For Quick Alerts
ALLOW NOTIFICATIONS  
For Daily Alerts

ಲುಫ್ತಾನ್ಸಾದಿಂದ ಅ. 20ರ ತನಕ ಭಾರತಕ್ಕೆ ಎಲ್ಲ ನಿಗದಿತ ವೇಳಾಪಟ್ಟಿ ವಿಮಾನ ರದ್ದು

By ಅನಿಲ್ ಆಚಾರ್
|

ಜರ್ಮನ್ ವಿಮಾನ ಯಾನ ಸಂಸ್ಥೆಯಾದ ಲುಫ್ತಾನ್ಸಾದಿಂದ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 20, 2020ರ ತನಕ ಭಾರತಕ್ಕೆ ಎಲ್ಲ ವಿಮಾನಗಳನ್ನೂ ರದ್ದು ಮಾಡಲಾಗಿದೆ. ಅಕ್ಟೋಬರ್ ತಿಂಗಳಿನ ನಿಗದಿತ ವೇಳಾಪಟ್ಟಿಯ ಎಲ್ಲ ವಿಮಾನಗಳನ್ನು ಭಾರತೀಯ ಅಧಿಕಾರಿಗಳು "ಅನಿರೀಕ್ಷಿತವಾಗಿ ತಿರಸ್ಕರಿಸಿದ್ದಾರೆ" ಎಂಬ ಕಾರಣ ನೀಡಿದೆ.

"ವಿಶೇಷ ವಿಮಾನಗಳ ಹಾರಾಟ ಮುಂದುವರಿಕೆಗೆ ಲುಫ್ತಾನ್ಸಾ ಅರ್ಜಿ ಹಾಕಿಕೊಂಡಿತ್ತು. ಸೆಪ್ಟೆಂಬರ್ ಕೊನೆ ತನಕ ಅವಕಾಶ ನೀಡಲಾಗಿತ್ತು. ಈ ಅರ್ಜಿ ಪ್ರಕ್ರಿಯೆ ಬಹಳ ಮುಖ್ಯ. ತಾತ್ಕಾಲಿಕ ಪ್ರಯಾಣ ಒಪ್ಪಂದದ ಚರ್ಚೆಗೆ ಜರ್ಮನಿ ಸರ್ಕಾರ ನೀಡಿರುವ ಆಹ್ವಾನಕ್ಕೆ ಈ ತನಕ ಭಾರತದಿಂದ ಒಪ್ಪಿಗೆ ಬಂದಿಲ್ಲ," ಎಂದು ಲುಫ್ತಾನ್ಸಾದಿಂದ ಹೇಳಿಕೆಯಲ್ಲಿ ಮಂಗಳವಾರ ತಿಳಿಸಲಾಗಿದೆ.

In Flight Mobile Service: ವಿಮಾನದೊಳಗೆ ಜಿಯೋ ಮೊಬೈಲ್ ಸೇವೆ

 

"ಭಾರತದ ಸರ್ಕಾರ ತಿರಸ್ಕರಿಸಿರುವುದರಿಂದ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 20ರ ಮಧ್ಯೆ ಭಾರತ ಹಾಗೂ ಜರ್ಮನಿ ಮಧ್ಯೆ ವೇಳಾಪಟ್ಟಿಯಂತೆ ಸಿದ್ಧವಾಗಿರುವ ಎಲ್ಲ ವಿಮಾನಗಳನ್ನು ರದ್ದು ಮಾಡಬೇಕಾಗುತ್ತದೆ," ಎಂದು ಲುಫ್ತಾನ್ಸಾ ತಿಳಿಸಿದೆ.

ಹದಿಮೂರು ದೇಶಗಳ ಜತೆ ಏರ್ ಬಬಲ್ ಒಪ್ಪಂದ

ಹದಿಮೂರು ದೇಶಗಳ ಜತೆ ಏರ್ ಬಬಲ್ ಒಪ್ಪಂದ

ಸದ್ಯಕ್ಕೆ ಭಾರತವು ಹದಿಮೂರು ದೇಶಗಳ ಜತೆ ಏರ್ ಬಬಲ್ ಒಪ್ಪಂದ ಮಾಡಿಕೊಂಡಿದೆ. ಯುಎಸ್, ಯುಕೆ, ಯುಎಇ, ಮಾಲ್ಡೀವ್ಸ್, ಫ್ರಾನ್ಸ್, ಜರ್ಮನಿ, ಕೆನಡಾ, ಕತಾರ್, ಬಹರೇನ್, ನೈಜೀರಿಯಾ, ಇರಾಕ್, ಅಫ್ಗಾನಿಸ್ತಾನ್ ಹಾಗೂ ಜಪಾನ್ ಈ ದೇಶಗಳ ಜತೆ ಒಪ್ಪಂದ ಇದೆ. ಇದೇ ರೀತಿಯ ಒಪ್ಪಂದಕ್ಕೆ ಇನ್ನೂ ಹಲವು ದೇಶಗಳ ಜತೆಗೆ ಮಾತುಕತೆ ನಡೆಸುತ್ತಿದೆ. ಏರ್ ಬಬಲ್ ಎಂಬುದು ದ್ವಿಪಕ್ಷೀಯ ಒಪ್ಪಂದ. ನಿರ್ದಿಷ್ಟ ವಿಮಾನ ಯಾನ ಸಂಸ್ಥೆಗಳು ಎರಡೂ ದೇಶಗಳ ಮಧ್ಯೆ ಯಾವುದೇ ನಿರ್ಬಂಧ ಇಲ್ಲದೆ ಹಾರಾಟ ನಡೆಸಬಹುದು ಎಂಬ ಒಪ್ಪಂದ. ನಾನಾ ದೇಶಗಳಲ್ಲಿ ಲಾಕ್ ಡೌನ್ ಜಾರಿಗೆ ತಂದ ಮೇಲೆ ಈ ಪದ್ಧತಿ ಬಂತು.

ಲುಫ್ತಾನ್ಸಾದಿಂದ ಇಪ್ಪತ್ತು ವಿಮಾನಗಳು ಹಾರಾಟ

ಲುಫ್ತಾನ್ಸಾದಿಂದ ಇಪ್ಪತ್ತು ವಿಮಾನಗಳು ಹಾರಾಟ

"ಭಾರತೀಯ ವಿಮಾನಗಳು ವಾರಕ್ಕೆ ಮೂರ್ನಾಲ್ಕು ಹಾರಾಟ ನಡೆಸಿದರೆ, ಲುಫ್ತಾನ್ಸಾದಿಂದ ಇಪ್ಪತ್ತು ವಿಮಾನಗಳು ಹಾರಾಟ ನಡೆಸುತ್ತಿವೆ. ಈ ತಾರತಮ್ಯವನ್ನು ಹೊರತುಪಡಿಸಿ, ಲುಫ್ತಾನ್ಸಾಗೆ ವಾರದಲ್ಲಿ ಏಳು ವಿಮಾನ ಹಾರಾಟಕ್ಕೆ ಅವಕಾಶ ನೀಡಿದೆವು. ಆದರೆ ಅವರು ಒಪ್ಪಲಿಲ್ಲ. ಮಾತುಕತೆ ಮುಂದುವರಿದಿದೆ," ಎಂದು ಹೇಳಲಾಗಿದೆ.

English summary

Lufthansa Cancels All Scheduled Flights To India Till October 20

German airlines Lufthansa cancels all scheduled flights to India till October 20, 2020. Here is the reason behind.
Company Search
COVID-19