For Quick Alerts
ALLOW NOTIFICATIONS  
For Daily Alerts

ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆ: ಎಷ್ಟು ರೂಪಾಯಿ ಕಡಿಮೆ ಆಗಿದೆ?

|

ಪೆಟ್ರೋಲ್, ಡೀಸೆಲ್ ಜೊತೆಯಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಭಾರೀ ಏರಿಕೆಗೆ ಸಾಕ್ಷಿಯಾಗಿದ್ದ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 10 ರೂ.ಗೆ ಇಳಿಸಲಾಗಿದೆ ಎಂದು ಇಂಡಿಯನ್ ಆಯಿಲ್ ಲಿಮಿಟೆಡ್ ವರದಿ ಮಾಡಿದೆ. ಈ ಪರಿಷ್ಕೃತ ಬೆಲೆಗಳು 1 ಏಪ್ರಿಲ್ 2021 ರಿಂದ ಜಾರಿಗೆ ಬರಲಿವೆ.

 

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಟ್ವಿಟರ್ ಮೂಲಕ 10 ರೂ.ಗೆ ಇಳಿಸುವುದಾಗಿ ಕಂಪನಿ ಪ್ರಕಟಿಸಿದೆ. ಈ ಕಡಿತದ ನಂತರ, ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 819 ರೂಪಾಯಿನಿಂದ 809 ರೂಪಾಯಿಗೆ ತಗ್ಗಿದೆ.

ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆ: ಎಷ್ಟು ರೂಪಾಯಿ ಕಡಿಮೆ ಆಗಿದೆ?

ಅದೇ ಸಮಯದಲ್ಲಿ, ಕೋಲ್ಕತ್ತಾದಲ್ಲಿ 835.50 ರೂ., ಮುಂಬೈನಲ್ಲಿ 809 ರೂ. ಮತ್ತು ಚೆನ್ನೈನಲ್ಲಿ ಸಿಲಿಂಡರ್‌ಗೆ 825 ರೂಪಾಯಿಗೆ ಮುಟ್ಟಿದೆ. ದೆಹಲಿಯಲ್ಲಿ ಈ ವರ್ಷದ ಜನವರಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 692 ರೂ. ಫೆಬ್ರವರಿಯಲ್ಲಿ ಇದನ್ನು ಪ್ರತಿ ಸಿಲಿಂಡರ್‌ಗೆ 719 ರೂ.ಗೆ ಹೆಚ್ಚಿಸಲಾಯಿತು. ಫೆಬ್ರವರಿ 15 ರಂದು ಬೆಲೆಯನ್ನು 769 ರೂಗಳಿಗೆ ಹೆಚ್ಚಿಸಲಾಯಿತು. ಜೊತೆಗೆ ಮಾರ್ಚ್‌ನಲ್ಲಿ ದೆಹಲಿಯಲ್ಲಿ ಸಬ್ಸಿಡಿರಹಿತ ಎಲ್‌ಪಿಜಿ ಬೆಲೆ ಇಂದು 25 ರೂ.ಗಳಷ್ಟು ಹೆಚ್ಚಾಗಿದೆ.

ಅದೇ ಸಮಯದಲ್ಲಿ, ಇಂಡೇನ್‌ನ 19 ಕೆಜಿ ಸಿಲಿಂಡರ್ ಬೆಲೆ ಮಾರ್ಚ್‌ನಲ್ಲಿ 1614 ರೂ, ಕೋಲ್ಕತ್ತಾದಲ್ಲಿ 1681.50 ರೂ, ಮುಂಬೈನಲ್ಲಿ 1563.50 ಮತ್ತು ಚೆನ್ನೈನಲ್ಲಿ 1730.50 ರೂ. ನಷ್ಟಿದೆ.

English summary

LPG Cylinder Price Down Rs 10: Check Latest Rates

Liquefied petroleum gas (LPG) cylinder prices have been Down by Rs 10 on Thursday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X