For Quick Alerts
ALLOW NOTIFICATIONS  
For Daily Alerts

ಇಎಂಐ ವಿನಾಯಿತಿಗೆ ಬಡ್ಡಿ ಮನ್ನಾ ವಿಚಾರಣೆ ಅಕ್ಟೋಬರ್ 5ಕ್ಕೆ ಮುಂದೂಡಿಕೆ

|

ಕೊರೊನಾ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಇಎಂಐ ವಿನಾಯಿತಿಗೆ ಬಡ್ಡಿ ಮನ್ನಾ ಮಾಡಬೇಕು ಎಂದು ಹಾಕಿಕೊಂಡಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ (ಸೆಪ್ಟೆಂಬರ್ 28, 2020) ಸುಪ್ರೀಂ ಕೋರ್ಟ್ ಮುಂದೂಡಿದ್ದು, ಅಕ್ಟೋಬರ್ 5ನೇ ತಾರೀಕು ತೀರ್ಮಾನ ಮಾಡಲಿದೆ. ಬಡ್ಡಿ ಮನ್ನಾ ವಿಚಾರದ ಜತೆಗೆ ಸಾಲ ಮರುಪಾವತಿ ವಿನಾಯಿತಿ ವಿಸ್ತರಣೆ ಬಗ್ಗೆ ಅಹವಾಲು ಆಲಿಸಲಾಗುತ್ತದೆ.

 

ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ಕೋರ್ಟ್ ಗೆ ಮಾಹಿತಿ ನೀಡಿ, ಈ ವಿಚಾರವನ್ನು ಕೇಂದ್ರವು ಸಕ್ರಿಯವಾಗಿ ಪರಿಗಣಿಸುತ್ತಿದೆ. ಇನ್ನು ಎರಡು- ಮೂರು ದಿನದಲ್ಲಿ ತೀರ್ಮಾನ ಕೈಗೊಳ್ಳುತ್ತದೆ ಎಂದಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 10ನೇ ತಾರೀಕು ವಿಚಾರಣೆಯಲ್ಲಿ ಅಫಿಡವಿಟ್ ಸಲ್ಲಿಸುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸುಪ್ರೀಂ ಕೋರ್ಟ್ ಸಮಯ ನೀಡಿತ್ತು.

ಇನ್ನು ಕೋರ್ಟ್ ನಲ್ಲಿ ಅಂತಿಮವಾಗಿ ತೀರ್ಮಾನ ಆಗುವ ತನಕ ಆಗಸ್ಟ್ 31ನೇ ತಾರೀಕಿಗೆ ಬಾಕಿ ಇರುವ ಸಾಲದ ಖಾತೆಯನ್ನು ಬ್ಯಾಡ್ ಡೆಟ್ ಅಥವಾ ಎನ್ ಪಿಎ ಎಂದು ಪರಿಗಣಿಸದಂತೆ ಸೂಚನೆ ನೀಡಿತ್ತು. ಇನ್ನು ಆರ್ ಬಿಐ ಹಾಗೂ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿ, ಇನ್ನೂ ಎರಡು ವರ್ಷಗಳ ತನಕ ವಿನಾಯಿತಿ ನೀಡಬಹುದು ಎಂದಿದ್ದವು. ಆದರೆ ಅದಕ್ಕೆ ಕೆಲವು ನಿರ್ದಿಷ್ಟ ಅಂಶಗಳು ಮತ್ತು ವಲಯವನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದವು.

ಇಎಂಐ ವಿನಾಯಿತಿಗೆ ಬಡ್ಡಿ ಮನ್ನಾ ವಿಚಾರಣೆ ಅಕ್ಟೋಬರ್ 5ಕ್ಕೆ ಮುಂದೂಡಿಕೆ

ಕೊರೊನಾ ಬಿಕ್ಕಟ್ಟಿನಿಂದ ಅತಿ ದೊಡ್ಡ ಮಟ್ಟದ ಸಮಸ್ಯೆ ಆಗಿರುವುದು ಯಾರಿಗೆ ಮತ್ತು ಯಾವ ವಲಯಕ್ಕೆ ಎಂಬುದನ್ನು ಗುರುತಿಸಲಾಗುವುದು ಎಂದಿತ್ತು. ಮುಂದುವರಿದು, ಮುಂದಕ್ಕೆ ಹಾಕಲಾದ ಇಎಂಐಗೆ ಬಡ್ಡಿ ಮನ್ನಾ ಮಾಡಿದಲ್ಲಿ ಪ್ರಾಮಾಣಿಕವಾಗಿ ಇಎಂಐ ಕಟ್ಟಿಕೊಂಡು ಹೋಗುತ್ತಿರುವವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿತ್ತು.

English summary

Loan Moratorium Case In SC: Interest Waiver Hearing Deferred To October 5th

Supreme Court deferred interest waiver on loan moratorium case to October 5th on Monday. Here is the case details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X