For Quick Alerts
ALLOW NOTIFICATIONS  
For Daily Alerts

ಮೈಕೆಲ್ ಜಾಕ್ಸನ್ ಆಸ್ತಿ 162 ಕೋಟಿ ರುಪಾಯಿಗೆ ಮಾರಾಟ

By ಅನಿಲ್ ಆಚಾರ್
|

ಹೆಸರಾಂತ ಪಾಪ್ ಗಾಯಕ ಮೈಕೆಲ್ ಜಾಕ್ಸನ್ ಗೆ ಸೇರಿದ ಕ್ಯಾಲಿಫೋರ್ನಿಯಾದಲ್ಲಿನ ನೆವೆರ್ ಲ್ಯಾಂಡ್ ರಂಚ್ ಆಸ್ತಿಯನ್ನು ಶತಕೋಟ್ಯಧಿಪತಿ ಉದ್ಯಮಿ ರಾನ್ ಬರ್ಕಲ್ ಖರೀದಿ ಮಾಡಿದ್ದಾರೆ. 2700 ಎಕರೆ ವ್ಯಾಪ್ತಿಯ ಭೂಮಿಯನ್ನು ಖರೀದಿಸುವುದು ಒಂದು ಅವಕಾಶ ಎಂದು ನೋಡಲಾಗಿದೆ ಎಂಬುದಾಗಿ ಅವರ ವಕ್ತಾರ ಗುರುವಾರ ಇಮೇಲ್ ನಲ್ಲಿ ತಿಳಿಸಿದ್ದಾರೆ.

 

ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಈ ಆಸ್ತಿಯನ್ನು ಬರ್ಕಲ್ ಖರೀದಿ ಮಾಡಿರುವುದು 2.2 ಕೋಟಿ ಅಮೆರಿಕನ್ ಡಾಲರ್ ಗೆ. ಈ ಬರ್ಕಲ್ ಅವರು ದಿವಂಗತ ಪಾಪ್ ಸ್ಟಾರ್ ಮೈಕೆಲ್ ಜಾಕ್ಸನ್ ಗೆ ಸಮೀಪವರ್ತಿ ಆಗಿದ್ದವರು ಮತ್ತು ಯುಕ್ಯಾಪಿಟಾ ಹೂಡಿಕೆ ಕಂಪೆನಿಗಳ ಸ್ಥಾಪಕ.

ಚೀನಾ ಸರ್ಕಾರದ ಪಾಲಿನ 'ಡಾರ್ಲಿಂಗ್' ಜಾಕ್ ಮಾ ಜತೆ ಇದೆಂಥಾ ಬ್ರೇಕ್ ಅಪ್

ಅಂದ ಹಾಗೆ, 2016ನೇ ಇಸವಿಯಲ್ಲಿ ಈ ಆಸ್ತಿಗೆ 10 ಕೋಟಿ ಯುಎಸ್ ಡಿ ಕೇಳಲಾಗುತ್ತಿತ್ತು. ಕಳೆದ ವರ್ಷ ಅದು 6.7 ಕೋಟಿ ಯುಎಸ್ ಡಿಗೆ ಇಳಿಯಿತು. ಈ ಜಾಗದಲ್ಲಿ 12500 ಚದರಡಿಯ ಮುಖ್ಯ ವಸತಿ ಜತೆಗೆ 3700 ಚದರಡಿಯ ಪೂಲ್ ಹೌಸ್ ಇದೆ. ಇನ್ನು ಐವತ್ತು ಆಸನ ಸಾಮರ್ಥ್ಯದ ಚಿತ್ರಮಂದಿರ ಹಾಗೂ ನೃತ್ಯ ಸ್ಟುಡಿಯೋ ಕೂಡ ಇದೆ. ಜತೆಗೆ ಡಿಸ್ನಿ ಮಾದರಿಯ ರೈಲು ನಿಲ್ದಾಣ, ಫೈರ್ ಹೌಸ್ ಮತ್ತು ಕೊಟ್ಟಿಗೆ ಇದೆ.

ಮೈಕೆಲ್ ಜಾಕ್ಸನ್ ಆಸ್ತಿ 162 ಕೋಟಿ ರುಪಾಯಿಗೆ ಮಾರಾಟ

ಬರ್ಕಲ್ ವಕ್ತಾರ ಮಾತನಾಡಿ, ಬರ್ಕಲ್ ಅವರು ಈ ಆಸ್ತಿಯ ಬಳಿಯೇ ಇರುವ ಝಾಕಾ ಸರೋವರದ ಕಡೆ ಹೊಸ ಸೊಹೊ ಹೌಸ್ ಗೆ ಗಮನ ಕೊಟ್ಟಿದ್ದರು. ಸೊಹೊ ಹೌಸ್ ಅಂದರೆ ಸದಸ್ಯರಿಗಾಗಿಯೇ ಇರುವ ಕ್ಲಬ್. ಲಾಸ್ ಏಂಜಲೀಸ್, ಮಿಯಾಮಿ, ನ್ಯೂಯಾರ್ಕ್ ಮತ್ತು ಟೊರೆಂಟೋದಲ್ಲಿ ಅಂಥವು ಇವೆ. ಕೊನೆಗೆ ಈ ಸ್ಥಳ ಬಹಳ ದೂರ ಮತ್ತು ಕ್ಲಬ್ ಗೆ ಬಹಳ ದುಬಾರಿ ಅಂತ ನಿರ್ಧಾರ ಮಾಡಿದರು ಎಂದಿದ್ದಾರೆ.

ಸೊಹೊ ಹೊಸ್ ಹತೋಟಿ ಹೊಂದಿರುವ ಪ್ರಮುಖ ಷೇರುದಾರ ಬರ್ಕಲ್. ವಿಮಾನದಲ್ಲಿ ಈಗಿನ ಆಸ್ತಿಯನ್ನು ನೋಡಿದ ಮೇಲೆ ತಮ್ಮದಿಂದು ಖರೀದಿ ಆಫರ್ ಮುಂದಿಟ್ಟಿದ್ದಾರೆ ಬರ್ಕಲ್.

English summary

Late Pop Singer Michael Jackson's Neverland Rach Sold To Billionaire For 22 Million USD

Late pop singer Michael Jackson's Neverlan Ranch residence sold to billionaire businessman Ron Burkle to $ 22 million.
Story first published: Friday, December 25, 2020, 18:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X