For Quick Alerts
ALLOW NOTIFICATIONS  
For Daily Alerts

ಕೊಟಕ್ ಮಹೀಂದ್ರಾ ಗ್ರೂಪ್ ನಿಂದ "ಖುಷಿ ಕಾ ಸೀಸನ್" ಹಬ್ಬದ ಆಫರ್

|

ಕೊಟಕ್ ಮಹೀಂದ್ರಾ ಗ್ರೂಪ್ (ಕೊಟಕ್) ಹಬ್ಬದ ಋತುವಿಗಾಗಿ 2020ರ "ಖುಷಿ ಕಾ ಸೀಸನ್" ಎಡಿಷನ್ ನಲ್ಲಿ ಹಲವಾರು ಆಫರ್ ಗಳನ್ನು ನೀಡುತ್ತಿದೆ. ಕೊಟಕ್ ನಿಂದ ಸಾಲದ ಮೇಲೆ ಆಕರ್ಷಕ ಬಡ್ಡಿದರ ಇದೆ. ಸಾಲದ ಮೇಲೆ ಪ್ರೊಸೆಸಿಂಗ್ ಶುಲ್ಕ ಮನ್ನಾ ಹಾಗೂ ಶೀಘ್ರವಾಗಿ ಆನ್ ಲೈನ್ ಸಾಲ ಮಂಜೂರಾತಿಯನ್ನು ನೀಡಲಾಗುತ್ತಿದೆ. ರೀಟೇಲ್ ನಿಂದ ಕೃಷಿ ಸಾಲ ಸೆಗ್ಮೆಂಟ್ ತನಕ ಇದು ಅನ್ವಯ ಆಗುತ್ತದೆ.

ಕೊಟಕ್ ಮಹೀಂದ್ರಾ ಬ್ಯಾಂಕ್ ಈ ಬಗ್ಗೆ ಪ್ರಕಟಣೆ ನೀಡಿದ್ದು, ಗ್ರಾಹಕರಿಗೆ ವಾರ್ಷಿಕ 7 ಪರ್ಸೆಂಟ್ ಬಡ್ಡಿ ದರದಲ್ಲಿ ಗೃಹ ಸಾಲ ದೊರೆಯುತ್ತದೆ. ಇನ್ನು ಬಾಕಿ ವರ್ಗಾವಣೆ ಮಾಡುತ್ತಿದ್ದಲ್ಲಿ 20 ಲಕ್ಷ ರುಪಾಯಿ ತನಕ ಉಳಿತಾಯ ಮಾಡಬಹುದು. ಸದ್ಯಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದಲೂ ಹೋಮ್ ಲೋನ್ ಬಡ್ಡಿ ದರ 7% ಇದೆ. ಮಹಿಳೆಯರಿಗೆ 0.05% ವಿನಾಯಿತಿ ಇದೆ.

 

ಹಬ್ಬದ ಋತು: 2000 + ಫ್ಯಾಷನ್ ಸ್ಟೋರ್ ಜೊತೆ -ಫ್ಲಿಪ್ ಕಾರ್ಟ್ ಒಪ್ಪಂದ

ಕೊಟಕ್ ಮಹೀಂದ್ರಾದ ಗ್ರಾಹಕರಿಗೆ ಉಳಿತಾಯ ಖಾತೆ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಸ್ ಮತ್ತು ನೋ ಕಾಸ್ಟ್ ಇಎಂಐ ಪಾವತಿ ಮೇಲೂ ವಿಶೇಷ ಆಫರ್ ಗಳಿವೆ. ಕೊಟಕ್ ನಿಂದ ಅಮೆಜಾನ್, ಫ್ಲಿಪ್ ಕಾರ್ಟ್ ಜತೆಗೆ ಸಹಭಾಗಿತ್ವ ಆಗಿದ್ದು, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ದಾರರಿಗೆ ವಿಶೇಷ ಆಫರ್ ಗಳು ಇವೆ.

ಕೊಟಕ್ ಮಹೀಂದ್ರಾ ಗ್ರೂಪ್ ನಿಂದ

ಇನ್ನು ನೂರಕ್ಕೂ ಹೆಚ್ಚು ಬ್ರ್ಯಾಂಡ್ ಗಳ ಜತೆಗೆ ಕೊಟಕ್ ಸಹಭಾಗಿತ್ವ ವಹಿಸಿದ್ದು, ಡೆಬಿಟ್ ಕಾರ್ಡ್ಸ್- ಕ್ರೆಡಿಟ್ ಕಾರ್ಡ್ಸ್, ಕೊಟಕ್ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮೂಲಕ ಪಾವತಿಸಿದರೆ ನಾನಾ ಆಫರ್ ಗಳಿವೆ. ಜತೆಗೆ ನೋ ಕಾಸ್ಟ್ ಇಎಂಐ ಆಫರ್ ಗಳಿವೆ.

ಕಾರು ಸಾಲ, ದ್ವಿಚಕ್ರ ವಾಹನ ಸಾಲ, ಕೃಷಿ ವ್ಯವಹಾರ, ವಾಣಿಜ್ಯ ವಾಹನ ಹಾಗೂ ನಿರ್ಮಾಣ ಉಪಕರಣಗಳಿಗಾಗಿ ಹಣಕಾಸಿನ ಸಾಲದ ಮೇಲಿನ ಪ್ರೊಸೆಸಿಂಗ್ ಫೀ ಅರ್ಧಕ್ಕೆ ಇಳಿಸಲಾಗಿದೆ ಎಂದು ಘೋಷಣೆ ಮಾಡಿದೆ.

English summary

Kotak Mahindra Bank Festival Season Offer: Housing Loan At 7 Percent Annum

Private bank Kotak Mahindra Bank this festival season offering housing loan At 7% PA.
Company Search
COVID-19