For Quick Alerts
ALLOW NOTIFICATIONS  
For Daily Alerts

ಲಕ್ಷ್ಮಿ ವಿಲಾಸ್ ಬ್ಯಾಂಕ್ ಠೇವಣಿದಾರರಿಗೆ ನೆಮ್ಮದಿ: ವಿತ್‌ಡ್ರಾ ಮಿತಿ ಹಿಂತೆಗೆತ

|

ಆರ್ಥಿಕ ಸಂಕಷ್ಟದಿಂದ ಸಿಲುಕಿ ನಿಷೇಧಕ್ಕೊಳಗಾಗಿದ್ದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಅನ್ನು ಡಿಬಿಎಸ್‌ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ನೊಂದಿಗೆ ವಿಲೀನಗೊಳಿಸಲು ಕ್ಯಾಬಿನೆಟ್ ಅನುಮೋದನೆ ನೀಡಿರುವುದರ ಜೊತೆಗೆ ಬ್ಯಾಂಕ್‌ ಗ್ರಾಹಕರಿಗೆ ಶುಭ ಸುದ್ದಿ ಸಿಕ್ಕಿದೆ. ಹಣ ವಿತ್‌ಡ್ರಾ ಮಿತಿಯನ್ನು ಆರ್‌ಬಿಐ ಹಿಂದಕ್ಕೆ ಪಡೆದುಕೊಂಡಿದೆ.

 

ನವೆಂಬರ್ 17ರಿಂದ ಡಿಸೆಂಬರ್ 16ರವರೆಗೆ ಬ್ಯಾಂಕ್ ನಿಷೇಧಕ್ಕೊಳಗಾಗಿದ್ದಲ್ಲದೆ, ಬ್ಯಾಂಕಿನ ಗ್ರಾಹಕರು ಖಾತೆಯಿಂದ ತಿಂಗಳಿಗೆ 25,000 ರೂಪಾಯಿ ಹಣವನ್ನು ಮಾತ್ರ ಹಿಂಪಡೆಯಲು ಮಿತಿ ಹೇರಲಾಗಿತ್ತು.

ವೈದ್ಯಕೀಯ ಚಿಕಿತ್ಸೆ, ಉನ್ನತ ಶಿಕ್ಷಣದ ಪಾವತಿ ಮತ್ತು ಮದುವೆ ವೆಚ್ಚಗಳಂತಹ ಉದ್ದೇಶಗಳಿಗಾಗಿ ಠೇವಣಿದಾರರಿಗೆ ರಿಸರ್ವ್ ಬ್ಯಾಂಕ್ ಅನುಮತಿಯೊಂದಿಗೆ 25,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಆದರೆ ಠೇವಣಿದಾರರಿಂದ ಠೇವಣಿ ಹಿಂಪಡೆಯುವ ನಿರ್ಬಂಧಗಳನ್ನು ತೆಗೆದುಹಾಕಿದೆ ಕೇಂದ್ರ ಸರ್ಕಾರ ಹಿಂಪಡೆದಿದೆ.

Good News: ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿತ್‌ಡ್ರಾ ಮಿತಿ ಹಿಂತೆಗೆತ

ಆರ್‌ಬಿಐ ಟ್ವೀಟ್‌ನಲ್ಲಿ ತಿಳಿಸಿರುವಂತೆ ನವೆಂಬರ್ 27ರಿಂದ ಎಲ್ಲಾ ಲಕ್ಷ್ಮಿ ವಿಲಾಸ್ ಬ್ಯಾಂಕ್ ಬ್ರ್ಯಾಂಚ್‌ಗಳು, ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್‌ ಆಗಿ ಕಾರ್ಯ ನಿರ್ವಹಿಸಲಿದೆ. ಒಪ್ಪಂದದ ಪ್ರಕಾರ, ಡಿಬಿಎಸ್‌ಗೆ 563 ಶಾಖೆಗಳು, 974 ಎಟಿಎಂಗಳು ಮತ್ತು ಚಿಲ್ಲರೆ ಹೊಣೆಗಾರಿಕೆಗಳಲ್ಲಿ 1.6 ಬಿಲಿಯನ್ ಫ್ರ್ಯಾಂಚೈಸ್ ದೊರೆತಿದೆ.

English summary

Lakshmi Vilas Bank Withdrawal Restrictions Lifted

The central government on Wednesday approved merger of crisis-hit Lakshmi Vilas Bank (LVB) with DBS Bank India Ltd (DBIL) and removed restrictions on withdrawal of deposits by depositors.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X