ಕೇರಳದಲ್ಲಿ ಸೆಸ್, ತೆರಿಗೆ ಇಳಿಕೆ ಬಳಿಕ ಇಂಧನ ದರ ಎಷ್ಟಾಗಿದೆ?
ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರವು ಪ್ರತಿ ಲೀಟರ್ಗೆ ರೂ 8 ಮತ್ತು ಡೀಸೆಲ್ಗೆ ರೂ 6 ಇಳಿಕೆ ಮಾಡಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 9.5 ರೂಪಾಯಿ ಮತ್ತು ಡೀಸೆಲ್ ದರದಲ್ಲಿ 7 ರೂಪಾಯಿ ಕಡಿಮೆಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಕೇರಳ ಸರ್ಕಾರ ಕೂಡಾ ರಾಜ್ಯದಲ್ಲಿ ವಿಧಿಸಲಾಗುತ್ತಿದ್ದ ಸೆಸ್, ತೆರಿಗೆಯನ್ನು ತಗ್ಗಿಸಿದೆ.
ಕೇರಳದ ವಿತ್ತ ಸಚಿವ ಕೆಎನ್ ಬಾಲಗೋಪಾಲ್ ಅವರು ಈ ಕುರಿತಂತೆ ಘೋಷಿಸಿದ್ದು, ಕೇರಳದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 2.41 ರು ಹಾಗೂ ಡೀಸೆಲ್ ಮೇಲೆ 1.36 ರು ತಗ್ಗಲಿದೆ ಎಂದು ತಿಳಿಸಿದರು.
ಕೇಂದ್ರ ಅಬಕಾರಿ ಸುಂಕವನ್ನು ಕಡಿತಗೊಳಿಸುವುದರಿಂದ ಕೇಂದ್ರ ಸರ್ಕಾರಕ್ಕೆ 1 ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ. ಆದರೆ ಹಣದುಬ್ಬರ ತಗ್ಗಿಸುವ ನಿಟಿನಲ್ಲಿ ಜನರಿಗೆ ಪ್ರಯೋಜನ ನೀಡುವ ನಿಟ್ಟಿನಲ್ಲಿ ಈ ಸುಂಕವನ್ನು ಕಡಿತ ಮಾಡಲಾಗುತ್ತಿದೆ.

ಕೇರಳದ ಪ್ರಮುಖ ಪಟ್ಟಣಗಳಲ್ಲಿನ ಮೇ 22ರ ಇಂಧನ ದರ
ತಿರುವನಂತಪುರಂ:
ಪೆಟ್ರೋಲ್: 108.44(-9.75ರು)
ಡೀಸೆಲ್: 96.26 (-7.69 ರು)
ಎರ್ನಾಕುಲಂ:
ಪೆಟ್ರೋಲ್: 105.76(-9.31ರು)
ಡೀಸೆಲ್: 94.69 (-7.27ರು)
ತ್ರಿಶೂರ್
ಪೆಟ್ರೋಲ್: 105.97 (-9.40ರು)
ಡೀಸೆಲ್: 94.89(-7.35ರು)
ವಯನಾಡು
ಪೆಟ್ರೋಲ್: 107.10 (-9.45ರು)
ಡೀಸೆಲ್: 95.90 (-7.39ರು)
ಕಾಸರಗೋಡು
ಪೆಟ್ರೋಲ್: 106.54 (-9.64ರು)
ಡೀಸೆಲ್: 95.45 (-7.57ರು)
ಕಣ್ಣೂರು
ಕಾಸರಗೋಡು
ಪೆಟ್ರೋಲ್: 105.95 (-9.54ರು)
ಡೀಸೆಲ್: 94.90 (-7.47ರು)
ಇನ್ನಿತರ ನಗರಗಳ ಇಂಧನ ದರ ತಿಳಿಯಲು ಕ್ಲಿಕ್ ಮಾಡಿ
ಪಂಚ ರಾಜ್ಯಗಳ ಚುನಾವಣೆಗೂ ಮುನ್ನ ಸ್ಥಗಿತ ಮಾಡಲಾಗಿದ್ದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆಯು ಚುನಾವಣೆಯ ಬಳಿಕ ಸರ್ಕಾರಿ ತೈಲ ಕಂಪನಿಗಳು ಮತ್ತೆ ಆರಂಭ ಮಾಡಿದ್ದವು. ದೇಶದಲ್ಲಿ ಪ್ರತಿದಿನ ತೈಲ ದರ ಏರಿಕೆ ಮಾಡಲಾಗಿತ್ತು. ಆದರೆ ಕಳೆದ ಹಲವಾರು ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ಏಪ್ರಿಲ್ನಲ್ಲಿ ಶೇಕಡ 14ರಷ್ಟು ಪೆಟ್ರೋಲ್ ಬಳಕೆ ಹೆಚ್ಚಾಗಿದೆ.
ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಮಾರ್ಚ್ 22 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ಆದಾದ ಬಳಿಕ ಎರಡು ದಿನ ಹೊರತು ಪಡಿಸಿ ಮತ್ತೆಲ್ಲಾ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವು ಹೆಚ್ಚಳವಾಗಿತ್ತು. ಆದರೆ ಸತತ ಹಲವಾರು ದಿನಗಳಿಂದ ಬೆಲೆ ಸ್ಥಿರವಾಗಿದೆ.
ಭಾರತದಲ್ಲಿ ಇಂಧನ ಆಮದು ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ರಾಜ್ಯಗಳಲ್ಲಿ ಅಬಕಾರಿ ಸುಂಕಗಳನ್ನು ಸೇರಿಸಲಾಗುತ್ತದೆ, ನಂತರ ಬೆಲೆ ದ್ವಿಗುಣಗೊಳ್ಳುತ್ತದೆ. ಈಗಾಗಲೇ ಎಲ್ಪಿಜಿ ದರವನ್ನು ಏರಿಕೆ ಮಾಡಲಾಗಿದೆ. ಈ ನಡುವೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡುವ ನಿರೀಕ್ಷೆಯನ್ನು ಜನರು ಹೊಂದಿದ್ದರು. ಸುಮಾರು 40 ದಿನಗಳ ಬಳಿಕ ನಿರೀಕ್ಷೆಯಂತೆ ಸುಂಕ ಇಳಿಕೆ ಮಾಡಲಾಗಿದೆ.