For Quick Alerts
ALLOW NOTIFICATIONS  
For Daily Alerts

ಕಳೆದ ವಾರದ ಟಾಪ್ 10 ಕಂಪನಿಗಳ ಮಾರುಕಟ್ಟೆ ಮೌಲ್ಯ ಹೀಗಿದೆ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳಲ್ಲಿ ಹಿಂದೂಸ್ತಾನ್ ಯೂನಿಲಿವರ್ (ಎಚ್ ಯುಎಲ್) ಹಾಗೂ ಬಜಾಜ ಫೈನಾನ್ಸ್ ಮಾತ್ರ ಕಳೆದ ವಾರದಲ್ಲಿ ಮೌಲ್ಯ ಕುಸಿತ ಕಂಡಿದೆ.

 

ಮಿಕ್ಕ 8 ಕಂಪನಿಗಳು ಮಾರುಕಟ್ಟೆ ಮೌಲ್ಯ ಕಳೆದ ವಾರ ಏರಿಕೆ ಕಂಡು ಒಟ್ಟಾರೆ, 1,39,566.52 ಕೋಟಿ ರು ಮೌಲ್ಯ ಏರಿಕೆಯಾಗಿದೆ.

ಕುಸಿತ ಕಂಡ ಕಂಪನಿ: ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 8,904.94 ಕೋಟಿ ರು ಕಳೆದುಕೊಂಡು 5,45,762.50 ಕೋಟಿ ರುಗೆ ಕುಸಿದಿದೆ. ಬಜಾಜ್ ಫೈನಾನ್ಸ್ 1,282.63 ಕೋಟಿ ರು ಕಳೆದುಕೊಂಡು 3,38, 589.27 ಕೋಟಿ ರು ಆಗಿದೆ.

ಕಳೆದ ವಾರದ ಟಾಪ್ 10 ಕಂಪನಿಗಳ ಮಾರುಕಟ್ಟೆ ಮೌಲ್ಯ ಹೀಗಿದೆ

ಎಚ್‌ಡಿಎಫ್‌ಸಿ ಬ್ಯಾಂಕ್ ಮೌಲ್ಯ 2,721,71 ಕೋಟಿ ರು ಏರಿಕೆ ಕಂಡು 8,28,314.24 ಕೋಟಿ ರು ಆಗಿದೆ. ಇದೇ ವೇಳೆ, ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 59,590.77 ಕೋಟಿ ರು ಏರಿಕೆಯಾಗಿ 13,28, 049.94 ಕೋಟಿ ರು ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 18,697.06ಕೋಟಿ ರು ಏರಿಕೆಯಾಗಿ 3,76,663.23 ಕೋಟಿ ರು ಆಗಿದೆ.

ಈ ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ(ಟಿಸಿಎಸ್) 23,562.96ಕೋಟಿ ರು ಏರಿಕೆ ಕಂಡು 11,63,018.74 ಕೋಟಿ ರು ಆಗಿದೆ. ಇನ್ಫೋಸಿಸ್ 21,395.27ಕೋಟಿ ರು ಏರಿಕೆ ಕಂಡು 5,98, 604.10 ಕೋಟಿ ರು ಆಗಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 8,435.06ಕೋಟಿ ರು ಏರಿಕೆ ಕಂಡು 3, 76, 663.23 ಕೋಟಿ ರು ಆಗಿದೆ. ಎಚ್ ಡಿ ಎಫ್ ಸಿ 4,555.41 ಕೋಟಿ ರು ಏರಿಕೆಯಾಗಿ 4,58,418.62 ಕೋಟಿ ರು ಮುಟ್ಟಿದೆ. ಐಸಿಐಸಿಐ 602.28 ಕೋಟಿ ರು ಏರಿಕೆ ಕಂಡು 4,45, 171.34 ಕೊಟಿ ರು ಆಗಿದೆ.

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಬಜಾಜ್ ಫೈನಾನ್ಸ್.

English summary

M- Cap last week: Hindustan Unilever and Bajaj Finance decline

M- Cap valuation last week: Hindustan Unilever and Bajaj Finance witnessed a decline.
Story first published: Sunday, May 30, 2021, 12:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X