For Quick Alerts
ALLOW NOTIFICATIONS  
For Daily Alerts

ಎಲ್‌&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ

|

ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯ ನಿರ್ಮಾಣದ ಪ್ರಮುಖ ಕಂಪನಿ ಎಲ್‌&ಟಿ ಮೂರನೇ ತ್ರೈಮಾಸಿಕದಲ್ಲಿ ಭರ್ಜರಿ ಲಾಭಗಳಿಸಿದ್ದು, ಏಕೀಕೃತ ಲಾಭವು ಶೇಕಡಾ 4.9ರಷ್ಟು ಏರಿಕೆಗೊಂಡು 2,467 ಕೋಟಿ ರೂ.ಗಳಿಗೆ ತಲುಪಿದೆ.

ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್‌ನಲ್ಲಿ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಪ್ರತಿಷ್ಠಿತ ಮತ್ತು ದೊಡ್ಡ ಒಪ್ಪಂದಗಳನ್ನು ಪಡೆದ ನಂತರ ತ್ರೈಮಾಸಿಕದಲ್ಲಿ ಅತ್ಯಧಿಕ ಆರ್ಡರ್‌ಗಳನ್ನು ಪಡೆದಿದೆ. ಇದು ಸಿಎನ್‌ಬಿಸಿ-ಟಿವಿ 18 ಸಮೀಕ್ಷೆಯ ಅಂದಾಜು ಮೌಲ್ಯಗಿಂತ ಭಾರೀ ಹೆಚ್ಚಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಎಲ್‌&ಟಿ 2,110 ಕೋಟಿ ರೂ. ಗಳಿಸಿತ್ತು.

ಎಕನಾಮಿಕ್ ಟೈಮ್ಸ್ ವಿಶ್ಲೇಷಕರ ಅಂದಾಜಿನ ಪ್ರಕಾರ ಕ್ಯೂ3 ತ್ರೈಮಾಸಿಕ ಆದಾಯವು 1,699 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಕಾರ್ಯಾಚರಣೆಯ ಆದಾಯವು ವರ್ಷದಿಂದ ವರ್ಷಕ್ಕೆ ಶೇ 1.78 ರಷ್ಟು ಇಳಿದು 35,596.42 ಕೋಟಿ ರೂ.ಗೆ ತಲುಪಿದೆ.

 ಎಲ್‌&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ

 

ತ್ರೈಮಾಸಿಕದಲ್ಲಿ ಇದುವರೆಗೆ ಅತಿ ಹೆಚ್ಚು ಆರ್ಡರ್‌ಗಳನ್ನು ಪಡೆದಿದೆ ಎಂದು ಕಂಪನಿ ಹೇಳಿದೆ, ಇದುವರೆಗಿನ ದೇಶದ ಅತಿದೊಡ್ಡ ಇಪಿಸಿ ಒಪ್ಪಂದ - ಹೈ ಸ್ಪೀಡ್ ರೈಲು ಆರ್ಡರ್ ಸೇರಿದಂತೆ ಹಲವು ದೊಡ್ಡ ಒಪ್ಪಂದಗಳನ್ನು ಸ್ವೀಕರಿಸಿದೆ.

English summary

L&T Q3 Report: Net Profit Rises 5% To Rs 2467 Crore

L&T on Monday said its consolidated net profit rose 4.87 per cent to Rs 2,466.71 crore compared to Rs 2,352.12 crore in the same quarter last year.
Story first published: Monday, January 25, 2021, 19:07 [IST]
Company Search
COVID-19