For Quick Alerts
ALLOW NOTIFICATIONS  
For Daily Alerts

ಕಳೆದ ವಾರದ ಟಾಪ್ 10 ಮೌಲ್ಯ: HUL, ಟಿಸಿಎಸ್, ರಿಲಯನ್ಸ್‌ಗೆ ಭಾರಿ ನಷ್ಟ!

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಒಟ್ಟಾರೆ ಮೌಲ್ಯಗಳ ಬೆಲೆ 1,42,880.11 ಕೋಟಿ ರು ದಾಟಿದೆ. ಕಳೆದ ವಾರದಲ್ಲಿ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅತ್ಯಧಿಕ ನಷ್ಟ ಅನುಭವಿಸಿವೆ.

 

ಬಿಎಸ್ಇಯಲ್ಲಿ 30 ಷೇರುಗಳು ಸೆನ್ಸೆಕ್ಸ್ 484.33 ಅಂಕ ಅಥವಾ ಶೇ 0.79 ರಷ್ಟು ಇಳಿಕೆ ಕಂಡಿತ್ತು. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಿ ಮೌಲ್ಯ ಉಳಿಸಿಕೊಂಡಿವೆ. ಟಾಪ್ 10 ರಲ್ಲಿ 5 ಕಂಪನಿಗ ಮೌಲ್ಯ ಬದಲಾಗಿದೆ. ರಜೆಗಳ ನಡುವೆ ಷೇರುಪೇಟೆಯಲ್ಲಿ ಹೆಚ್ಚು ವಹಿವಾಟು ಕಂಡು ಬಂದಿವೆ. ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ.

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಸಂಸ್ಥೆ ಮೌಲ್ಯ 45,523.33ಕೋಟಿ ರು ಕುಸಿತ ಕಂಡು 5,76,836.40 ರು ಆಗಿದೆ. ಕಳೆದ ವಾರ ಯಾವ ಕಂಪನಿ ಮೌಲ್ಯ ಏರಿಕೆಯಾಗಿದೆ ಹಾಗೂ ಯಾವ ಕಂಪನಿ ಮೌಲ್ಯ ಕುಸಿದಿದೆ ಎಂಬ ವಿವರ ಮುಂದೆ ಓದಿ..

ಕುಸಿತ ಕಂಡ ಕಂಪನಿಗಳು

ಕುಸಿತ ಕಂಡ ಕಂಪನಿಗಳು

ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 45,126.6 ಕೋಟಿ ರು ಕುಗ್ಗಿ 16,66,427.95 ಕೋಟಿ ರು ಮೌಲ್ಯಕ್ಕೆ ಕುಸಿದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 41,151.94 ಕೋಟಿ ರು ಕುಸಿತ ಕಂಡು 12,94,686.48 ಕೋಟಿ ರು ಮೌಲ್ಯ ಕಂಡಿದೆ. ಬಜಾಜ್ ಫೈನಾನ್ಸ್ 8,890.95 ಕೋಟಿ ರು ಇಳಿಸಿಕೊಂಡು 4,65,576.46ಕೋಟಿ ರುಗೆ ಕುಸಿತ ಕಂಡಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್ 2,187.29 ಕೋಟಿ ರು ಮೌಲ್ಯ ಇಳಿಸಿಕೊಂಡು 9,31,371.72ಕೋಟಿ ರು ತಲುಪಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 30,747.78 ಕೋಟಿ ರು ಏರಿಕೆ ಕಂಡು 4,30,558.09 ಕೋಟಿ ರು ಮೌಲ್ಯಕ್ಕೇರಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 22,248.14 ಕೋಟಿ ರು ಏರಿಕೆ ಕಂಡು 5,26,497.27 ಕೋಟಿ ರು ಆಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಎಚ್‌ಡಿಎಫ್‌ಸಿ 17,015.22 ಕೋಟಿ ರು ಏರಿಕೆ ಕಂಡು 5,24,877.06 ಕೋಟಿ ರು ತಲುಪಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 11,111.14 ಕೋಟಿ ರು ಹೆಚ್ಚಿಸಿಕೊಂಡು 4,48,863.34 ಕೋಟಿ ರು ಮೌಲ್ಯಕ್ಕೇರಿದೆ. ಇನ್ಫೋಸಿಸ್ 1,717.96 ಕೋಟಿ ರು ಇಳಿಸಿಕೊಂಡು 7,29,410.37 ಕೋಟಿ ರು ಮೌಲ್ಯ ಹೊಂದಿದೆ.

ಒಟ್ಟಾರೆ, ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.

English summary

M-cap of five out of top 10 most valued firms down by over Rs 1.42 lakh cr; HUL, RIL most hit

The combined market valuation of five of the top-10 most valued companies eroded by Rs 1,42,880.11 crore last week, with Hindustan Unilever, Reliance IndustriesNSE 0.19 % and Tata Consultancy Services emerging as major laggards.
Story first published: Sunday, October 24, 2021, 16:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X