಲಿ ನೋಡಿ.

ದರ್ಶನ್

ದರ್ಶನ್

ನಟ ದರ್ಶನ್ ಅವರ ಇತ್ತೀಚಿನ ಸಿನಿಮಾ ಯಜಮಾನ. ಅವರ ಸೋಲು- ಗೆಲುವು ಎಲ್ಲ ಪಕ್ಕಕ್ಕಿಟ್ಟು ಹೇಳಿದರೆ ಕನಿಷ್ಠ 20 ಕೋಟಿ ರುಪಾಯಿ ವ್ಯವಹಾರ ಆಗೇ ಆಗುತ್ತದೆ. 5.5 ಕೋಟಿ ರುಪಾಯಿ ದರ್ಶನ್ ಅವರು ಪಡೆಯುವ ಸಂಭಾವನೆ ಅನ್ನೋದು ಮೂಲಗಳ ಮಾಹಿತಿ. ಆದರೆ ಇದರಾಚೆಗೂ ಸಿನಿಮಾದಲ್ಲಿ ವ್ಯವಹಾರಗಳು ಇರುತ್ತವೆ. ಅಂದರೆ ಅದು ಆಯಾ ಹೀರೋಗೆ ಇರುವ ಮಾರುಕಟ್ಟೆ. ಕನಿಷ್ಠ ಇಪ್ಪತ್ತು ಕೋಟಿ ಅಂದ ಮೇಲೆ ಅದಕ್ಕಿಂತ ಹೆಚ್ಚು ಎಷ್ಟು ಬೇಕಾದರೂ ಆಗಬಹುದು. ನಿರ್ಮಾಪಕರು ಸರಿಯಾದ ಪ್ಲ್ಯಾನ್ ಮಾಡಿಕೊಂಡು, ನಿರ್ಮಾಣದಲ್ಲಿ ಲೆಕ್ಕಾಚಾರದ ಹೆಜ್ಜೆ ಇಟ್ಟರೆ ಸೋಲೇ ಇಲ್ಲ ಎಂಬುದು ಅನುಭವಸ್ಥರ ಮಾತು. ಯಜಮಾನ ಸಿನಿಮಾದ ಸ್ಯಾಟಲೈಟ್ ರೈಟ್ಸ್ ಐದು ಕೋಟಿಗೂ ಹೆಚ್ಚು, ಡಿಜಿಟಲ್ ರೈಟ್ಸ್ ಆರು ಕೋಟಿ ಹಾಗೂ ಚಿತ್ರಮಂದಿರದ ಕಲೆಕ್ಷನ್ ಎಂಟು ಕೋಟಿ ಎನ್ನುವ ಲೆಕ್ಕವು ಖಾಸಗಿಯಾಗಿ ಸಿಗುತ್ತವೆ.

ಯಶ್

ಯಶ್

ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ ಮೇಲೆ ಯಶ್ ರೇಂಜ್ ಬದಲಾಗಿದೆ. ಆದರೆ ಯಶ್ ಸಂಭಾವನೆ ಅಂತ ಹತ್ತು ಕೋಟಿ ರುಪಾಯಿ ತೆಗೆದುಕೊಂಡರೂ ಸಿನಿಮಾದ ಒಟ್ಟಾರೆ ಲಾಭದಲ್ಲಿ ಇಂತಿಷ್ಠು ಪರ್ಸೆಂಟ್ ಅಂತ ತೆಗೆದುಕೊಳ್ಳುತ್ತಾರೆ ಎಂಬುದು ಮಾಹಿತಿ. ಕೆಜಿಎಫ್ ಸಿನಿಮಾ ಕನಿಷ್ಠ ಎಂಬತ್ತು ಕೋಟಿ ರುಪಾಯಿ ವ್ಯವಹಾರ ಮಾಡಿದೆ. ಯಶ್ ಅಭಿನಯಿಸಿದ್ದರಲ್ಲೇ ತೀರಾ ಸಾಮಾನ್ಯವಾಗಿ ಓಡಿದ ಸಿನಿಮಾ ಕೂಡ ಇಪ್ಪತ್ತು ಕೋಟಿ ವ್ಯವಹಾರ ಮಾಡುತ್ತದೆ.

ಸುದೀಪ್
 

ಸುದೀಪ್

ನಟ ಸುದೀಪ್ ಗೆ ಈಗ ಕನ್ನಡ, ತೆಲುಗು, ಹಿಂದಿ, ತಮಿಳು ಹೀಗೆ ನಾಲ್ಕು ಭಾಷೆಗಳಲ್ಲಿ ಬೇಡಿಕೆ ಇದೆ. ಅವರ ಅಭಿನಯದ ಸಿನಿಮಾಗಳೆಂದರೆ ಕನಿಷ್ಠ 30 ಕೋಟಿ ರುಪಾಯಿ ವ್ಯವಹಾರ ಪಕ್ಕಾ. ಮೂಲಗಳ ಪ್ರಕಾರ, ಸುದೀಪ್ ತಮ್ಮ ಸಿನಿಮಾಗೆ 6 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಾರೆ.

ಪುನೀತ್ ರಾಜಕುಮಾರ್

ಪುನೀತ್ ರಾಜಕುಮಾರ್

ಕೌಟುಂಬಿಕ ಸಿನಿಮಾಗಳಿಗೆ ಹೆಸರಾದ ನಟ ಪುನೀತ್ ರಾಜಕುಮಾರ್ ಸಿನಿಮಾಗಳಿಗೆ ಸ್ಯಾಟಲೈಟ್ ರೈಟ್ಸ್ ಗೆ ವಿಪರೀತ ಬೇಡಿಕೆ. ಅವರ ಸಿನಿಮಾ ಟೀವಿಯಲ್ಲಿ ಬಂದಿದೆ ಅಂದರೆ ರೇಟಿಂಗ್ ಕೂಡ ಪಕ್ಕಾ. ಸಂಭಾವನೆ ಲೆಕ್ಕಕ್ಕೆ ಪುನೀತ್ ಆರರಿಂದ ಅರೂವರೆ ಕೋಟಿ ರುಪಾಯಿ ಪಡೆಯುತ್ತಾರೆ. ಪುನೀತ್ ಸಿನಿಮಾಗಳೆಂದರೆ ಇಪ್ಪತ್ತೈದರಿಂದ ಮೂವತ್ತು ಕೋಟಿ ವ್ಯವಹಾರ ಪಕ್ಕಾ.

ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ

ಕಿರಿಕ್ ಪಾರ್ಟಿ ಸಿನಿಮಾದ ನಂತರ ರಕ್ಷಿತ್ ಶೆಟ್ಟಿ ಗ್ರಾಫ್ ಮೇಲೇರಿದೆ. ಒಂದು ಸಿನಿಮಾಗೆ ರಕ್ಷಿತ್ ಮೂರು ಕೋಟಿ ತೆಗೆದುಕೊಳ್ಳುತ್ತಾರೆ ಎಂಬುದು ಅವನೇ ಶ್ರೀಮನ್ನಾರಾಯಣ ಸಿನಿಮಾದ ಆಧಾರದಲ್ಲಿ ಹೇಳುತ್ತಿರುವ ಮಾತು. ಇನ್ನು ಕಿರಿಕ್ ಪಾರ್ಟಿ ಸಿನಿಮಾ ಸಕ್ಸಸ್ ನೋಡಿ ಹೇಳುತ್ತಿರುವ ಅವರ ಮಾರ್ಕೆಟ್ ಇಪ್ಪತ್ತು ಕೋಟಿ ರುಪಾಯಿ.

ಶಿವರಾಜಕುಮಾರ್

ಶಿವರಾಜಕುಮಾರ್

ನಿರ್ಮಾಪಕರ ಡಾರ್ಲಿಂಗ್ ಶಿವಣ್ಣನ ಕವಚ ಸಿನಿಮಾದ ಸ್ಯಾಟಲೈಟ್ ರೈಟ್ಸ್ ನಾಲ್ಕು ಕೋಟಿ ರುಪಾಯಿಗೆ ಸೇಲಾಗಿದೆ ಎಂಬುದು ಮೂಲಗಳ ಮಾಹಿತಿ. 3ರಿಂದ 3.5 ಕೋಟಿ ಸಂಭಾವನೆ ಪಡೆಯುವ ಶಿವರಾಜಕುಮಾರ್ ಅವರ ಸಿನಿಮಾಗಳಿಗೆ ಸುಲಭವಾಗಿ 10 ಕೋಟಿ ರುಪಾಯಿ ವ್ಯವಹಾರ ಆಗುತ್ತದೆ ಎಂಬ ಮಾತಿದೆ.

ಧ್ರುವ ಸರ್ಜಾ

ಧ್ರುವ ಸರ್ಜಾ

ಸಾಲು ಸಾಲಾಗಿ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಧ್ರುವ ಸರ್ಜಾ ಸದ್ಯಕ್ಕೆ 4 ಕೋಟಿ ಸಂಭಾವನೆ ಹೇಳುತ್ತಿದ್ದಾರೆ ಎನ್ನುತ್ತವೆ ಮೂಲಗಳು. ಇನ್ನು ಧ್ರುವ ಸರ್ಜಾ ಅಭಿನಯದ ಸಿನಿಮಾಗಳಿಗೆ 15 ಕೋಟಿ ರುಪಾಯಿಯಷ್ಟು ವ್ಯವಹಾರವನ್ನು ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ಮಾರುಕಟ್ಟೆ ಪಂಡಿತರು.

ಶ್ರೀಮುರಳಿ

ಶ್ರೀಮುರಳಿ

ಹದಿನೈದರಿಂದ ಇಪ್ಪತ್ತು ಕೋಟಿ ರುಪಾಯಿಯಷ್ಟು ವ್ಯವಹಾರವನ್ನು ಶ್ರೀಮುರಳಿ ಅವರ ಸಿನಿಮಾಗಳು ಮಾಡಬಲ್ಲವು. ನಾಲ್ಕು ಕೋಟಿ ರುಪಾಯಿ ಶ್ರೀಮುರಳಿ ಸಂಭಾವನೆ ಇದೆ ಎಂಬುದು ಸದ್ಯಕ್ಕೆ ಇರುವ ಮಾಹಿತಿ.

ದುನಿಯಾ ವಿಜಯ್

ದುನಿಯಾ ವಿಜಯ್

ಆಕ್ಷನ್ ಸಿನಿಮಾಗಳ ಮೂಲಕ, ಕಟ್ಟುಮಸ್ತು ದೇಹದಿಂದ ತೆರೆ ಮೇಲೆ ವಿಜೃಂಭಿಸುವ ದುನಿಯಾ ವಿಜಯ್ ಸದ್ಯದ ಸಂಭಾವನೆ ಎರಡರಿಂದ ಎರಡೂವರೆ ಕೋಟಿ. ಐದು ಕೋಟಿ ರುಪಾಯಿ ವ್ಯವಹಾರಕ್ಕೆ ಏನೂ ಮೋಸವಿಲ್ಲ ಅನ್ನೋದು ಗಾಂಧೀನಗರದವರ ಲೆಕ್ಕಾಚಾರ.

ಗಣೇಶ್

ಗಣೇಶ್

ಒಂದು ಕಾಲದಲ್ಲಿ ಸಾಲಾಗಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಗಣೇಶ್ ಸಂಭಾವನೆ ಸದ್ಯಕ್ಕೆ 1ರಿಂದ 1.5 ಕೋಟಿ ರುಪಾಯಿ. ಜತೆಗೆ ಒಟ್ಟಾರೆ ಮಾರ್ಕೆಟ್ ನೋಡಿದಾಗ 3 ಕೋಟಿ ರುಪಾಯಿ ವ್ಯವಹಾರ ಎನ್ನುತ್ತಾರೆ. ಜತೆಗೆ ಗಣೇಶ್ ದು ಹಿಟ್ ಸಿನಿಮಾ ಇಲ್ಲ ಎಂಬ ಕಾರಣಕ್ಕೆ ಈಗಿನ ಸನ್ನಿವೇಶದ ಮಾರ್ಕೆಟ್ ವಿನಾ ಇದೇ ಶಾಶ್ವತವೂ ಅಲ್ಲ ಎನ್ನುವುದು ಮಾತ್ರ ಸತ್ಯ. ಚಮಕ್ ಸಿನಿಮಾ ಆದ ಮೇಲೆ ಯಶಸ್ಸಿನ ಬೇಟೆಯಲ್ಲಿ ಇರುವ ಗಣೇಶ್ ಗೆ ಒಂದು ಹಿಟ್ ಸಿನಿಮಾ ಕೆರಿಯರ್ ಗ್ರಾಫ್ ಬದಲಿಸಬಹುದು.

Read more about: business ವಾಣಿಜ್ಯ
English summary

Kannada Film Industry Round Up 2019

Kannada Film Industry Round Up 2019
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more