ಕಳೆದ ವಾರದ ಟಾಪ್ 10 ಮೌಲ್ಯ: ಟಿಸಿಎಸ್, ರಿಲಯನ್ಸ್ ಸಂಸ್ಥೆಗೆ ಭಾರಿ ಲಾಭ
ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಐದು ಕಂಪನಿಗಳು ಒಟ್ಟಾರೆ 1,01,145.09 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡಿವೆ. ಕಳೆದ ವಾರದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಭಾರಿ ಲಾಭ ಗಳಿಸಿವೆ. ಕಳೆದ ವಾರ ರಿಲಯನ್ಸ್ ಭಾರಿ ನಷ್ಟ ಅನುಭವಿಸಿತ್ತು.
ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 112.57 ಅಂಕ ಅಥವಾ ಶೇ 0.10 ರಷ್ಟು ಗಳಿಕೆ ಕಂಡಿತ್ತು. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕಡಿಮೆ ಕಂಪನಿ ಮೌಲ್ಯ ಗಳಿಸಿಕೊಂಡಿವೆ. ಟಾಪ್ 10 ರಲ್ಲಿ 5 ಕಂಪನಿಗಳ ಮೌಲ್ಯ ಬದಲಾಗಿದೆ. ಓಮಿಕ್ರಾನ್ ಭೀತಿ ನಡುವೆ ಷೇರುಪೇಟೆಯಲ್ಲಿ ಸುಧಾರಣೆ ಕಂಡು ಬಂದಿದೆ.
ಕೊರೊನಾವೈರಸ್ ಹೊಸ ರೂಪಾಂತರಿ ಅಲೆಯಿಂದ ಷೇರುಪೇಟೆ ವಹಿವಾಟು ಭಾರಿ ನಷ್ಟ ಅನುಭವಿಸಿದ್ದವು, ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ರಿಲಯನ್ಸ್, ಟಿಸಿಎಸ್ ಅಲ್ಲದೆ, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ವಿಪ್ರೋ ಲಾಭ ಗಳಿಸಿವೆ. ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಎಸ್ ಬಿ ಐ ಮೌಲ್ಯ ಕುಸಿತ ಕಂಡಿದೆ. ಯಾವ ಕಂಪನಿ ಮೌಲ್ಯ ಏರಿಕೆಯಾಗಿದೆ ಹಾಗೂ ಯಾವ ಕಂಪನಿ ಮೌಲ್ಯ ಕುಸಿದಿದೆ ಎಂಬ ವಿವರ ಮುಂದೆ ಓದಿ..

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 30,720.62 ಕೋಟಿ ರು ಕುಸಿತ ಕಂಡು 13,57,644.33 ಕೋಟಿ ರು ಮೌಲ್ಯ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ 21,035.95 ಕೋಟಿ ರು ಇಳಿಕೆ ಕಂಡು 16,04,154.56 ರು ಆಗಿದೆ. ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಕಳೆದ ಒಂದು ವಾರದಲ್ಲಿ 17,656.95 ಕೋಟಿ ರು ಮೌಲ್ಯ ಏರಿಸಿಕೊಂಡು 7,83,779.99 ಕೋಟಿ ರು ಮೌಲ್ಯ ಹೊಂದಿದೆ.

ಹಿಂದೂಸ್ತಾನ್ ಯೂನಿಲಿವರ್
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 16,000.71ಕೋಟಿ ರು ಇಳಿಕೆ ಕಂಡು 5,40,053.55 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ. ವಿಪ್ರೋ ಮೌಲ್ಯ 15,730.86 ಕೋಟಿ ರು ಏರಿಕೆ ಕಂಡು 3,82,857.25 ಕೋಟಿ ರು ಗೆ ಏರಿಕೆಯಾಗಿದೆ.

ಎಚ್ಡಿಎಫ್ಸಿ
ಎಚ್ಡಿಎಫ್ಸಿ ಬ್ಯಾಂಕ್ 18,619.95 ಕೋಟಿ ರು ಇಳಿಕೆ ಕಂಡು 7,97,609.94 ಕೋಟಿ ರು ತಲುಪಿದೆ. ಇದೇ ವೇಳೆ ಎಚ್ಡಿಎಫ್ಸಿ 15,083.97 ಕೋಟಿ ರು ಮೌಲ್ಯ ಇಳಿಕೆ ಕಂಡು 4,58,838.89 ಕೋಟಿ ರು ತಲುಪಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 9,727.82 ಕೋಟಿ ರು ಇಳಿಸಿಕೊಂಡು 4,07,720.88 ಕೋಟಿ ರು ಮೌಲ್ಯಕ್ಕೆ ಇಳಿದಿದೆ.

ಬಜಾಜ್ ಫೈನಾನ್ಸ್
ಬಜಾಜ್ ಫೈನಾನ್ಸ್ 3,048.15 ಕೋಟಿ ರು ಇಳಿಸಿಕೊಂಡು 4,13,546.63 ಕೋಟಿ ರುಗೆ ಹೆಚ್ಚಳ ಕಂಡಿದೆ. ಐಸಿಐಸಿಐ ಬ್ಯಾಂಕ್ 476.81 ಕೋಟಿ ರು ಇಳಿಕೆ ಕಂಡು 5,05,070.33 ಕೋಟಿ ರು ತಲುಪಿದೆ.

ಟಾಪ್ 10 ಕಂಪನಿಗಳು
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ಡಿಎಫ್ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ವಿಪ್ರೋ.