ಮೇ 30 ರಂದು ಎಲ್ಐಸಿ ಮಂಡಳಿ ಸಭೆ: ಇಲ್ಲಿದೆ ಮಾಹಿತಿ
ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಷೇರು ಪೇಟೆಯನ್ನು ಪ್ರವೇಶಿಸಿ ಒಂದು ವಾರವಾಗಿದೆ. ಈ ನಡುವೆ ಎಲ್ಐಸಿಯ ವಾರ್ಷಿಕ ಹಣಕಾಸು ವಿಚಾರದ ಬಗ್ಗೆ ಚರ್ಚಿಸಲು ಮೇ 30 ರಂದು ಮಂಡಳಿ ಸಭೆಯನ್ನು ಸೇರಲಿದೆ.
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಷೇರುಗಳು ಅದರ ಹಿಂದಿನ ವಹಿವಾಟಿನಿಂದ ಕೊಂಚ ಏರಿಕೆ ಕಂಡಿದೆ. ಕೊನೆಯ ವಹಿವಾಟಿನಲ್ಲಿ 823.75 ರೂಪಾಯಿಗೆ ಸ್ಥಿರವಾಗಿದ್ದ ಎಲ್ಐಸಿ ಷೇರು ಇಂದು ಆರಂಭಿಕ ವಹಿವಾಟಿನಲ್ಲಿ ಶೇಕಡಾ 0.65 ರಷ್ಟು ಏರಿಕೆಯಾಗಿ 829.10 ರೂಪಾಯಿಗೆ ತಲುಪಿದೆ.
ಎಲ್ಐಸಿ ಷೇರು: ಹೂಡಿಕೆದಾರರಿಗೆ ಬರೋಬ್ಬರಿ 50,000 ಕೋಟಿ ರೂ ನಷ್ಟ!
ಎಲ್ಐಸಿ ಷೇರು ಪ್ರತಿ ದಿನ ಏರಿಳಿತ ಕಾಣುತ್ತಿದೆ. ಆರಂಭದಲ್ಲೇ ಎಲ್ಐಸಿ ಷೇರು ಕೊಂಚ ರಿಯಾಯಿತಿಯಲ್ಲಿ ಲೀಸ್ಟಿಂಗ್ ಆಗಿದೆ. ತಿ ಷೇರಿಗೆ 949 ರೂಪಾಯಿ ಆಗಿದೆ. ಆದರೆ ಈಗ ಷೇರು ಭಾರೀ ಇಳಿಕೆ ಕಂಡಿದೆ. ಮಂಗಳವಾರ 829.10 ರೂಪಾಯಿ ವಹಿವಾಟಿ ನಡೆಸುತ್ತಿದೆ.

ಹೂಡಿಕೆದಾರರಿಗೆ ಬರೋಬ್ಬರಿ 50,000 ಕೋಟಿ ರೂ ನಷ್ಟ!
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಹೂಡಿಕೆದಾರರು ಮೇ 17 ರಂದು ನಡೆದ ವಹಿವಾಟಿನಲ್ಲಿ 50,000 ಕೋಟಿ ರೂಪಾಯಿಗಿಂತ ಅಧಿಕ ಷೇರುಗಳನ್ನು ಕಳೆದುಕೊಂಡಿದ್ದಾರೆ. ಎಲ್ಐಸಿ ಷೇರು ಪ್ರತಿ ಷೇರಿಗೆ ರೂ. 867.20 ರಂತೆ ಪಟ್ಟಿಯಾಗಿದೆ. ಎಲ್ಐಸಿಯ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಅಧಿಕ ಚಂದಾದಾರಿಕೆಯಾಗಿತ್ತು. ಆದರೆ ಷೇರು ಪೇಟೆಯಲ್ಲಿ ಎಲ್ಐಸಿ ಶೇಕಡ 8.5 ಪ್ರತಿಶತದಷ್ಟು ರಿಯಾಯಿತಿಯಲ್ಲಿ ವಹಿವಾಟು ಆರಂಭ ಮಾಡಿದೆ.
ಸಂಸ್ಥೆಯು ಐಪಿಒ ಮೂಲಕ ಸುಮಾರು 21,000 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. 949 ರೂ.ಗಳ ಒಂದು ಷೇರಿನ ಮೇಲಿನ ಬೆಲೆಯ ಬ್ಯಾಂಡ್ನಲ್ಲಿ 6.01 ಟ್ರಿಲಿಯನ್ ಮೌಲ್ಯವನ್ನು ಹೊಂದಿದೆ. ಮೇ 17 ರಂದು ವಹಿವಾಟಿನ ಮುಕ್ತಾಯದಲ್ಲಿ, ಷೇರುಗಳು ಬಿಎಸ್ಇಯಲ್ಲಿ ರೂ 872.70 ನಲ್ಲಿ ಸ್ಥಿರಗೊಂಡಿದೆ. ಅದರ ವಿತರಣೆಯ ಬೆಲೆಗಿಂತ 8.04 ಶೇಕಡಾ ಕಡಿಮೆಯಾಗಿದೆ.