For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಹೊಸ ದಾಖಲೆ: ಅತಿ ಹೆಚ್ಚು ಪ್ರೀಮಿಯಂ ಸಂಗ್ರಹ

|

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) 2020-21ರ ಹಣಕಾಸು ವರ್ಷದಲ್ಲಿ 1.84 ಲಕ್ಷ ಕೋಟಿ ರೂ.ಗಳ ಪ್ರೀಮಿಯಂ ಸಂಗ್ರಹಿಸಿದ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 3.4ರಷ್ಟು ಅಥವಾ ಸುಮಾರು 1.77 ಲಕ್ಷ ಕೋಟಿ ರೂ. ನಷ್ಟಿದೆ ಎಂದು ಹೇಳಿದೆ.

 

ಕೋವಿಡ್‌-19 ಸಾಂಕ್ರಾಮಿಕದ ಪರಿಣಾಮ ಜನರು ಹೆಚ್ಚಿನ ಪ್ರೀಮಿಯಂ ಪಾವತಿಗಳನ್ನು ಮಾಡಿದ್ದರ ಜೊತೆಗೆ, ಸರ್ಕಾರಿ ವಿಮಾ ಕಂಪನಿಯು ವರ್ಷದಲ್ಲಿ 1.34 ಲಕ್ಷ ಕೋಟಿ ರೂ. ಕ್ಲೈಮ್ ಹಣವನ್ನು ಪಾವತಿ ಮಾಡಿದೆ.

ಎಲ್‌ಐಸಿ ಹೊಸ ದಾಖಲೆ: ಅತಿ ಹೆಚ್ಚು ಪ್ರೀಮಿಯಂ ಸಂಗ್ರಹ

ಎಲ್ಐಸಿ 1.85 ಲಕ್ಷ ಕೋಟಿ ರೂ.ಗಳ ಪ್ರೀಮಿಯಂನಲ್ಲಿ 56,406 ಕೋಟಿ ರೂ. ವೈಯಕ್ತಿವಾಗಿ ಪಡೆದರೆ, ಕಳೆದ ವರ್ಷ ಪಿಂಚಣಿ ಮತ್ತು ಗ್ರೂಪ್ ಇನ್ಷೂರೆನ್ಸ್‌ ಯೋಜನೆಗಳ ಅಡಿಯಲ್ಲಿ ಸುಮಾರು 1.27 ಲಕ್ಷ ಕೋಟಿ ರೂ.ಗಳನ್ನು ಗಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಪ್ರೀಮಿಯಂಗಳಿಗಾಗಿ ಎಲ್ಐಸಿಯ ಮಾರುಕಟ್ಟೆ ಪಾಲು ಮಾರ್ಚ್‌ನಲ್ಲಿ ಶೇಕಡಾ 64.74ರಷ್ಟು ಮತ್ತು ಇಡೀ ಹಣಕಾಸು ವರ್ಷದಲ್ಲಿ ಶೇಕಡಾ 66.18 ರಷ್ಟಿದೆ. ಇದಲ್ಲದೆ, ಎಲ್‌ಐಸಿ ಗಳಿಸಿದ ಮಾರುಕಟ್ಟೆ ಪಾಲು ಮಾರ್ಚ್ 2021ಕ್ಕೆ ಶೇ. 81.04ರಷ್ಟಿದ್ದು, ಪಾಲಿಸಿಗಳ ಮೂಲಕ ವರ್ಷಕ್ಕೆ ಶೇ. 75 ರಷ್ಟು ಹೊಂದಿದೆ.

ಜೀವ ವಿಮಾ ಕ್ಷೇತ್ರವು ಒಟ್ಟಾರೆಯಾಗಿ 2.78 ಲಕ್ಷ ಕೋಟಿ ರೂ.ಗಳ ಹೊಸ ಪ್ರೀಮಿಯಂಗಳನ್ನು ಸಂಗ್ರಹಿಸಿದೆ. ಇದು 2020-21 ರ ಹಣಕಾಸು ವರ್ಷದ ವಾರ್ಷಿಕ ಆಧಾರದ ಮೇಲೆ ಶೇಕಡಾ 7.5 ರಷ್ಟು ಹೆಚ್ಚಾಗಿದೆ. ಅದರಲ್ಲಿ, ಖಾಸಗಿ ಜೀವ ವಿಮಾ ಕಂಪನಿಗಳು ಹೊಸ ಪ್ರೀಮಿಯಂಗಳನ್ನು 94,103 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ಶೇಕಡಾ 16.3 ರಷ್ಟು ಬೆಳವಣಿಗೆಯನ್ನು ಹೊಂದಿದೆ.

English summary

LIC New Record: Collects Highest Ever New Premium In FY21

Life Insurance Corporation of India (LIC) has created a new record of collecting premium worth Rs 1.84 lakh crore in the financial year 2020-21, up 3.4 percent
Story first published: Wednesday, April 21, 2021, 17:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X