For Quick Alerts
ALLOW NOTIFICATIONS  
For Daily Alerts

ಎಲ್‌ಪಿಜಿ ಸಿಲಿಂಡರ್‌ ಬೆಲೆ 7 ವರ್ಷದಲ್ಲಿ ದುಪ್ಪಟ್ಟು ಏರಿಕೆ: ತೈಲದ ಮೇಲಿನ ತೆರಿಗೆ ಸಂಗ್ರಹ 459% ಹೆಚ್ಚಳ

|

ಕಳೆದ ಕೆಲವು ತಿಂಗಳುಗಳಲ್ಲಿ ದೇಶೀಯ ಸಬ್ಸಿಡಿ ಎಲ್‌ಪಿಜಿಯ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಪ್ರಧಾನ್ ಹೇಳಿದ್ದಾರೆ. 2020 ರ ಡಿಸೆಂಬರ್‌ನಲ್ಲಿ ಇದರ ಬೆಲೆ ಪ್ರತಿ ಸಿಲಿಂಡರ್‌ಗೆ 594 ರೂ. ಮತ್ತು ಈಗ ಇದರ ಬೆಲೆ 819 ರೂ. ತಲುಪಿದೆ.

 

ಇನ್ನು ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿಬಿಟ್ಟಿದೆ. ಇದರ ಜೊತೆಗೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ, ವ್ಯಾಟ್‌ ಕೂಡ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 91.17 ರೂ. ಮತ್ತು ಡೀಸೆಲ್ ದರ 81.47 ರೂ. ನಷ್ಟಿದೆ.

ಕಳೆದ 7 ವರ್ಷದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ದುಪ್ಪಟ್ಟಾಗಿದೆ!

ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ತೆರಿಗೆ ಆದಾಯವು ಸರ್ಕಾರದ ಪ್ರಮುಖ ಆದಾಯದ ಮೂಲವಾಗಿದ್ದು, ಎರಡು ಇಂಧನಗಳ ಮೇಲೆ ಸಂಗ್ರಹಿಸಿದ ತೆರಿಗೆ 2013 ರಲ್ಲಿ 52,537 ಕೋಟಿ ರೂ. ಆಗಿದ್ದು, ಇದು 2019-20ರಲ್ಲಿ 2.13 ಲಕ್ಷ ಕೋಟಿ ರೂ.ಗೆ ಏರಿತು. ಆದರೆ ಪ್ರಸಕ್ತ ಹಣಕಾಸು ವರ್ಷದ ಮೊದಲ 11 ತಿಂಗಳಲ್ಲಿ ಬರೋಬ್ಬರಿ 2.94 ಲಕ್ಷ ಕೋಟಿ ರೂ.ಗೆ ತಲುಪಿದೆ.

ಸರ್ಕಾರವು ಪ್ರಸ್ತುತ ಪೆಟ್ರೋಲ್‌ಗೆ 32.90 ರೂ. ಮತ್ತು ಡೀಸೆಲ್‌ಗೆ 31.80 ರೂ. ತೆರಿಗೆ ವಿಧಿಸುತ್ತದೆ. ಪೆಟ್ರೋಲ್, ಡೀಸೆಲ್, ಎಟಿಎಫ್, ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲದಿಂದ ಒಟ್ಟು ಅಬಕಾರಿ ಸಂಗ್ರಹವು 2016-17ರಲ್ಲಿ 2.37 ಲಕ್ಷ ಕೋಟಿ ರೂ.ಗಳಿಂದ 2020-21 ಏಪ್ರಿಲ್-ಜನವರಿ ಅವಧಿಯಲ್ಲಿ 3.01 ಲಕ್ಷ ಕೋಟಿ ರೂ.ಗೆ ಏರಿದೆ.

English summary

LPG Prices Double In 7 Years: Petrol, Diesel Tax Collection Up 459%

Price of domestic cooking gas, LPG has doubled to Rs 819 per cylinder in the last seven years.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X