For Quick Alerts
ALLOW NOTIFICATIONS  
For Daily Alerts

ಕರ್ನಾಟಕದ GST ಆದಾಯ ಸಂಗ್ರಹ ಮಾರ್ಚ್‌ನಲ್ಲಿ ಶೇ. 11ರಷ್ಟು ಹೆಚ್ಚಳ

|

ಕೊರೊನಾವೈರಸ್ ಸಾಂಕ್ರಾಮಿಕದ ಎರಡನೇ ತರಂಗದ ಅಲೆಯ ನಡುವೆಯು ಮಾರ್ಚ್‌ನಲ್ಲಿ ಕರ್ನಾಟಕದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 11ರಷ್ಟು ಹೆಚ್ಚಾಗಿದೆ.

 

ಜಿಎಸ್‌ಟಿ ದಾಖಲೆ: ಮಾರ್ಚ್‌ನಲ್ಲಿ 1.23 ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹ

ಮಾರ್ಚ್ 2020 ರಲ್ಲಿ ಜಿಎಸ್‌ಟಿ ಆದಾಯ ಸಂಗ್ರಹ 7,144.30 ಕೋಟಿ ರೂ.ಗಳಾಗಿದ್ದು, ಕಳೆದ ತಿಂಗಳು ಇದು 7,914.98 ಕೋಟಿ ರೂ.ಗೆ ಏರಿಕೆಯಾಗಿದೆ. ಇದು ರಾಜ್ಯದ ಆರ್ಥಿಕತೆ ಹಾಗೂ ತೆರಿಗೆ ಸಂಗ್ರಹದ ಚೇತರಿಕೆಯನ್ನು ಪ್ರದರ್ಶಿಸುತ್ತದೆ.

ಕರ್ನಾಟಕದ GST ಆದಾಯ ಸಂಗ್ರಹ ಮಾರ್ಚ್‌ನಲ್ಲಿ ಶೇ. 11ರಷ್ಟು ಹೆಚ್ಚಳ

''ಜಿಎಸ್‌ಟಿ ಆದಾಯ ಸಂಗ್ರಹಣೆಯಲ್ಲಿನ ಹೆಚ್ಚಳವು ಪರಿಣಾಮಕಾರಿ ತೆರಿಗೆ ಆಡಳಿತ, ಉತ್ತಮ ಅನುಸರಣೆ, ಇ-ಇನ್‌ವಾಯ್ಸ್ ಅನುಷ್ಠಾನ ಮತ್ತು ಇ-ವೇ ಮಸೂದೆಗಳ ಮೇಲ್ವಿಚಾರಣೆಯನ್ನು ಸೂಚಿಸುತ್ತದೆ'' ಎಂದು ಕರ್ನಾಟಕ ಸರ್ಕಾರದ ಜಿಎಸ್‌ಟಿ ಸಲಹಾ ಸಮಿತಿಯ ಸದಸ್ಯ ಬಿ.ಟಿ ಮನೋಹರ್ ಹೇಳಿದ್ದಾರೆ.

"ಕಳೆದ ವರ್ಷ ಅಕ್ಟೋಬರ್‌ನಿಂದ, ತೆರಿಗೆ ಸಂಗ್ರಹದಲ್ಲಿ ಏರುಮುಖ ಪ್ರವೃತ್ತಿ ಕಂಡುಬಂದಿದೆ. ಏಕೆಂದರೆ ಮುಖ್ಯವಾಗಿ ಲಾಕ್‌ಡೌನ್ ಮಾನದಂಡಗಳನ್ನು ಸಡಿಲಗೊಳಿಸಲಾದ ಬಳಿಕ ಸರಕುಗಳು ಮತ್ತು ಪ್ರಯಾಣಿಕರ ಅಂತರ-ರಾಜ್ಯ ಚಲನೆಯನ್ನು ಅನುಮತಿಸಲಾಗಿದೆ. ಇದರ ಜೊತೆಗೆ ಸ್ಥಳೀಯ ಬಳಕೆ ಕೂಡ ಹೆಚ್ಚಿದ್ದು, ಆಮದು ಸುಲಭವಾಗಿದೆ'' ಎಂದು ಮನೋಹರ್ ಹೇಳಿದರು.

ದೇಶದಲ್ಲಿ ಒಟ್ಟಾರೆ ಮಾರ್ಚ್‌ ತಿಂಗಳಿನಲ್ಲಿ ಒಟ್ಟು ಜಿಎಸ್‌ಟಿ ಆದಾಯ 1,23,902 ಕೋಟಿ ರೂಪಾಯಿ ನಷ್ಟಿದೆ. ಈ ಮೂಲಕ ಜಿಎಸ್‌ಟಿ ಪರಿಚಯಿಸಿದ ನಂತರ ಒಂದು ತಿಂಗಳಲ್ಲಿ ಸಂಗ್ರಹವಾದ ಅತಿ ದೊಡ್ಡ ಆದಾಯ ಸಂಗ್ರಹ ಇದಾಗಿದೆ.

ಇದರಲ್ಲಿ ಸಿಜಿಎಸ್‌ಟಿ 22,973 ಕೋಟಿ ರೂ., ಎಸ್‌ಜಿಎಸ್‌ಟಿ 29,329 ಕೋಟಿ ರೂ., ಐಜಿಎಸ್‌ಟಿ 62,842 ಕೋಟಿ ರೂ. ಮತ್ತು ಸೆಸ್ 8,757 ಕೋಟಿ ರೂಪಾಯಿನಷ್ಟಿದೆ.

English summary

Karnataka's GST Revenue Jumps 11 Percent In March 2021

Goods and Services Tax (GST) collection in Karnataka during March 2021 has been 11 per cent more compared to the same period last year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X