For Quick Alerts
ALLOW NOTIFICATIONS  
For Daily Alerts

"2050ನೇ ಇಸವಿ ಹೊತ್ತಿಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಭಾರತ"

|

2050ನೇ ಇಸವಿ ಹೊತ್ತಿಗೆ ಚೀನಾ ಮತ್ತು ಯುಎಸ್ ನಂತರ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಭಾರತ ಎಂದು ಲಾನ್ಸೆಟ್ ಪ್ರಕಟಿಸಿದ ಅಧ್ಯಯನವೊಂದು ತಿಳಿಸಿದೆ. ಈ ಅಧ್ಯಯನಕ್ಕಾಗಿ 2017ನೇ ಇಸವಿಯನ್ನು ಮೂಲ ವರ್ಷವಾಗಿ ತೆಗೆದುಕೊಳ್ಳಲಾಗಿದೆ (ಆಗ ಭಾರತವು ಏಳನೇ ಅತಿ ದೊಡ್ಡ ಆರ್ಥಿಕತೆಯಾಗಿತ್ತು).

2030ನೇ ಇಸವಿ ಹೊತ್ತಿಗೆ ಭಾರತವು ನಾಲ್ಕನೇ ಸ್ಥಾನಕ್ಕೆ ಹಾಗೂ 2050ರ ಸಮಯಕ್ಕೆ ಮೂರನೇ ಸ್ಥಾನಕ್ಕೆ ಏರಲಿದೆ ಎಂದು ತಿಳಿಸಲಾಗಿದೆ. ಸದ್ಯಕ್ಕೆ ಭಾರತವು ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ ಎನಿಸಿದೆ. ಯು.ಎಸ್., ಚೀನಾ, ಜಪಾನ್ ಮತ್ತು ಜರ್ಮನಿ ಮೊದಲ ನಾಲ್ಕು ಸ್ಥಾನದಲ್ಲಿ ಇವೆ.

2100ನೇ ಇಸವಿ ಹೊತ್ತಿಗೆ ಹೇಗಿರುತ್ತದೆ ಗೊತ್ತಾ ಈ ವಿಶ್ವ?

 

ಆಯಾ ದೇಶದ ದುಡಿಯುವ ವಯಸ್ಸಿನ ಜನಸಂಖ್ಯೆಯನ್ನು ಜಿಡಿಪಿಗೆ ಬದಲಾವಣೆ ಮಾಡಿ ನೋಡಿದ ನಂತರ ಬಂದ ಫಲಿತಾಂಶವನ್ನು ಲಾನ್ಸೆಟ್ ಅಧ್ಯಯನದಲ್ಲಿ ನೀಡಲಾಗಿದೆ. "2100ರ ಹೊತ್ತಿಗೂ ಭಾರತದಲ್ಲಿ ದುಡಿಯವ ವಯಸ್ಸಿನ ಜನಸಂಖ್ಯೆಯು ವಿಶ್ವದಲ್ಲೇ ಹೆಚ್ಚಿರುತ್ತದೆ. ಆ ನಂತರ ನೈಜೀರಿಯಾ, ಚೀನಾ, ಯುಎಸ್ ಎ ಇರುತ್ತದೆ. ಫಲವತ್ತತೆ ಪ್ರಮಾಣ ಕಡಿಮೆಯಾದರೂ ವಲಸಿಗರ ಕಾರಣಕ್ಕೆ ಯು.ಎಸ್.ನಲ್ಲಿ ದುಡಿಯುವ ಶಕ್ತಿ ಹಾಗೇ ಉಳಿಯುತ್ತದೆ," ಎನ್ನಲಾಗಿದೆ.

ವಲಸಿಗರ ಪ್ರಮಾಣದಲ್ಲಿ ಹೆಚ್ಚಳವಾಗುವುದರಿಂದ ಆಸ್ಟ್ರೇಲಿಯಾ, ಇಸ್ರೇಲ್ ನ ಜಾಗತಿಕ ಜಿಡಿಪಿ ಶ್ರೇಯಾಂಕದಲ್ಲಿ ಮೇಲೇರುತ್ತವೆ. ಜಪಾನ್ ನಲ್ಲಿ ದುಡಿಯವ ವಯಸ್ಸಿನ ಜನಸಂಖ್ಯೆಯಲ್ಲಿ ಭಾರೀ ಇಳಿಕೆ ಆಗುವ ಸಾಧ್ಯತೆ ಇದೆ. ಆದರೂ 2100ರ ಹೊತ್ತಿದೆ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಆ ದೇಶ ಇರಲಿದೆ ಎಂದು ಅಧ್ಯಯನ ತಿಳಿಸಿದೆ.

English summary

Lancet Study Said, India To Become 3rd Largest Economy In The World By 2050

According to Lancet study, India to become 3rd largest economy in the world by 2050, after China and US. Here is the details of study.
Company Search
COVID-19