For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್‌: ಎಲ್‌ಪಿಜಿ ಸಿಲಿಂಡರ್ ವಿತರಣೆಗೆ ಗ್ರಾಹಕರು ಕಾಯಬೇಕಾಗಬಹುದು?

|

ಪ್ರತಿ ತಿಂಗಳು ಎಲ್‌ಪಿಜಿ ಗ್ಯಾಸ್ ಬುಕ್‌ ಮಾಡುವುದು ಈಗ ಮೊದಲಿಗಿಂತಲೂ ಸುಲಭವಾಗಿದೆ. ಆದರೆ ವಿತರಣೆಯ ವಿಷಯಕ್ಕೆ ಬಂದರೆ ಗ್ರಾಹಕರು ಸಿಲಿಂಡರ್‌ಗಳ ವಿತರಣೆಗೆ ಬಹಳ ಸಮಯ ಕಾಯಬೇಕಾಗಬಹುದು. ಕೋವಿಡ್-19 ಸಾಂಕ್ರಾಮಿಕ ರೋಗವು ಬಹುತೇಕ ವ್ಯವಸ್ಥೆಗಳಿಗೆ ತೊಂದರೆಯನ್ನುಂಟು ಮಾಡಿದೆ. ಹೀಗೆ ಎಲ್‌ಪಿಜಿ ಸಿಲಿಂಡರ್ ವಿತರಣೆಗಳ ಮೇಲೂ ಪರಿಣಾಮ ಬೀರಬಹುದು.

 

ಶೇಕಡಾ 20ಕ್ಕಿಂತ ಹೆಚ್ಚು ವಿತರಣಾಕಾರರು ಕೋವಿಡ್ ಸೋಂಕಿಗೆ ಒಳಗಾಗಿರುವುದರಿಂದ ಕಾಯುವ ಅವಧಿ ಹೆಚ್ಚಾಗಬಹುದು. ಇದಕ್ಕೆ ದೊಡ್ಡ ಕಾರಣವೆಂದರೆ ಹೆಚ್ಚಿನ ಸಂಖ್ಯೆಯ ಮಾರಾಟಗಾರರು ಸೋಂಕಿಗೆ ಒಳಗಾಗಿದ್ದಾರೆ. ಕಳೆದ 20 ದಿನಗಳಲ್ಲಿ ವಿತರಣಾ ಕಾಯುವ ಅವಧಿ ಒಂದು ದಿನದಿಂದ ಮೂರು ದಿನಗಳಿಗೆ ಹೆಚ್ಚಾಗಿದೆ.

ಎಲ್‌ಪಿಜಿ ಸಿಲಿಂಡರ್ ವಿತರಣೆಗೆ ಗ್ರಾಹಕರು ಕಾಯಬೇಕಾಗಬಹುದು?

ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಿರುವ ಕಾರಣ ಮುಂದಿನ ದಿನಗಳಲ್ಲಿ ಕಾಯುವ ಅವಧಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಮಾಹಿತಿಯ ಪ್ರಕಾರ, ಶೇಕಡಾ 20 ಕ್ಕೂ ಹೆಚ್ಚು ಡೆಲಿವರಿಮೆನ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ಶೇಕಡಾ 5 ರಷ್ಟು ವಿತರಣಾ ಸಿಬ್ಬಂದಿಗಳು ಮಾತ್ರ ಕೊರೊನಾವೈರಸ್ಸ ಸೋಂಕಿಗೆ ಒಳಗಾಗಿದ್ದರು.

ಹೆಚ್ಚುತ್ತಿರುವ ಕೊರೊನಾ ಕಾರಣದಿಂದಾಗಿ ಅನೇಕ ರಾಜ್ಯಗಳು ಲಾಕ್‌ಡೌನ್ ಮೊರೆ ಹೋಗಿರುವುದರಿಂದ ಸಿಲಿಂಡರ್ ಬುಕಿಂಗ್ ಕೂಡ ಕಡಿಮೆಯಾಗಿದೆ. ವಾಣಿಜ್ಯ ಸಿಲಿಂಡರ್ ಬುಕಿಂಗ್ ಏಪ್ರಿಲ್‌ನಲ್ಲಿ ಶೇಕಡಾ 80 ರಷ್ಟು ಕುಸಿದಿದೆ. ಮತ್ತೊಂದೆಡೆ, ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್‌ನಲ್ಲಿ ಶೇಕಡಾ 25ರಷ್ಟು ಕಡಿತಗೊಂಡಿದೆ. ಉಜ್ವಲಾ ಗ್ರಾಹಕ ಮಾಸಿಕ ಬುಕಿಂಗ್ ಶೇಕಡಾ 20 ರಿಂದ 25ರಷ್ಟು ಕಡಿಮೆಯಾಗಿದೆ.

Read more about: lpg ಎಲ್‌ಪಿಜಿ
English summary

LPG Cylinder : Delivery weighting period increased from 1 day to 3 days in last 20 days

12 refills of liquefied petroleum gas (LPG) and there is no waiting period of 14 days between two bookings, a reply received under Right to Information (RTI) shows.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X