For Quick Alerts
ALLOW NOTIFICATIONS  
For Daily Alerts

ಸ್ಮಾರ್ಟ್‌ಫೋನ್ ವ್ಯವಹಾರವನ್ನು ಮುಚ್ಚುವುದಾಗಿ ಘೋಷಿಸಿದ LG

|

ದಕ್ಷಿಣ ಕೊರಿಯಾದ ಮೊಬೈಲ್ ಫೋನ್ ದೈತ್ಯ ಎಲ್‌ಜಿ ಎಲೆಕ್ಟ್ರಾನಿಕ್ಸ್ ತನ್ನ ಸ್ಮಾರ್ಟ್‌ಫೋನ್‌ ವ್ಯವಹಾರವನ್ನು ವಿಶ್ವದಾದ್ಯಂತ ಮುಚ್ಚುವುದಾಗಿ ನಿರ್ಧಾರ ತೆಗೆದುಕೊಂಡಿದೆ.

 

ತೀವ್ರ ಮಾರುಕಟ್ಟೆ ಸ್ಪರ್ಧೆ ಮತ್ತು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಆಗಮನದಿಂದಾಗಿ ಎಲ್‌ಜಿ ಮಾರುಕಟ್ಟೆ ನಿಧಾನವಾಗಿದೆ. ಕಳೆದ ಆರು ವರ್ಷಗಳಲ್ಲಿ ಇದು 4.5 ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದೆ. ಇದರಿಂದಾಗಿ ಈ ಗಂಭೀರ ನಿರ್ಧಾರ ತೆಗೆದುಕೊಳ್ಳಲಾಯಿತು.

ಸ್ಮಾರ್ಟ್‌ಫೋನ್ ವ್ಯವಹಾರವನ್ನು ಮುಚ್ಚುವುದಾಗಿ ಘೋಷಿಸಿದ LG

ಎಲ್‌ಜಿ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಭಾರೀ ನಷ್ಟದಿಂದ ಉತ್ಪನ್ನ ಮಾರಾಟವನ್ನು ಕೊನೆಗೊಳಿಸಲು ಕಂಪನಿ ನಿರ್ಧರಿಸಿದೆ. ಕಂಪನಿಯನ್ನು ಇತರ ಕಂಪನಿಗಳಿಗೆ ಮಾರಾಟ ಮಾಡುವ ಪ್ರಯತ್ನವೂ ವಿಫಲವಾಗಿದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಎಲ್‌ಜಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಅನೇಕ ನವೀನ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಸೇರಿದಂತೆ ಹಲವು ಆವಿಷ್ಕಾರಗಳನ್ನು ಮಾಡಿದೆ. 2013 ರಲ್ಲಿ, ಇದು ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿದೆ. ಆದಾಗ್ಯೂ ಕಳೆದ ಕೆಲವು ವರ್ಷಗಳಿಂದ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಪರಿಣಾಮ ನಷ್ಟ ಎದುರಿಸಬೇಕಾಗಿದೆ.

ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಮತ್ತು ಆಪಲ್ ಮೊದಲ ಎರಡು ಸ್ಥಾನಗಳಲ್ಲಿವೆ. ಆದಾಗ್ಯೂ, ಎಲ್‌ಜಿ ತನ್ನದೇ ಆದ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಮಸ್ಯೆಗಳಿಂದ ಕೂಡಿದೆ. ಇದರೊಂದಿಗೆ ಅವರು ವ್ಯವಹಾರದಲ್ಲಿ ಸ್ವಲ್ಪ ಪಾಲನ್ನು ಮಾರಾಟ ಮಾಡಲು ಬಯಸಿದ್ದರು, ಆದ್ರೀಗ ಅದು ವಿಫಲವಾಗಿದೆ.

Read more about: mobile ಮೊಬೈಲ್
English summary

LG Will Shut Down Smartphone Business Worldwide

South Korea's LG Electronics said on Monday it will wind down its loss-making mobile division - a move that is set to make it the first major smartphone brand
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X