For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್ ಎಫೆಕ್ಟ್: ಎಲ್‌ಪಿಜಿ ಬಳಕೆಯಲ್ಲಿ ಮತ್ತಷ್ಟು ಹೆಚ್ಚಳ

|

ಭಾರತದಲ್ಲಿ ಎಲ್ಲೆಲ್ಲೂ ಲಾಕ್‌ಡೌನ್‌ ಪರಿಸ್ಥಿತಿ ಇರುವುದರಿಂದ ಶುದ್ಧೀಕರಿಸಿದ ತೈಲ ಹಾಗೂ ತೈಲೋತ್ಪನ್ನಗಳ ಬೇಡಿಕೆ ಸರಾಸರಿಯಾಗಿ 50 ಪರ್ಸೆಂಟ್‌ರಷ್ಟು ಕುಸಿದಿದೆ. ಇದೇ ತಿಂಗಳ ಮೊದಲೆರಡು ವಾರದಲ್ಲಿ ಈ ಕುಸಿತ ಕಂಡುಬಂದಿದೆ. ಆದರೆ, ಎಲ್‌ಪಿಜಿಯ ಬೇಡಿಕೆಯು 21 ಪರ್ಸೆಂಟ್‌ರಷ್ಟು ಹೆಚ್ಚಾಗಿದೆ.

ಲಾಕ್‌ಡೌನ್ ಎಫೆಕ್ಟ್: ಎಲ್‌ಪಿಜಿ ಬಳಕೆಯಲ್ಲಿ ಮತ್ತಷ್ಟು ಹೆಚ್ಚಳ

 

ಕಳೆದ ವರ್ಷದ ಎಪ್ರಿಲ್‌ನ ಮೊದಲೆರಡು ವಾರಕ್ಕೆ ಹೋಲಿಸಿದರೆ ಈ ವರ್ಷ ಅದೇ ಅವಧಿಯಲ್ಲಿ ಡೀಸೆಲ್‌ (ಗ್ಯಾಸ್‌ ಆಯಿಲ್‌) ಮಾರಾಟ 61 ಪರ್ಸೆಂಟ್‌ರಷ್ಟು ಇಳಿಮುಖವಾಗಿದ್ದರೆ, ಗ್ಯಾಸೋಲಿನ್‌ (ಪರಿಶುದ್ಧ ಪೆಟ್ರೋಲ್‌) ಹಾಗೂ ಜೆಟ್‌ ಇಂಧನದ ಮಾರಾಟ ಕ್ರಮವಾಗಿ 64 ಪರ್ಸೆಂಟ್ ಹಾಗೂ 94 ಪರ್ಸೆಂಟ್‌ರಷ್ಟು ತಗ್ಗಿದೆ. ಇದು ಮುಂದುವರಿದು ಪೆಟ್ರೋಲ್‌ ಮಾರಾಟ ಈ ವರ್ಷ ಒಟ್ಟಾರೆಯಾಗಿ 9 ಪರ್ಸೆಂಟ್‌ರಷ್ಟು ಹಾಗೂ ಡೀಸೆಲ್‌ ಬೇಡಿಕೆ 6.1 ಪರ್ಸೆಂಟ್‌ರಷ್ಟು ತಗ್ಗಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

ಇನ್ನು ಕಳೆದ ವರ್ಷದ ಎಪ್ರಿಲ್‌ನ ಮೊದಲೆರಡು ವಾರಗಳಿಗೆ ಹೋಲಿಸಿದರೆ, ಈ ವರ್ಷ ಅದೇ ಅವಧಿಯಲ್ಲಿ ಸರಕಾರಿ ಸ್ವಾಮ್ಯದ ಕಂಪೆನಿಗಳು 24 ಪರ್ಸೆಂಟ್‌ರಷ್ಟು ಹೆಚ್ಚು ಎಲ್‌ಪಿಜಿಯನ್ನು ಮಾರಾಟ ಮಾಡಿವೆ. ಲಾಕ್‌ಡೌನ್‌ನಿಂದಾಗಿ ಎಲ್ಲರೂ ಮನೆಯಲ್ಲಿ ಇರುವಂತಾಗಿರುವುದು ಇದಕ್ಕೆ ಒಂದು ಕಾರಣವಾದರೆ, ಕೇಂದ್ರ ಸರಕಾರ ಬಡವರಿಗೆ, ಕೂಲಿ ಕಾರ್ಮಿಕರಿಗೆ ಮುಂದಿನ ಮೂರು ತಿಂಗಳವರೆಗೆ ಉಚಿತ ಪಡಿತರ, ಎಲ್‌ಪಿಜಿ ನೀಡಿರುವುದು ಮತ್ತೂಂದು ಕಾರಣವಾಗಿದೆ.

English summary

Lockdown Impact LPG Demand Rises 21 Percent

Lockdown impact India's LPG Dempand rises 21 Percent and Fuel Demand very low
Story first published: Monday, April 20, 2020, 10:55 [IST]
Company Search
COVID-19