For Quick Alerts
ALLOW NOTIFICATIONS  
For Daily Alerts

ಕಳೆದ ವರ್ಷಕ್ಕಿಂತ 343% ಹೆಚ್ಚು ಸಾಲ ಪಡೆದ ಕರ್ನಾಟಕ

|

ಪ್ರಸಕ್ತ ಹಣಕಾಸು ವರ್ಷದ 2020- 21ರಲ್ಲಿ ಕೊರೊನಾ ಬಿಕ್ಕಟ್ಟಿನಿಂದ ರಾಜ್ಯಗಳ ಆದಾಯಕ್ಕೆ ಭಾರೀ ಹೊಡೆತ ಬಿದ್ದಿರುವುದಕ್ಕೆ ಹೆಜ್ಜೆ ಹೆಜ್ಜೆಗೂ ಸಾಕ್ಷ್ಯ ಸಿಗುತ್ತಿವೆ. ಭಾರತದ ಬಹುತೇಕ ರಾಜ್ಯಗಳು ಮಾರುಕಟ್ಟೆಯಿಂದ ಪಡೆದ ಸಾಲ ಪ್ರಮಾಣದಲ್ಲಿ ಭಾರೀ ಏರಿಕೆ ಆಗಿದೆ. ಕರ್ನಾಟಕ, ಮಹಾರಾಷ್ಟ್ರ, ನಾಗಾಲ್ಯಾಂಡ್ ಹಾಗೂ ತಮಿಳುನಾಡು ರಾಜ್ಯಗಳು ಕಳೆದ ವರ್ಷ ಇದೇ ಅವಧಿಯಲ್ಲಿ ಮಾಡಿದ್ದ ಸಾಲಕ್ಕಿಂತ ಶೇಕಡಾ 100ಕ್ಕಿಂತ ಹೆಚ್ಚು ಸಾಲ ಮಾಡಿವೆ.

 

ಇನ್ನು ಮಧ್ಯಪ್ರದೇಶ, ಮೇಘಾಲಯ, ಗೋವಾ, ಅಸ್ಸಾಂ, ಉತ್ತರಾಖಂಡ್, ಆಂಧ್ರಪ್ರದೇಶ, ಒಡಿಶಾ ಹಾಗೂ ಛತ್ತೀಸ್ ಗಢ ರಾಜ್ಯದ ಸಾಲ ಪ್ರಮಾಣ ಕಳೆದ ವರ್ಷದ ಇದೇ ಅವಧಿಗಿಂತ ಶೇಕಡಾ 50ರಿಂದ 100ರಷ್ಟು ಹೆಚ್ಚಿದೆ. ಸಿಕ್ಕಿಂ, ತೆಲಂಗಾಣ, ಜಮ್ಮು- ಕಾಶ್ಮೀರ, ಕೇರಳ, ರಾಜಸ್ಥಾನ, ಹರ್ಯಾಣ, ಗುಜರಾತ್, ಪಶ್ಚಿಮ ಬಂಗಾಲ ಮತ್ತು ಮಿಜೋರಾಂ ರಾಜ್ಯಗಳ ಸಾಲ ಶೇಕಡಾ 23ರಿಂದ 36ರಷ್ಟು ಏರಿಕೆಯಾಗಿದೆ.

ಜಿಎಸ್ ಟಿ ಪರಿಹಾರ ಸೆಸ್ 2022ರ ನಂತರವೂ ವಿಸ್ತರಣೆ

ಆದರೆ, ಆಸಕ್ತಿಕರ ಸಂಗತಿ ಏನೆಂದರೆ ಅರುಣಾಚಲ ಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ, ಪಂಜಾಬ್, ಮಣಿಪುರ್, ಉತ್ತರಪ್ರದೇಶ ಹಾಗೂ ತ್ರಿಪುರಾ ರಾಜ್ಯಗಳು ಈ ಅವಧಿಯಲ್ಲಿ ಕಳೆದ ಬಾರಿಗಿಂತ ಕಡಿಮೆ ಸಾಲ ತೆಗೆದುಕೊಂಡಿವೆ. ಈ ಪೈಕಿ ಉತ್ತರಪ್ರದೇಶ ಶೇಕಡಾ 25ರಷ್ಟು ಹಾಗೂ ಹಿಮಾಚಲ ಪ್ರದೇಶವು ಶೇಕಡಾ 38ರಷ್ಟು ಕಡಿಮೆ ಸಾಲ ಪಡೆದಿದೆ.

ಕಳೆದ ವರ್ಷಕ್ಕಿಂತ 343% ಹೆಚ್ಚು ಸಾಲ ಪಡೆದ ಕರ್ನಾಟಕ

ಕಳೆದ ವರ್ಷದ ಇದೇ ಅವಧಿಗಿಂತ ಅತಿ ಹೆಚ್ಚು ಸಾಲ ಪಡೆದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಕರ್ನಾಟಕ. ಶೇಕಡಾ 343ರಷ್ಟು ಹೆಚ್ಚು ಸಾಲ ಪಡೆದುಕೊಂಡಿದೆ. ನಂತರ ಮಹಾರಾಷ್ಟ್ರ 218%, ನಾಗಾಲ್ಯಾಂಡ್ 200% ಹಾಗೂ ತಮಿಳುನಾಡು 107% ಹೆಚ್ಚು ಸಾಲವನ್ನು ಪಡೆದುಕೊಂಡಿದೆ.

English summary

Karnataka State Market Borrowing Rises 343 Percent In Financial Year 2020- 21

Due to Corona pandemic Karnataka state market borrowing rises 343% in current financial year, compare to same period of previous year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X